»   » ಮಲಯಾಳಂನಲ್ಲಿ ತೆನೆ ಹೊತ್ತ ಬೆಡಗಿ ಪೂಜಾಗಾಂಧಿ

ಮಲಯಾಳಂನಲ್ಲಿ ತೆನೆ ಹೊತ್ತ ಬೆಡಗಿ ಪೂಜಾಗಾಂಧಿ

Posted By:
Subscribe to Filmibeat Kannada

ಪೂಜಾಗಾಂಧಿ ಕರ್ನಾಟಕದಲ್ಲಿ ಜೆಡಿಎಸ್‌ನ ತೆನೆ ಹೊರುತ್ತಿರುವುದು ಗೊತ್ತೇ ಇದೆ. ಈ ಹೊರೆಯ ಮೇಲೆ ಸಿನಿಮಾ ಹೊರೆಗಳನ್ನೂ ಹೊತ್ತು ಸಾಗುತ್ತಿದ್ದಾರೆ. ಇದು ಸಾಲದು ಎಂಬಂತೆ ಈಗ ಮಲಯಾಳಂನ ಮತ್ತೊಂದು ಹೊರೆಯನ್ನು ಕಂಕುಳಲ್ಲಿ ಎತ್ತಿಕೊಂಡಿದ್ದಾರೆ.

ಪೂಜಾಗಾಂಧಿ ಅಭಿನಯಿಸುತ್ತಿರುವ ಮಲಯಾಳಂ ಚಿತ್ರದ ಹೆಸರು ವಿಚಿತ್ರವಾಗಿದೆ. 'ಮ್ಯಾಡ್ ಡ್ಯಾಡಿ' ಎಂಬುದು ಚಿತ್ರದ ಹೆಸರು. ಈ ಚಿತ್ರದಲ್ಲಿ ಗ್ಲಾಮರ್ ಜೊತೆ ಅಭಿನಯಕ್ಕೂ ಸ್ಥಳಾವಕಾಶ ಇರುವ ಕಾರಣ ಚಿತ್ರಕ್ಕೆ ಸಹಿ ಹಾಕಿದ್ದೇನೆ ಎನ್ನುತ್ತಾರೆ ಪೂಜಾ.

'ಮ್ಯಾಡ್ ಡ್ಯಾಡಿ' ಚಿತ್ರದ ಬಳಿಕ ಮಲಯಾಳಂನಲ್ಲಿ ಇನ್ನೊಂದಷ್ಟು ನಿರ್ಮಾಪಕರು ಕಾಲ್‌ಶೀಟ್ ಹಿಡಿದು ಬಂದರಂತೆ. ಅವರಿಗೆಲ್ಲಾ ಪೂಜಾಗಾಂಧಿ ಕ್ಯಾರೆ ಅನ್ನಲಿಲ್ಲವಂತೆ. ಕನ್ನಡ ಚಿತ್ರಗಳಿಗಷ್ಟೇ ತಮ್ಮ ಪ್ರಾಮುಖ್ಯತೆ ಎಂದರಂತೆ.

ಇನ್ನೇನು ಬಿಡುಗಡೆಗೆ ಸಿದ್ಧವಾಗಿರುವ ದಂಡುಪಾಳ್ಯ ಚಿತ್ರದ ಬಗ್ಗೆ ಪೂಜಾಗಾಂಧಿ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ತಮ್ಮ ಪಾತ್ರ ನಿಸ್ಸಂದೇಹವಾಗಿ ಪ್ರಶಸ್ತಿ ತಂದುಕೊಡುವಂತಹದ್ದು ಎಂಬ ವಿಶ್ವಾಸದಲ್ಲಿದ್ದಾರೆ. ಆದರೆ ಪ್ರಶಸ್ತಿಗಾಗಿಯೇ ಸಿನಿಮಾ ಎಂಬ ಅಭಿಪ್ರಾಯವನ್ನು ಸುತಾರಾಂ ಒಪ್ಪಲ್ಲ ಎನ್ನುವ ಅವರು ಗಿರೀಶ್ ಕಾಸರವಳ್ಳಿ ಚಿತ್ರದಲ್ಲಿ ಅಭಿನಯಿಸಬೇಕೆಂಬ ಆಸೆಯನ್ನೂ ಇಟ್ಟುಕೊಂಡಿದ್ದಾರೆ! (ಒನ್‌ಇಂಡಿಯಾ ಕನ್ನಡ)

English summary
After joining a political party Kannada actress Pooja Gandhi busy in movie also. She signed Malayalam film Mad Dad, the role is rather glamorous, which Pooja says is a welcome change from what she's been doing recently.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X