ಪುನೀತ್, ರಾಧಿಕಾ ಪಂಡಿತ್‌ಗೆ ಸುವರ್ಣ ಫಿಲಂ ಪ್ರಶಸ್ತಿ

By Rajendra

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ರಾಧಿಕಾ ಪಂಡಿತ್ ಸುವರ್ಣಅತ್ಯುತ್ತಮ ನಟ ನಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಜಾಕಿ ಹಾಗೂ ಕೃಷ್ಣನ್ ಲವ್ ಸ್ಟೋರಿ ಚಿತ್ರದಲ್ಲಿನ ಅಭಿನಯಕ್ಕಾಗಿ ಪುನೀತ್ ಹಾಗೂ ರಾಧಿಕಾಗೆ ಈ ಪ್ರಶಸ್ತಿ ಸಂದಿದೆ. ಜೂನ್ 25ರಂದು ಸುವರ್ಣ ಫಿಲಂ ಅಕಾರ್ಡ್ಸ್ 2011 ಪ್ರದಾನ ಮಾಡಲಾಗುತ್ತಿದ್ದು ಈ ಕಾರ್ಯಕ್ರಮ ಸುವರ್ಣ ವಾಹಿನಿಯಲ್ಲಿ ಆಗಸ್ಟ್ ತಿಂಗಳಲ್ಲಿ ಪ್ರಸಾರವಾಗಲಿದೆ.

2010ನೇ ಸಾಲಿನಲ್ಲಿ ಸರಿಸುಮಾರು 132 ಚಿತ್ರಗಳನು ಬಿಡುಗಡೆಯಾಗಿದ್ದವು. ಸೂರಿ ನಿರ್ದೇಶನದ 'ಜಾಕಿ' ಚಿತ್ರ ಒಟ್ಟು 7 ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಅತ್ಯುತ್ತಮ ನಟ (ಪುನೀತ್ ರಾಜ್ ಕುಮಾರ್), ಅತ್ಯುತ್ತಮ ಪೋಷಕ ನಟಿ (ಹರ್ಷಿಕಾ ಪೂಣಚ್ಚ), ಅತ್ಯುತ್ತಮ ಛಾಯಾಗ್ರಾಹಕ (ಸತ್ಯ ಹೆಗಡೆ), ಅತ್ಯುತ್ತಮ ಕಲಾ ನಿರ್ದೇಶನ (ಶಶಿಧರ ಅಡಪ), ಅತ್ಯುತ್ತಮ ಸಂಗೀತ ನಿರ್ದೇಶಕ (ವಿ ಹರಿಕೃಷ್ಣ) ಹಾಗೂ ಅತ್ಯುತ್ತಮ ನೃತ್ಯ ಸಂಯೋಜನೆ (ಇಮ್ರಾನ್).

'ಕೃಷ್ಣನ್ ಲವ್ ಸ್ಟೋರಿ' ಚಿತ್ರ ನಾಲ್ಕು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದು, ಅತ್ಯುತ್ತಮ ನಿರ್ದೇಶಕ (ಶಶಾಂಕ್), ಅತ್ಯುತ್ತಮ ನಟಿ (ರಾಧಿಕಾ ಪಂಡಿತ್), ಅತ್ಯುತ್ತಮ ಹಿನ್ನೆಲೆ ಗಾಯಕ ಹಾಗೂ ಗಾಯಕಿ (ರಾಜೇಶ್ ಮತ್ತು ಲಕ್ಷ್ಮಿ). 'ಪಂಚರಂಗಿ' ಚಿತ್ರವು ಎರಡು ಪ್ರಶಸ್ತಿ ಪಡೆದಿದೆ. ಅತ್ಯುತ್ತಮ ಹಾಸ್ಯನಟ (ರಾಜು ತಾಳಿಕೋಟೆ) ಹಾಗೂ ಅತ್ಯುತ್ತಮ ಸಂಭಾಷಣೆ (ಯೋಗರಾಜ್ ಭಟ್). 'ಸೂಪರ್' ಚಿತ್ರ ಕೇವಲ ಒಂದೇ ಒಂದು ಅತ್ಯುತ್ತಮ ಸಂಕಲನಕಾರ (ತಿರುಪತಿ ರೆಡ್ಡಿ) ಪ್ರಶಸ್ತಿಗೆ ತೃಪ್ತಿ ಪಟ್ಟಿದೆ.

ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡುವ ಹೊಣೆಯನ್ನು ನಟ, ನಿರ್ದೇಶಕ ಹಾಗೂ ನಿರ್ಮಾಪಕ ದ್ವಾರಕೀಶ್, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟಿ ತಾರಾ, ಪತ್ರಕರ್ತ, ಲೇಖಕ ಜೋಗಿ ಹಾಗೂ ಮಿಲನ ಪ್ರಕಾಶ್ ಹೊತ್ತಿದ್ದರು. ಸುವರ್ಣ ಫಿಲಂ ಪ್ರಶಸ್ತಿ 2011ರ ಪಟ್ಟಿ ಹೀಗಿದೆ.

ಅತ್ಯುತ್ತಮ ಚಿತ್ರ: ಜಾಕಿ
ಅತ್ಯುತ್ತಮ ನಿರ್ದೇಶಕ : ಶಶಾಂಕ್ (ಕೃಷ್ಣನ್ ಲವ್ ಸ್ಟೋರಿ)
ಅತ್ಯುತ್ತಮ ನಟ: ಪುನೀತ್ ರಾಜ್ ಕುಮಾರ್ (ಜಾಕಿ)
ಅತ್ಯುತ್ತಮ ನಟಿ: ರಾಧಿಕಾ ಪಂಡಿತ್ (ಕೃಷ್ಣನ್ ಲವ್ ಸ್ಟೋರಿ)
ಅತ್ಯುತ್ತಮ ಪ್ರಥಮ ಪರಿಚಯ ನಟ: ಸತ್ಯ (ಗುಂಡ್ರಗೋವಿ)
ಅತ್ಯುತ್ತಮ ಪ್ರಥಮ ಪರಿಚಯ ನಟ: ಮೇಘನಾ ರಾಜ್ (ಪುಂಡ)
ಅತ್ಯುತ್ತಮ ಋಣಾತ್ಮಕ ಪಾತ್ರ: ಅವಿನಾಶ್ (ಪೃಥ್ವಿ)
ಅತ್ಯುತ್ತಮ ಹಾಸ್ಯ ನಟ: ರಾಜು ತಾಳಿಕೋಟೆ (ಪಂಚರಂಗಿ)
ಅತ್ಯುತ್ತಮ ಪೋಷಕ ನಟ: ರಂಗಾಯಣ ರಘು (ಮೊದಲಾಸಲ)
ಅತ್ಯುತ್ತಮ ಪೋಷಕ ನಟಿ: ಹರ್ಷಿಕಾ ಪೂಣಚ್ಚ (ಜಾಕಿ)
ಅತ್ಯುತ್ತಮ ಸಂಭಾಷಣೆ: ಯೋಗರಾಜ್ ಭಟ್ (ಪಂಚರಂಗಿ)
ಅತ್ಯುತ್ತಮ ಛಾಯಾಗ್ರಹಣ: ಸತ್ಯ ಹೆಗಡೆ (ಜಾಕಿ)
ಅತ್ಯುತ್ತಮ ಸಂಕಲನ : ತಿರುಪತಿ ರೆಡ್ಡಿ (ಸೂಪರ್)
ಅತ್ಯುತ್ತಮ ಕಲಾ ನಿರ್ದೇಶನ: ಶಶಿಧರ ಅಡಪ (ಜಾಕಿ)
ಅತ್ಯುತ್ತಮ ಸಾಹಸ: ಮಾಸ್ ಮಾದ (ಕರಿ ಚಿರತೆ)
ಅತ್ಯುತ್ತಮ ಸಂಗೀತ ನಿರ್ದೇಶಕ: ವಿ ಹರಿಕೃಷ್ಣ (ಜಾಕಿ)
ಅತ್ಯುತ್ತಮ ಗೀತಸಾಹಿತ್ಯ: ರಾಘವೇಂದ್ರ ಕಾಮತ್ (ಮುಂಜಾನೆ ಮಂಜಲ್ಲಿ ಚಿತ್ರ ಜಸ್ಟ್ ಮಾತ್ ಮಾತಲ್ಲಿ)
ಅತ್ಯುತ್ತಮ ಗಾಯಕ : ರಾಜೇಶ್ ಕೃಷ್ಣನ್ (ನೀ ಆಡದ ಮಾತು...ಕೃಷ್ಣನ್ ಲವ್ ಸ್ಟೋರಿ)
ಅತ್ಯುತ್ತಮ ಗಾಯಕಿ: ಲಕ್ಷ್ಮಿ (ಹೃದಯವೆ ಬಯಸಿದೆ ನಿನ್ನನೆ...ಕೃಷ್ಣನ್ ಲವ್ ಸ್ಟೋರಿ)
ಅತ್ಯುತ್ತಮ ನೃತ್ಯ ನಿರ್ದೇಶನ : ಇಮ್ರಾನ್ (ಜಾಕಿ ಜಾಕಿ ಜಾಕಿ)

ವಿಶೇಷ ಪ್ರಶಸ್ತಿಗಳು

ಹೊಸ ಪ್ರತಿಭೆ: ಮೊದಲಾಸಲದ ನಿರ್ದೇಶಕ ಪುರುಷೋತ್ತಮ್
ವರ್ಷದ ಎಂಟರ್‌ಟೈನರ್: ಶಿವರಾಜ್ ಕುಮಾರ್
ಕನ್ನಡ ಚಿತ್ರರಂಗಕ್ಕೆ ಕೊಡುಗೆ: ಪಾರ್ವತಮ್ಮ ರಾಜ್ ಕುಮಾರ್
ಅಂಬರೀಷ್‌ಗೆ ವಿಶೇಷ ಪ್ರಶಸ್ತಿ

ಫೇವರಿಟ್ ಪ್ರಶಸ್ತಿಗಳು (ಅಭಿಮಾನಿಗಳ ಆಯ್ಕೆ)

ಫೇವರಿಟ್ ನಾಯಕ ನಟ: ವಿಷ್ಣುವರ್ಧನ್
ಫೇವರಿಟ್ ನಾಯಕಿ: ರಮ್ಯಾ (ಜಸ್ಟ್ ಮಾತ್ ಮಾತಲ್ಲಿ)
ಫೇವರಿಟ್ ನಿರ್ದೇಶಕ: ಉಪೇಂದ್ರ (ಸೂಪರ್)
ಫೇವರಿಟ್ ಚಿತ್ರ: ಸೂಪರ್
ಫೇವರಿಟ್ ಹಾಡು : ಗಾಳಿಯೇ ನೋಡು ಬಾ (ಸಂಚಾರಿ)
(ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Powerstar Puneet Rajkumar and actress Radhika Pandit, who recently appeared together in the movie Hudugru, have won the Best Actors Suvarna Film Awards for their performance in Jackie and Krishnan Love Story respectively.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X