ರಾಮ್ ಚರಣ್ ಜೊತೆ ಉಪಾಸನಾ ಮದುವೆಗೆ ಗ್ರೀನ್ ಸಿಗ್ನಲ್
ತೆಲುಗು ಚಿತ್ರನಟ ಮೆಗಾಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ಮದುವೆ ನಿಶ್ಚಯವಾಗಿದೆ. ಉಪಾಸನಾ ಕಾಮಿನೇನಿ ಜೊತೆ ರಾಜ್ ಚರಣ್ ಶೀಘ್ರದಲ್ಲೆ ಸಪ್ತಪದಿ ತುಳಿಯಲಿದ್ದಾರೆ. ಮದುವೆಗೆ ಇಬ್ಬರ ಕುಟುಂಬಿಕರು ಗ್ರೀನ್ ಸಿಗ್ನಲ್ ಕೊಟ್ಟಾಗಿದೆ. ಶೀಘ್ರದಲ್ಲೆ ಇವರಿಬ್ಬರು ಮದುವೆಗೆ ಗಟ್ಟಿಮೇಳ ಮೊಳಗಲಿದೆ.
ಅಪೊಲೋ ಫಿಲಾಂತ್ರೋಪಿಯ ಉಪಾಧ್ಯಕ್ಷೆಯಾಗಿರುವ ಕಾಮಿನೇನಿ ಪ್ರಾಣಿಪ್ರಿಯೆ. ಆಕೆಯ ಈ ಗುಣವೇ ರಾಮ್ ಚರಣ್ ತುಂಬಾ ಹಿಡಿಸಿತಂತೆ.ಇಬ್ಬರೂ ಒಬ್ಬರನ್ನೊಬ್ಬರು ಇಷ್ಟಪಟ್ಟಿದ್ದಾರೆ. ಸಾಲದಕ್ಕೆ ಇಬ್ಬರೂ ಕ್ಲಾಸ್ ಮೇಟ್‌ಗಳು. ಇವರಿಬ್ಬರ ಲವ್ ಸ್ಟೋರಿಗೆ ರಾಮ್ ಚರಣ್ ಅವರ ಅಪ್ಪ ಚಿರಂಜೀವಿ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಅತ್ತ ಕಾಮಿನೇನಿ ಅವರ ಅಜ್ಜ ಅಪೊಲೋ ಆಸ್ಪತ್ರೆಯ ಡಾ.ಪ್ರತಾಪ್ ಸಿ ರೆಡ್ಡಿ ಕೂಡ ಇಬ್ಬರ ಮದುವೆಗೆ ಅನುಮತಿ ನೀಡಿದ್ದಾರೆ. ಈಗ ಇಬ್ಬರೂ ಥೇಟ್ ನಮ್ಮ ಲೂಸ್ ಮಾದನ ತರಹ ಭೂಮಿ ಮೇಲೆ ನಾನಿಲ್ಲ...ಮನಸು ಕೈಗೆ ಸಿಗ್ತಿಲ್ಲ ಎಂದು ಹಾಡಿಕೊಳ್ಳುತ್ತಿದ್ದಾರೆ. (ಏಜೆನ್ಸೀಸ್)
More from Filmibeat
English summary
Telugu mega star and politician Chiranjeevi’s son and actor Ram Charan Teja has confirmed that he will soon enter wedlock with Upasna Kamineni. The details about the wedding date and venue are expected to be announced very soon.


Click it and Unblock the Notifications











