ಸದ್ಯದಲ್ಲೇ ನಿಮ್ಮ ಮುಂದೆ ಪ್ರೀತಿಯಿಂದ ರಮೇಶ್
'ಪ್ರೀತಿಯಿಂದ ರಮೇಶ್' ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ 'ಯು' ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಸದ್ಯದಲ್ಲೇ ನೋಡುಗರಿಗೆ ಲಭ್ಯವಾಗಲಿದ್ದು ಈ ಚಿತ್ರವನ್ನು ಶಾಂತ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಿಸಲಾಗಿದೆ.
ಇದು ಇಂಟರ್ ನೆಟ್ ಯುಗ. ಮನುಷ್ಯನಿಗೆ ಬೇಕಾದ ಯಾವುದೇ ಮಾಹಿತಿ ನೀಡುವಲ್ಲಿ ಅಂತರ್ಜಾಲ ಸಹಾಯಕಾರಿ. ನಾಯಕ ರಮೇಶ್ ಈ ಚಿತ್ರದಲ್ಲಿ ಸಾಫ್ಟ್ ವೇರ್ ಉದ್ಯೋಗಿ. ನಾಯಕ ತನ್ನ ಪ್ರೀತಿಯನ್ನು ಅಂತರ್ಜಾಲದ ಮೂಲಕ ಹುಡುಕುವುದೇ ಚಿತ್ರದ ಕಥಾ ಹಂದರ.ಹಲವು ಚಿತ್ರಗಳನ್ನು ನಿರ್ದೇಶಿಸಿ ಅನುಭವವಿರುವ ಗುಣಕುಮಾರ್ ಈ ಚಿತ್ರದ ನಿರ್ದೇಶಕರು. ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ.
ಎ.ಸಿ.ಮಹೇಂದರ್ ಛಾಯಾಗ್ರಹಣ, ಎ.ಟಿ.ರವೀಶ್ ಸಂಗೀತ, ರವಿ ಸಂಕಲನ, ವಿಜಯ್‌ಪ್ರಸಾದ್ ಸಂಭಾಷಣೆ, ಕೆ.ಕಲ್ಯಾಣ್, ನಾಗೇಂದ್ರ ಪ್ರಸಾದ್ ಹಾಗೂ ಶಿವನಂಜೇಗೌಡರ ಗೀತರಚನೆಯಿರುವ ಚಿತ್ರದ ತಾರಾಬಳಗದಲ್ಲಿ ರಮೇಶ್, ರಮನೀತೋ ಚೌಧರಿ, ಅನಂತನಾಗ್, ಸುಮಾಗುಹಾ, ಕಿರಣ್ ಮುಂತಾದವರಿದ್ದಾರೆ.
ಪ್ರೀತಿಯಿಂದ ರಮೇಶ್ ರಮೇಶ್ ಅರವಿಂದ್ ರಮನೀತೋ ಚೌದರಿ ಅನಂತನಾಗ್ ಸುಮಾ ಗುಹ preethiyinda ramesh ramesh aravind ramanithu chaudhary anant nag suma guha


Click it and Unblock the Notifications