ಉಪಾಸನಾಗೆ ರಾಮ್ ಚರಣ್ ನಿಶ್ಚಿತಾರ್ಥದ ಗಿಫ್ಟ್!

By Rajendra

Upasana Kamineni
ತೆಲುಗು ಮೆಗಾಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ನಿಶ್ಚಿತಾರ್ಥ ಡಿಸೆಂಬರ್ 1ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಚರಣ್ ತನ್ನ ಭಾವಿ ಪತ್ನಿಗೆ ನಿಶ್ಚಿತಾರ್ಥದ ವಿಶೇಷ ಗಿಫ್ಟ್ ತರಿಸಿದ್ದಾರೆ. ಮದುವೆ ಸೀರೆಗಳಲ್ಲಿ ಮೈಸೂರು ರೇಷ್ಮೆ ಸೀರೆಯಷ್ಟೇ ಅಂದಚೆಂದ, ವರ್ಣ ವೈವಿಧ್ಯತೆ ಧರ್ಮಾವರಂ ಸೀರೆಗಳಿಗೂ ಇದೆ. ನಿಶ್ಚಿತಾರ್ಥಕ್ಕೆಂದೇ ವಿಶೇಷ ಸೀರೆಯನ್ನು ಉಪಾಸನಾಗೆ ರಾಮ್ ಚರಣ್ ಮಾಡಿಸಿದ್ದಾನೆ. ಅದರ ಬೆಲೆ ಕೇವಲ ರು.45 ಸಾವಿರ.

ಸರಿಸುಮಾರು ಮೂವತ್ತು ದಿನಗಳ ಕಾಲ ಕೋಲ್ಕತ್ತಾದ ಆರು ಮಂದಿ ಕೈಮಗ್ಗ ಕಾರ್ಮಿಕರು ಈ ವಿಶೇಷ ಸೀರೆಯನ್ನು ನೇಯ್ದಿದ್ದಾರೆ. ಈ ಸೀರೆಗೆ ಸ್ವರ್ಣ ಹಂಸಗಳ ರೇಷ್ಮೆ ಸೀರೆ ಎಂದು ಹೆಸರಿಟ್ಟಿದ್ದಾರೆ. ಸೀರೆಯ ಮೇಲೆ ಸ್ವರ್ಣ ಲೇಪಿತ ಹಂಸಗಳ ವಿನ್ಯಾಸ, ಕೆಂಪು, ಹಳದಿ, ಶ್ವೇತ ವರ್ಣಗಳ ಮಿಶ್ರಣ, ಎಂಬತ್ತು ಹರಳುಗಳೊಂದಿಗೆ ರೂಪಿಸಲಾಗಿದೆ.

ಹೈದರಾಬಾದ್ ಗಂಡಿಪೇಟ ಸಮೀಪದ ಗೋಲ್ಕಂಡ ರೆಸಾರ್ಟ್‌ನಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ನೆರವೇರಲಿದೆ. ಈ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಆಂಧ್ರಪ್ರದೇಶದ ರಾಜ್ಯಪಾಲರು ಸೇರಿದಂತೆ ಬಿಗ್ ಬಿ ಅಮಿತಾಬ್ ಬಚ್ಚನ್ ಅವರನ್ನು ಚಿರಂಜೀವಿ ಆಹ್ವಾನಿಸಿದ್ದಾರೆ. ಆಂಧ್ರಪ್ರದೇಶದಲ್ಲಿ ನಡೆಯತ್ತಿರುವ ಮತ್ತೊಂದು ರಾಯಲ್ ಕಾರ್ಯಕ್ರಮ ಇದಾಗಿದೆ. (ಏಜೆನ್ಸೀಸ್)

More from Filmibeat

English summary
Dharmavaram Saree is the trademark product of Dharmavaram in Andhra Pradesh. Ram Charan Teja will gift This silk saree to Upasana Kamineni for Engagement.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X