»   » ಚಿತ್ರೀಕರಣ ಮುಗಿಸಿದ ಪ್ರೀತಂರ ಹಾಗೆ ಸುಮ್ಮನೆ

ಚಿತ್ರೀಕರಣ ಮುಗಿಸಿದ ಪ್ರೀತಂರ ಹಾಗೆ ಸುಮ್ಮನೆ

Subscribe to Filmibeat Kannada

ಕಥೆಗಾರ ಪ್ರೀತಂಗುಬ್ಬಿ ನಿರ್ದೇಶನದ ಚೊಚ್ಚಲ ಚಿತ್ರ ಹಾಗೆ ಸುಮ್ಮನೆಗೆ ಚಿತ್ರೀಕರಣ ಪೂರ್ಣವಾಗಿದೆ. ನಿರ್ದೇಶಕರ ಕನಸಿನ ಕೂಸಾಗಿರುವ ಈ ಚಿತ್ರಕ್ಕೆ 50ದಿನಗಳಲ್ಲಿ ಚಿಕ್ಕಮಗಳೂರು, ಕುಮಟಾ, ಹೊನ್ನಾವರ, ಮೈಸೂರು, ಕಬಿನಿ, ಬೆಂಗಳೂರು ಹಾಗೂ ಮುಂತಾದೆಡೆ ಎರಡು ಹಂತದ ಚಿತ್ರೀಕರಣ ನಡೆದಿದೆ. ಮೊದಲ ಹಂತದಲ್ಲಿ ಮಾತಿನ ಭಾಗ ಚಿತ್ರೀಕರಣವಾದರೆ ದ್ವಿತೀಯ ಹಂತದಲ್ಲಿ ಹಾಡುಗಳು ಚಿತ್ರೀಕೃತವಾಗಿದೆ. ಚಿತ್ರ ಉತ್ತಮವಾಗಿ ಮೂಡಿಬರಲು ಅಪಾರ ಶ್ರಮವಹಿಸಿರುವ ಪ್ರೀತಂಗುಬ್ಬಿ ನಿರ್ಮಾಪಕರ ಶ್ಲಾಘನೆಗೆ ಪಾತ್ರರಾಗಿದ್ದಾರೆ.

ಧರ್ಮ ಪಿಕ್ಚರ್ಸ್ ಲಾಂಛನದಲ್ಲಿ ಮುರುಳಿ, ಪ್ರಮೋದ್, ಕಿರಣ್ ಹಾಗೂ ಸಂತೋಷ್ ನಿರ್ಮಿಸುತ್ತಿರುವ ಹಾಗೆ ಸುಮ್ಮನೆ ಚಿತ್ರಕ್ಕೆ ಪ್ರೀತಂಗುಬ್ಬಿ ಕಥೆ, ಚಿತ್ರಕಥೆ ಬರೆದಿರುವುದಲ್ಲದೆ ನಿರ್ದೇಶನದ ಹೊಣೆಯನ್ನು ಹೊತ್ತಿದ್ದಾರೆ. ಮನೋಮೂರ್ತಿ ಸಂಗೀತವಿರುವ ಈ ಚಿತ್ರಕ್ಕೆ ಕೃಷ್ಣ ಅವರ ಛಾಯಾಗ್ರಹಣವಿದೆ. ಜಯಂತ ಕಾಯ್ಕಿಣಿ ಗೀತರಚನೆ, ಅಶೋಕ್ ಸಂಭಾಷಣೆ, ಮೋಹನ್ ಕಲೆ, ದೀಪು ಎಸ್ ಕುಮಾರ್ ಸಂಕಲನ, ರಾಮು ನಿರ್ಮಾಣನಿರ್ವಹಣೆ ಹಾಗೂ ಯೋಗಿ ಅವರ ಸಹನಿರ್ದೇಶನವಿರುವ ಚಿತ್ರದ ತಾರಾಬಳಗದಲ್ಲಿ ಕಿರಣ್, ಸುಹಾಸಿ, ಚಂದ್ರಶೇಖರ್, ಶರತ್‌ಬಾಬು, ಯಮುನಾ ಮುಂತಾದವರಿದ್ದಾರೆ.

(ದಟ್ಸ್ ಕನ್ನಡಸಿನಿವಾರ್ತೆ)

ಹಾಗೆ ಸುಮ್ಮನೆ ಚಿತ್ರಕ್ಕೆ ಕಾಯ್ಕಿಣಿ ಸಾಹಿತ್ಯ ಸ್ಪರ್ಶ
ಮುಂಗಾರುಮಳೆ ಪ್ರೀತಂ ಗುಬ್ಬಿ ಜತೆ ಹಾಗೇ ಸುಮ್ಮನೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada