twitter
    For Quick Alerts
    ALLOW NOTIFICATIONS  
    For Daily Alerts

    ದಸರಾ ಚಲನಚಿತ್ರೋತ್ಸವಕ್ಕೆ ತಾರಾ ಮೆರುಗು

    By Rajendra
    |
    <ul id="pagination-digg"><li class="previous"><a href="/gossips/29-dasara-film-festival-no-invite-for-dr-raj-family-aid0052.html">« Previous</a>

    Rebel Star Amabarish
    ಈ ವರ್ಷದ ದಸರಾ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭ ಸೆಪ್ಟೆಂಬರ್ 30ರಂದು ಮಧ್ಯಾಹ್ನ 12.15ಕ್ಕೆ ಕಲಾಮಂದಿರದಲ್ಲಿ ನಡೆಯಲಿದ್ದು, ಕನ್ನಡ ಚಲನಚಿತ್ರ ರಂಗದ ಹಿರಿಯ ಕಿರಿಯ ಕಲಾವಿದರು, ಚಿತ್ರರಂಗದ ಗಣ್ಯರು ಭಾಗವಹಿಸಲಿದ್ದಾರೆ.

    ಖ್ಯಾತ ಚಲನಚಿತ್ರ ನಟ ಅಂಬರೀಶ್ ಜ್ಯೋತಿ ಬೆಳಗಿಸಲಿದ್ದು, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಜಗದೀಶ್ ಶೆಟ್ಟರ್ ಉದ್ಘಾಟನೆ ನೆರವೇರಿಸಲಿರುವರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ಅವರು ಉಪಸ್ಥಿತರಿರುವರು. ಚಾಮರಾಜ ಕ್ಷೇತ್ರದ ಶಾಸಕ ಹೆಚ್.ಎಸ್. ಶಂಕರಲಿಂಗೇಗೌಡ ಅಧ್ಯಕ್ಷತೆ ವಹಿಸುವರು. ಆಹ್ವಾನಿತ ಚಲನಚಿತ್ರ ಕಲಾವಿದರ ಪಟ್ಟಿ ಹೀಗಿದೆ.

    ಚಲನಚಿತ್ರ ಕಲಾವಿದರಾದ ಲೀಲಾವತಿ, ಜಯಂತಿ, ಜಯಮಾಲ,ಸುಮಲತಾ ಅಂಬರೀಷ್, ಶ್ರೀನಾಥ್, ದ್ವಾರಕೀಶ್, ಜಗ್ಗೇಶ್, ಜೈ ಜಗದೀಶ್, ವಿಜಯಲಕ್ಷ್ಮಿ ಸಿಂಗ್, ವಿನೋದ್ ರಾಜ್, ಶ್ರೀನಗರ ಕಿಟ್ಟಿ, ದಿಗಂತ್, ಆದಿತ್ಯ, ಕುಮಾರಿ ಶಿರಿನ್ ಹಾಗೂ ಕುಮಾರಿ ಅಮೂಲ್ಯ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ವಿ. ಚಂದ್ರಶೇಖರ್, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಎಂ.ಎಸ್. ರಮೇಶ್, ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಅಶೋಕ್, ವಾರ್ತಾ ಇಲಾಖೆ ನಿರ್ದೇಶಕ ಡಾ: ಮುದ್ದುಮೋಹನ್ ಅವರುಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು.

    ಅಂದು ಬೆಳಿಗ್ಗೆ 10.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು, ಎದೆತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳಿಂದ ಚಲನಚಿತ್ರಗೀತೆಗಳ ಗಾಯನ ಏರ್ಪಡಿಸಲಾಗಿದೆ. ಹೇಮಂತ್, ಹರ್ಷದೀಪ್, ಅಂಜಲಿ ಭಟ್, ಅಶ್ವಿನಿ, ಶ್ರೇಯಾ, ವೈಷ್ಣವಿ ಮತ್ತಿತರರು ಎಲ್ಲರೂ ಈ ಟಿವಿ ಎದೆತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

    ಸಮಾರಂಭದ ಮುಖ್ಯ ಅತಿಥಿಗಳಾಗಿ ವಿರೋಧಪಕ್ಷದ ನಾಯಕ ಸಿದ್ಧರಾಮಯ್ಯ, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಜಿ.ಟಿ. ದೇವೇಗೌಡ, ಮಹಾನಗರ ಪಾಲಿಕೆ ಮಹಾಪೌರರಾದ ಪುಷ್ಪಲತಾ ಟಿ.ಬಿ. ಚಿಕ್ಕಣ್ಣ, ಮೈಸೂರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜೆ. ಸುನೀತಾ ವೀರಪ್ಪಗೌಡ ಸೇರುದಂತೆ ಹಲವರು ಆಗಮಿಸುವರು.

    ಅತಿಥಿಗಳಾಗಿ ಲೋಕಸಭಾ ಸದಸ್ಯರುಗಳಾದ ಅಡಗೂರು ಹೆಚ್. ವಿಶ್ವನಾಥ್, ಆರ್. ಧ್ರುವನಾರಾಯಣ್, ಚೆಲುವರಾಯಸ್ವಾಮಿ, ವಿಧಾನಸಭಾ ಸದಸ್ಯರುಗಳಾದ ಹೆಚ್.ಪಿ. ಮಂಜುನಾಥ್, ತನ್ವೀರ್ ಸೇಠ್, ಎಂ. ಸತ್ಯನಾರಾಯಣ, ವಿ. ಶ್ರೀನಿವಾಸ ಪ್ರಸಾದ್, ಹೆಚ್.ಸಿ. ಮಹದೇವಪ್ಪ, ಚಿಕ್ಕಣ್ಣ, ಕೆ. ವೆಂಕಟೇಶ್, ಸಾರಾ ಮಹೇಶ್, ವಿಧಾನ ಪರಿಷತ್ ಸದಸ್ಯರಾದ ಸಿ.ಹೆಚ್. ವಿಜಯಶಂಕರ್, ತೋಂಟದಾರ್ಯ, ಚಿಕ್ಕಮಾದು, ಸಿದ್ದರಾಜು, ಮರಿತಿಬ್ಬೇಗೌಡ, ಗೋ. ಮಧುಸೂದನ್, ಸಂದೇಶ್ ನಾಗರಾಜ್, ಪ್ರೊ: ಕೆ.ಆರ್. ಮಲ್ಲಿಕಾರ್ಜುನಪ್ಪ, ಕೆ.ವಿ. ನಾರಾಯಣಸ್ವಾಮಿ, ವಿವಿಧ ಪ್ರಾಧಿಕಾರಗಳ ಅಧ್ಯಕ್ಷರುಗಳಾದ ಬಿ.ಪಿ. ಮಂಜುನಾಥ್, ಮೈ.ವಿ. ರವಿಶಂಕರ್, ಎಂ. ನಂಜುಂಡಸ್ವಾಮಿ, ಬಿ. ರಾಮಲಿಂಗಯ್ಯ, ಎಲ್. ನಾಗೇಂದ್ರ, ಎಂ.ಜೆ. ರವಿಕುಮಾರ್, ಡಾ: ಬಿ. ಶಿವರಾಂ ಅವರುಗಳು ಆಗಮಿಸಲಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)

    <ul id="pagination-digg"><li class="previous"><a href="/gossips/29-dasara-film-festival-no-invite-for-dr-raj-family-aid0052.html">« Previous</a>

    English summary
    More than 36 old Kannada films will be screened in three theatres in the city as part of Dasara. Actor-turned-politician Ambarish will inaugurate the seven-day Dasara Filmvoltsav at Kalamandira on September 30.
    Thursday, September 29, 2011, 11:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X