»   » ಕೋಮಲ್ ಜೊತೆಗಿನ ಸಿನಿಮಾಕ್ಕೆ ರಮ್ಯಾ ನಕಾರ?

ಕೋಮಲ್ ಜೊತೆಗಿನ ಸಿನಿಮಾಕ್ಕೆ ರಮ್ಯಾ ನಕಾರ?

Subscribe to Filmibeat Kannada

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಹಾಸ್ಯ ನಟ ಕೋಮಲ್ ಕೊಟ್ಟ ಆಫರನ್ನು ಪ್ರಚಲಿತ ಸ್ಯಾಂಡಲ್ ವುಡ್ ನ ಬಹು ಬೇಡಿಕೆಯ ನಟಿ ರಮ್ಯಾ ನಿರಾಕರಿಸಿದ್ದಾರೆಯೇ? ಒಂದು ಮೂಲದ ಪ್ರಕಾರ ಹೌದು. ಕೋಮಲ್ ಕುಮಾರ್ ಹಾಲಿವುಡ್ ನ 'ನೋಟಿಂಗ್ ಹಿಲ್' ಎನ್ನುವ ಚಿತ್ರದಿಂದ ಪ್ರಭಾವಿತನಾಗಿ ಅದನ್ನ ಕನ್ನಡದಲ್ಲಿ ಸಿನಿಮಾ ಮಾಡಲು ಹೊರಟಿದ್ದಾರೆ. ನಾಯಕಿಯಾಗಿ ಅಂದರೆ ಮೂಲ ಚಿತ್ರದ ಜುಲಿಯಾ ರಾಬರ್ಟ್ ಜಾಗದಲ್ಲಿ ರಮ್ಯಾಗೆ ಆಫರ್ ಕೊಟ್ಟಿದ್ದರಂತೆ. ಹಾಲಿವುಡ್ ನ ಆ ಚಿತ್ರದಲ್ಲಿ ಹುಗ್ ಗ್ರಾಂಟ್ ಮತ್ತು ಜುಲಿಯಾ ರಾಬರ್ಟ್ ನಟಿಸಿದ್ದರು. ಆದರೆ ಅದಕ್ಕೆ ರಮ್ಯಾ ಒಲ್ಲೆ ಅಂದರಂತೆ.

ಮತ್ತೆ ಪ್ರಯತ್ನ ಮುಂದುವರಿಸಿದ ಕೋಮಲ್ ಇನ್ನೊಮ್ಮೆ ಭೇಟಿ ಮಾಡಿ ಆಫರ್ ಕೊಟ್ಟರಂತೆ ಅದು ಆಗದಿದ್ದಾಗ ಸಹೋದರ ಜಗ್ಗೇಶ್ ಮೂಲಕ ಮಾಡಿದ ಪ್ರಯತ್ನ ಕೂಡ ವಿಫಲ ವಾಯಿತು. ಚಿತ್ರದ ಕಥೆ ಕೇಳುವ ಸೌಜನ್ಯತೆ ಕೂಡ ತೋರಲಿಲ್ಲ ಎಂದು ತಿಳಿದು ಬಂದಿದೆ.

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಚೆಲ್ಲಾಟ' ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ನಿರಾಕರಿಸಿ ನಂತರ 'ಗಣೇಶ್ - ರೇಖಾ' ಜೋಡಿಯಾಗಿ ಬಂದ ಚೆಲ್ಲಾಟ ಚಿತ್ರ ಸೂಪರ್ ಹಿಟ್ ಆಗಿದ್ದನ್ನ ಇಲ್ಲಿ ಸ್ಮರಿಸ ಬಹುದು.ಈಗಿರುವ ಸಿಕ್ಕಾಪಟ್ಟೆ ಕಾಲ್ ಷೀಟ್ ರಮ್ಯಾ ಅವರ ಈ ವರ್ತನೆಗೆ ಕಾರಣ ವಾಗಿರಬಹುದೇ?

(ದಟ್ಸ್ ಕನ್ನಡ ಸಿನಿವಾರ್ತೆ)

ಪೂರಕ ಓದಿಗೆ
ತಮಿಳಿನಲ್ಲಿ ರಮ್ಯಾ ನಟನೆ ನಿಷೇಧಕ್ಕೆ ಆಗ್ರಹ
ಚಿತ್ರ ನಟಿ ರಮ್ಯಾಳ ಜನ್ಮ ರಹಸ್ಯ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada