ಲೂಸ್ ಮಾದನ ವಿರುದ್ಧ ಮುನಿರತ್ನರ ತುರ್ತು ಸಭೆ

ಅಷ್ಟಕ್ಕೂ ಈ ಮೊದಲು ಆಗಿಹೋದ ಬೆಳವಣಿಗೆ ಇಷ್ಟು. "ಕಲಾವಿದರು ನಿರ್ಮಾಪಕರ ರಕ್ತ ಹೀರುತ್ತಿದ್ದಾರೆ, ಕೋಟಿ ಕೋಟಿ ಕೇಳುತ್ತಾರೆ. ಎಲ್ಲವನ್ನೂ ನಿರ್ಮಾಪಕೇ ನೋಡಿಕೊಳ್ಳಬೇಕು. ಹೀಗಾಗಿ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ನಿರ್ಮಾಪಕ ಕಷ್ಟವನ್ನು ನೋಡುತ್ತಿಲ್ಲ" ಎಂಬರ್ಥದಲ್ಲಿ ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಬಹಿರಂಗ ಹೇಳಿಕೆ ನೀಡಿದ್ದರು.
ಅದಕ್ಕೆ ನಟ ಯೋಗೇಶ್, 'ಹಾಗೇನೂ ಇಲ್ಲ, ನಮ್ಮ ತಂದೆ ಕೂಡ ನಿರ್ಮಾಪಕರೇ. ಕಲಾವಿದನೂ ಆಗಿರುವ ನನಗೆ ನಿರ್ಮಾಪಕರ ಕಷ್ಟವೂ ಗೊತ್ತಿದೆ. ನಾವು ಎಲ್ಲವನ್ನೂ ನಿರ್ಮಾಪಕರ ತಲೆಮೇಲೆ ಹೊರಿಸುವುದಿಲ್ಲ. ಕಲಾವಿದರ ಮೇಲೆ ಮುನಿರತ್ನ ಮಾಡಿರುವ ಆಪಾದನೆಯಲ್ಲಿ ಸತ್ಯಾಂಶವಿಲ್ಲ" ಎಂದು ಮಾಧ್ಯಮದ ಪ್ರಶ್ನೆಯೊಂದಕ್ಕೆ ಉತ್ತರವಾಗಿ ಹೇಳಿದ್ದರು.
ಇದೀಗ ನಟ ಯೋಗೇಶ್ ಹೇಳಿಕೆ ವಿರುದ್ಧ ತಿರುಗಿ ಬಿದ್ದಿರುವ ನಿರ್ಮಾಪಕ ಸಂಘ, ಯೋಗಿ ಮೇಲೆ ಕ್ರಮ ಕೈಗೊಳ್ಳುವ ಕುರಿತು ಯೋಚಿಸಿ ಕರೆದಿರುವ ಇಂದಿನ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಿದೆ. ನಾಲ್ಕು ಗಂಟೆ ನಂತರ ಮುಂದಿನ ಬೆಳವಣಿಗೆ ತಿಳಿದುಬರಲಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











