ಜಯಂ ರವಿ ಮನೆಗೆ ದಿಢೀರ್ ಭೇಟಿಕೊಟ್ಟ ರಜನಿಕಾಂತ್

ಜಯಂ ಚಿತ್ರದ ನಟ ರವಿ, ಜಯಂ ರವಿ ಎಂದೇ ಖ್ಯಾತಿ ಪಡೆದವರು. ಇಂದು (ನವೆಂಬರ್ 29), ರವಿ ತಂದೆ ಎಡಿಟರ್ ಮೋಹನ್ ಅವರ 70ನೇ ಜನುಮದಿನ. ಆದರೆ ಇಂದು ಬೆಳಿಗ್ಗೆ ಅವರಿಗೆ ದೊಡ್ಡದೊಂದು ಆಶ್ಚರ್ಯ ಕಾದಿತ್ತು. ತಮಿಳು ಸೂಪರ್ ಸ್ಟಾರ್ ರಜನಿಕಾಂತ್, ಜಯಂ ರವಿ ಮನೆಗೆ ದಿಢೀರ್ ಭೇಟಿ ನೀಡಿ ಅವರ ತಂದೆಯ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಅಚ್ಚರಿ ಮೂಡಿಸಿದರು.

ರಜನಿಕಾಂತ್ ಭೇಟಿಯನ್ನು ಸ್ವತಃ ಜಯಂ ರವಿ ಸಾಮಾಜಿಕ ತಾಣ 'ಟ್ವಿಟ್ಟರ್' ನಲ್ಲಿ ಟ್ವೀಟ್ ಮಾಡುವ ಮೂಲಕ ದೃಢೀಕರಿಸಿದ್ದಾರೆ. ರಜನಿ ಸರ್ ದಿಢೀರ್ ಬೇಟಿಯಿಂದ ನಮಗೆಲ್ಲ ಆಶ್ಚರ್ಯ ಹಾಗೂ ಸಂತೋಷ ಒಟ್ಟಿಗೆ ಆಯ್ತು. ಮೂರು ದಶಕಗಳಿಗೂ ಮೀರಿದ ಸ್ನೇಹ ಎಡಿಟರ್ ರವಿ ಹಾಗೂ ರಜನಿ ಅವರದು. ಜನುಮ ದಿನ ಮರೆಯದೇ ಹೋಗಿ ಶುಭಾಶಯ ಕೋರಿದ ರಜನಿಯ ದೊಡ್ಡ ಗುಣಕ್ಕೆ ದೊಡ್ಡ ಸಲಾಮ್" ಅಂದಿದ್ದಾರೆ ರವಿ.

80 ಮತ್ತು 90 ರ ದಶಕದಲ್ಲಿ ರಜನಿ ಹಾಗೂ ಎಡಿಟರ್ ಮೋಹನ್ ಒಟ್ಟಿಗೆ ಸಾಕಷ್ಟು ಚಿತ್ರದಲ್ಲಿ ಕೆಲಸ ಮಾಡಿದ್ದರು. ಅಂದಿನಿಂದ ಇಂದಿನವರೆಗೂ ಅವರ ಸ್ನೇಹ ಸೌಹಾರ್ದತೆ ಮುಂದುವರಿದಿದೆ ಎಂಬುದಕ್ಕೆ ಈ ಬೇಟಿ ಸಾಕ್ಷಿ. ಇದೀಗ ರಜನಿ ಅನಾರೋಗ್ಯದಿಂದ ಸಂಪೂರ್ಣ ಚೇತರಿಸಿಕೊಂಡಿದ್ದು ಅವರ ಮುಂದಿನ ಸಿನಿಮಾ 'ಕೋಚದೈಯಾನ್' ಗೆ ರೆಡಿಯಾಗುತ್ತಿದ್ದಾರೆ. (ಏಜೆನ್ಸೀಸ್)

More from Filmibeat

English summary
Rajinikanth surprised Jayam Ravi and his family members after he visited his residence to wish the actors father, editor Mohan on his 70th birthday. The news has been confirmed by Ravi himself on the social networking site, Twitter.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X