'ಹೂ' ನಿರ್ಮಾಪಕ ದಿನೇಶ್ ಗಾಂಧಿ ಈಗ ಹೀರೋ
ಕ್ರೇಜಿಸ್ಟಾರ್ ರವಿಚಂದ್ರನ್ ನಾಯಕನಟನಾಗಿ ಅಭಿನಯಿಸಿದ ಹೂ ಚಿತ್ರದಚಿತ್ರದ ನಿರ್ಮಾಪಕ ದಿನೇಶ್ ಗಾಂಧಿ ಈಗ ಸ್ವತಃ ತಾವೇ ಅಭಿನಯಿಸಲು ಮುಂದಾಗಿದ್ದಾರೆ. ದಿನೇಶ್ ಬಣ್ಣ ಹಚ್ಚಿಕೊಳ್ಳುತ್ತಿರುವ ಮೊದಲ ಚಿತ್ರ ಇದಾಗಲಿದೆ. ಇನ್ನೂ ಶೀರ್ಷಿಕೆ ಇಡದ ಈ ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವವರು ಎಚ್ ವಾಸು.
ಆದರೆ ಈ ಬಾರಿ ಚಿತ್ರದ ನಿರ್ಮಾಣ ಜವಾಬ್ದಾರಿಯನ್ನು ಎಂ ಜಿ ರಾಮಮೂರ್ತಿ ಅವರಿಗೆ ವಹಿಸಿದ್ದಾರೆ. ಈ ಹಿಂದೆಯೂ ದಿನೇಶ್ ಗಾಂಧಿ ಬಣ್ಣ ಹಚ್ಚಿಕೊಂಡಿದ್ದರು. ಆದರೆ ಅವೆಲ್ಲಾ ಕಾಂಜಿ ಪಿಂಜಿ ಪಾತ್ರಗಳು. ಚೆಲುವೆ, ವೀರ ಮದಕರಿ, ಮಲ್ಲಿಕಾರ್ಜುನ ಚಿತ್ರಗಳಲ್ಲಿ ದಿನೇಶ್ ಗಾಂಧಿ ಅಭಿನಯಿಸಿದ್ದಾರೆ.
ವೀರ ಮದಕರಿ ಬಳಿಕ ದಿನೇಶ್ ಗಾಂಧಿ ನಿರ್ಮಿಸಿದ ಹೂ ಚಿತ್ರ ಬಾಕ್ಸಾಫೀಸಲ್ಲಿ ಸಕ್ಸಸ್ ಆಗಿತ್ತು. ಹೂ ಚಿತ್ರದ ವಿಮರ್ಶೆಯನ್ನು 'ಸರಿಯಾಗಿ ಬರೆದಿಲ್ಲ' ಎಂದು ಬೆಂಗಳೂರು ಮಿರರ್ ಪತ್ರಿಕೆಯ ಸಿನಿ ಪತ್ರಕರ್ತ ಶ್ಯಾಮ್ ಗೆ ಧಮಕಿ ಹಾಕಿದ್ದ ದಿನೇಶ್ ಕೆಲ ದಿನಗಳ ಹಿಂದೆ ವಿವಾದಕ್ಕೆ ಕಾರಣರಾಗಿದ್ದರು. ಬಳಿಕ ಶ್ಯಾಮ್ ಅವರನ್ನು ಕ್ಷಮೆ ಕೇಳುವ ಮೂಲಕ ವಿವಾದ ತಣ್ಣಗಾಗಿತ್ತು.


Click it and Unblock the Notifications











