»   » ಪಿರಿಮಿಡ್ ನಿಂದ ಸಾವಿರಾರು ಚಿತ್ರಪರದೆಗಳ ನಿರ್ಮಾಣ

ಪಿರಿಮಿಡ್ ನಿಂದ ಸಾವಿರಾರು ಚಿತ್ರಪರದೆಗಳ ನಿರ್ಮಾಣ

Subscribe to Filmibeat Kannada

ಭಾರತದ ಮನರಂಜನಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಪಿರಿಮಿಡ್ ಸೈಮೀರಾ ಸಂಸ್ಥೆ ಭಾರೀ ಯೋಜನೆಗಳನ್ನು ರೂಪಿಸಿದೆ. ದೇಶಾದಾದ್ಯಂತ ಸುಮಾರು 2ಸಾವಿರಕ್ಕೂ ಅಧಿಕ ಚಲನಚಿತ್ರ ಪ್ರದರ್ಶನ ಪರದೆಗಳನ್ನು ಹೊರತರಲು ಇಚ್ಛಿಸಿದೆ. ಇದರಲ್ಲಿ ಮಲ್ಟಿಫೆಕ್ಸ್ ಪರದೆಗಳ ಜತೆಗೆ, 70ಮಿಮಿ ಪರದೆ ಕೂಡ ಇರುತ್ತದಂತೆ. ಯೋಜನೆಯನ್ನು ಪೂರ್ಣಗೊಳಿಸಲು 2010 ರ ಮಿತಿಯನ್ನು ಸಂಸ್ಥೆ ಹಾಕಿಕೊಂಡಿದೆ. ಇದರಲ್ಲಿ 1,200 ಸ್ಕ್ರೀನ್ ಗಳು ದಕ್ಷಿಣ ಭಾರತಕ್ಕೆ ಲಭಿಸಲಿರುವುದು ವಿಶೇಷ.

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಶೇ. 60 ರಿಂದ 65 ರಷ್ಟು ಪಾಲು ಹೊಂದಿರುವ ಪಿರಿಮಿಡ್ ಸಂಸ್ಥೆ ಚೆನ್ನೈ ಮೂಲದ್ದಾಗಿದೆ.ಬೆಂಗಳೂರಿನಲ್ಲಿ ಕೂಡ ಚಿತ್ರಮಂದಿರಗಳ ನವೀಕರಣ ಹಾಗೂ ಮಲ್ಟಿಫೆಕ್ಸ್ ನಿರ್ಮಾಣಕ್ಕೆ ಸಂಸ್ಥೆ ಮುಂದಾಗಿದೆ. ಕಸ್ತೂರಿ ವಾಹಿನಿಯ ಅದ್ದೂರಿ ಪ್ರಶಸ್ತಿ ಸಮಾರಂಭದ ಪ್ರಾಯೋಜಕತ್ವವನ್ನು ವಹಿಸಿಕೊಂಡಿದ್ದ ಸಂಸ್ಥೆ ದಕ್ಷಿಣ ಭಾರತದಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳುವತ್ತ ಸಾಗಿದೆ.

ಚೀನಿ ಸಿನಿಮಾದತ್ತ ಕಣ್ಣು: ನಕಲಿ ಚಿತ್ರಗಳ ಹಾವಳಿಯಿಂದ ಕೂಡಿರುವ ಚೀನಾ ದೇಶದ ಮನರಂಜನಾ ಕ್ಷೇತ್ರಕ್ಕೆ ಕಾಲಿರಿಸಿ ಅದರ ದಿಕ್ಕನ್ನು ಬದಲಿಸುವ ಗುರಿಯನ್ನು ಪಿರಿಮಿಡ್ ಸಂಸ್ಥೆ ಹೊಂದಿದೆ. ಈ ಬಗ್ಗೆ ಅಲ್ಲಿನ ಸ್ಪೈಜ್ ಟಿವಿ( Spize TV ) ಜತೆ ಒಪ್ಪಂದ ಮಾಡಿಕೊಂಡಿದೆ. ಸುಮಾರು 100 ಟಿವಿ ವಾಹಿನಿಗಳನ್ನು ಹೊರತರುವ ಉತ್ಸಾಹದಲ್ಲಿದೆ. ತನ್ನೆಲ್ಲಾ ಯೋಜನೆಗಳಿಗೆ ಸುಮಾರು 4ರಿಂದ4.5 ಬಿಲಿಯನ್ ಹಣವನ್ನು ವಿವಿಧ ಹಂತದಲ್ಲಿ ಹೂಡಿಕೆ ಮಾಡಲಿದೆ. 2006-07 ಆರ್ಥಿಕ ವರ್ಷದಲ್ಲಿ 1 ಬಿಲಿಯನ್ ಆದಾಯ ಗಳಿಸಿದ ಪಿರಿಮಿಡ್ ಸಂಸ್ಥೆ ಮುಂಬರುವ ವರ್ಷಗಳಲ್ಲಿ 7 ರಿಂದ 8ಬಿಲಿಯನ್ ರೂ ಗಳಿಸುವ ನಿರೀಕ್ಷೆ ಹೊಂದಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪಿ.ಎಸ್ .ಸ್ವಾಮಿನಾಥನ್ ಹೇಳಿದ್ದಾರೆ.

(ಐಎ ಎನ್ ಎಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada