For Quick Alerts
  ALLOW NOTIFICATIONS  
  For Daily Alerts

  ಡಾ ರಾಜ್ ಜೊತೆ ಮುಕ್ತ ಮಾತುಕತೆಯಿತ್ತು: ಅಂಬರೀಷ್

  |

  "ನಾವೆಲ್ಲರೂ ಶ್ರಮ, ಭಕ್ತಿ ಮತ್ತು ಗೌರವದಿಂದ ಬೆಳೆದು ಅದೃಷ್ಟವಂತರಾದೆವು. ವರದರಾಜು ದೊಡ್ಡ ವ್ಯಕ್ತಿ ಮತ್ತು ಡಾ ರಾಜ್ ಅವರಿಗೆ ಅಷ್ಟೇ ದೊಡ್ಡ ಶಕ್ತಿಯಾಗಿದ್ದರು. ಡಾ ರಾಜ್ ಜೊತೆಯಲ್ಲಿ ಎಲ್ಲಾ ವಿಷಯಗಳನ್ನು ಮಾತನಾಡಲು ಅವರೊಂದಿಗೆ ಇದ್ದವರು ಹೆದರುತ್ತಿದ್ದರು. ಆದರೆ, ನಾನು ಎಲ್ಲಾ ವಿಷಯಗಳನ್ನು ಅತ್ಯಂತ ಮುಕ್ತವಾಗಿ ಮಾತನಾಡುತ್ತಿದ್ದೆ, ಚರ್ಚಿಸುತ್ತಿದ್ದೆ" ಎಂದಿದ್ದಾರೆ ರೆಬಲ್ ಸ್ಟಾರ್ ಅಂಬರೀಷ್.

  ವರನಟ ಡಾ ರಾಜ್ ಸಹೋದರರಾದ ಎಸ್ ಪಿ ವರದರಾಜ್ ಸ್ಮರಣಾರ್ತ 'ಎಸ್ ಪಿ ವರದರಾಜ್ ಆತ್ಮೀಯರ ಬಳಗ' ನಗರದಲ್ಲಿ ಹಮ್ಮಿಕೊಂಡಿದ್ದ ಪ್ರಶಸ್ತಿಪ್ರಧಾನ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅಂಬಿ ಈ ವಿಷಯವನ್ನು ಹೇಳಿಕೊಂಡರು. "ಎಸ್ ಪಿ ವರದರಾಜು ಮನಸ್ಸು ಮುಟ್ಟುವಂತಹ ಚಿತ್ರ ನಿರ್ಮಿಸುವುದರ ಜೊತೆಗೆ ಅಷ್ಟೇ ಆಕರ್ಷಕ ವ್ಯಕ್ತಿತ್ವ ಕೂಡ ಹೊಂದಿದವರಾಗಿದ್ದರು" ಎಂದಿದ್ದಾರೆ.

  ಸದ್ಯಕ್ಕೆ ರೆಬಲ್ ಸ್ಟಾರ್ ಅಂಬರೀಷ್, ಎಸ್ ನಾರಾಯಣ್ ಪುತ್ರ ಪಂಕಜ್ ಮುಖ್ಯಭೂಮಿಕೆಯಲ್ಲಿರುವ 'ರಣ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಚಾಲೆಂಜಿಗ್ ಸ್ಟಾರ್ ದರ್ಶನ್ ನಾಯಕತ್ವದ 'ಬುಲ್ ಬುಲ್' ಹಾಗೂ ಪಂಕಜ್ ನಾಯಕತ್ವದ ಇನ್ನೊಂದು ಚಿತ್ರ 'ಚೌಡಯ್ಯ'ದಲ್ಲಿಯೂ ನಟಿಸಲಿದ್ದಾರೆ ಅಂಬಿ. ಹೀಗೆ ಅಂಬಿ ಅಭಿಮಾನಿಗಳಿಗೆ, ಈ ವರ್ಷ ಅವರ ಈ ವರ್ಷ ಸಾಕಷ್ಟು ಚಿತ್ರಗಳು ಕಾದಿವೆ. (ಒನ್ ಇಂಡಿಯಾ ಕನ್ನಡ)

  English summary
  Rebel Star Ambarish told that he had discussion with Dr Raj Many times and he was very close to him. And also he told, Dr Rajkumar's brother SP Varadaraj is Great Personality. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X