ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ಪ್ರಕಾಶ್ ರೈ
ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು. ಈಗವರು 'ಕಂಸ' ಎಂಬ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರದ ನಾಯಕ ನಟ ಬೇರಾರು ಅಲ್ಲ ನಮ್ಮ ಪ್ರಕಾಶ್ ರೈ! ಸಿಂಗ್ ಬಾಬು ನಿರ್ದೇಶನದ 'ತಿಪ್ಪಾರಳ್ಳಿ ತರ್ಲೆಗಳು' ಚಿತ್ರವನ್ನು ಪ್ರೇಕ್ಷಕ ಸಾರಾಸಗಟಾಗಿ ತಳ್ಳಿ ಹಾಕಿದ್ದ. ಈಗ 'ಕಂಸ'ನನ್ನು ಕೈಗೆತ್ತಿಕೊಂಡಿದ್ದಾರೆ.
ಕಂಸ ಚಿತ್ರದಲ್ಲಿ ಅಭಿನಯಿಸುವ ಜೊತೆಗೆ ಪ್ರಕಾಶ್ ರೈ ಮತ್ತೊಂದು ಕನ್ನಡ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಡ್ಯುಯಟ್ ಮೂವೀಸ್ ಮತ್ತು ಮೀಡಿಯಾ ಹೌಸ್ ಜಂಟಿಯಾಗಿ ನಿರ್ಮಿಸುತ್ತಿರುವ 'ಪುಟ್ಟಕ್ಕನ ಹೈವೇ' ಚಿತ್ರದಲ್ಲಿ ರೈ ಅವರದು ಪ್ರಮುಖ ಪಾತ್ರ.
ತಮ್ಮ ಪುತ್ರ ಆದಿತ್ಯ ಮುಖ್ಯಭೂಮಿಕೆಯಲ್ಲಿರುವ 'ರಕ್ತಾಕ್ಷ' ಚಿತ್ರ ನಿರ್ಮಾಣ ಹಂತದಲ್ಲಿದೆ. ಸುದೀರ್ಘ ಸಮಯದಿಂದ ಡಬ್ಬಿಯಲ್ಲೇ ಕುಳಿತಿರುವ 'ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್' ಚಿತ್ರ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ಕಂಸ ಚಿತ್ರದ ಉಳಿದ ತಾರಾಬಳಗ ಹಾಗೂ ತಂತ್ರಜ್ಞರ ವಿವರಗಳು ಇನ್ನಷ್ಟೇ ತಿಳಿಯಬೇಕಾಗಿದೆ.
ಪ್ರಕಾಶ್ ರೈ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಕಂಸ ಪುಟ್ಟಕ್ಕನ ಹೈವೇ prakash raj s vrajendra singh babu kamsa thipparahalli tharelegalu


Click it and Unblock the Notifications