»   » ಜನವರಿ 2ರಿಂದ ಸೂಪರ್ ಸ್ಟಾರ್ ರಜನಿ ಹೊಸ ಚಿತ್ರ

ಜನವರಿ 2ರಿಂದ ಸೂಪರ್ ಸ್ಟಾರ್ ರಜನಿ ಹೊಸ ಚಿತ್ರ

Posted By:
Subscribe to Filmibeat Kannada

ಸೂಪರ್ ಸ್ಟಾರ್ ರಜನಿಕಾಂತ್ ಅವರ ಹೊಸ ಚಿತ್ರಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಈ ಚಿತ್ರದ ಮೂಲಕ ರಜನಿ ಕಿರಿಯ ಪುತ್ರಿ ಸೌಂದರ್ಯ ಭಾರತೀಯ ಚಿತ್ರರಂಗಕ್ಕೆ ನಿರ್ದೇಶಕಿಯಾಗಿ ಪರಿಚಯವಾಗಲಿದ್ದಾರೆ. ತಮಿಳಿನಲ್ಲಿ ಈ ಚಿತ್ರಕ್ಕೆ 'ಕೊಚ್ಚಡಯಾನ್' ಎಂದು ಹೆಸರಿಡಲಾಗಿದೆ.

'ರಾಣಾ' ಚಿತ್ರ ಆರಂಭವಾದ ನಂತರ ರಜನಿ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆದು, ವಿಶ್ರಾಂತಿ ತೆಗೆದುಕೊಂಡಿದ್ದು ಗೊತ್ತೇ ಇದೆ. ಹಾಗಾಗಿ ಆ ಚಿತ್ರವನ್ನು ಸದ್ಯಕ್ಕೆ ಪಕ್ಕಕ್ಕಿಡಲಾಗಿದೆ. ಈ ಬಾರಿ ಕೆ ಎಸ್ ರವಿಕುಮಾರ್ ಅವರ ಕತೆಯ ಆಧಾರವಾಗಿ 'ಕೊಚ್ಚಡಯಾನ್' ಚಿತ್ರ ಸೆಟ್ಟೇರುತ್ತಿದೆ.

ಜನವರಿ 2ರಿಂದ ಚೆನ್ನೈನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಈ ಚಿತ್ರದಲ್ಲಿ ನಾಯಕಿ ಅನುಷ್ಕಾ, ಅಸಿನ್ ಎಂದು ನಿರ್ಧರಿಸಲಾಗಿದೆ. ಎ ಆರ್ ರೆಹಮಾನ್ ಅವರ ಸಂಗೀತ ಸಂಯೋಜನೆ ಹಾಗೂ ರಾಜೀವ್ ಮೆನನ್ ಛಾಯಾಗ್ರಹಣ ಚಿತ್ರಕ್ಕಿರುತ್ತದೆ. (ಏಜೆನ್ಸೀಸ್)

English summary
The most expected movie of the year 2012 is Super Star Rajinikanth Kochadaiyaan, which getting ready to start shooting in 2nd January. Rajini’s Daughter Soundarya Ashwin is directing the film and Director KS Ravikumar will be handling the story, screenplay and dialogues.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada