ಸಂಜು ವೆಡ್ಸ್ ಗೀತಾಗೆ Vs ಜೂನಿಯರ್ ಎನ್ಟಿಆರ್ ಶಕ್ತಿ
ಕರ್ನಾಟಕದಲ್ಲಿ ತೆಲುಗು, ತಮಿಳು ಚಿತ್ರಗಳಿಗೆ ಮಾರುಕಟ್ಟೆ ಸುಸ್ಥಿರವಾಗಿದೆ. ಅದರಲ್ಲೂ ಕೆಲವು ಬಿಗ್ ಬಜೆಟ್ ಚಿತ್ರಗಳು ಬಿಡುಗಡೆಯಾದರಂತೂ ನಮ್ಮ ಕನ್ನಡ ಚಿತ್ರಗಳ ಪರಿಸ್ಥಿತಿ ಕೇಳುವಂತಿಲ್ಲ. ಬಹುನಿರೀಕ್ಷಿತ 'ಸಂಜು ವೆಡ್ಸ್ ಗೀತಾ' ಚಿತ್ರಕ್ಕೆ ಅಂತಹದ್ದೇ ಪರಿಸ್ಥಿತಿ ಎದುರಾಗಿದೆ. ಈ ಚಿತ್ರ ಏಪ್ರಿಲ್ 1ಕ್ಕೆ ಬಿಡುಗಡೆಯಾಗುತ್ತಿದ್ದು. ಅದೇ ದಿನ ಜೂನಿಯರ್ ಎನ್ಟಿಆರ್ ಅಭಿನಯದ ಭಾರಿ ಬಜೆಟ್ ಚಿತ್ರ 'ಶಕ್ತಿ' ತೆರೆಕಾಣುತ್ತಿದೆ.
ಇದರಿಂದ 'ಸಂಜು ವೆಡ್ಸ್ ಗೀತಾ' ಚಿತ್ರಕ್ಕೆ ತೀವ್ರ ಸ್ಪರ್ಧೆ ಎದುರಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಜೊತೆಗೆ ದರ್ಶನ್ ಅಭಿನಯದ ಮತ್ತೊಂದು ಬಹುನಿರೀಕ್ಷಿತ ಚಿತ್ರ 'ಪ್ರಿನ್ಸ್' ಒಂದು ದಿನ ಮುಂಚಿತವಾಗಿ (ಮಾ.31) ಬಿಡುಗಡೆಯಾಗುತ್ತಿದೆ. ಇದೂ ಒಂದು ರೀತಿ ಸಂಜು ವೆಡ್ಸ್ ಗೀತಾ ತ್ರಿಕೋಣ ಸ್ಪರ್ಧೆಗೆ ಕಾರಣವಾಗಲಿದೆ. ಪ್ರಿನ್ಸ್ ಹಾಗೂ ಸಂಜು ವೆಡ್ಸ್ ಗೀತಾ ಚಿತ್ರಗಳಿಗೆ ಮೂರನೇ 'ಶಕ್ತಿ'ಯಾಗಿ ಎನ್ಟಿಆರ್ ಚಿತ್ರ ನಿಲ್ಲದೆ.
ಇದರ ಜೊತೆಗೆ ವಿಶ್ವಕಪ್ ಕ್ರಿಕೆಟ್ ಫೈನಲ್ಸ್ ಕಾರಣ ಸಂಜು ಚಿತ್ರದಒಂದು ದಿನದ ಕಲೆಕ್ಷನ್‌ಗೆ ಭಾರಿ ಹೊಡೆತ ಬೀಳಲಿದೆ. ಇದರಿಂದ ಚೇತರಿಕೊಳ್ಳುವಷ್ಟರಲ್ಲಿ ರಮ್ಯಾ ಮುಖ್ಯಭೂಮಿಕೆಯಲ್ಲಿರುವ ಸಾಕಷ್ಟು ವಿವಾದಕ್ಕೆ ಕಾರಣವಾದ 'ದಂಡಂ ದಶಗುಣಂ' ಏಪ್ರಿಲ್ 8ಕ್ಕೆ ತೆರೆಗೆ ಅಪ್ಪಳಿಸಲಿದೆ. ಏಪ್ರಿಲ್ ತಿಂಗಳಲ್ಲಿ ಪುನೀತ್ ರಾಜ್ ಕುಮಾರ್ ಅವರ 'ಹುಡುಗ್ರು' ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಅವರ 'ಕೂಲ್' ಚಿತ್ರಗಳು ಬಿಡುಗಡೆಯಾಗುತ್ತಿವೆ.
ಇಷ್ಟೆಲ್ಲಾ ಸ್ಪರ್ಧೆಗಳನ್ನು ಎದುರಿಸುವಷ್ಟು 'ಶಕ್ತಿ' ಸಂಜು ವೆಡ್ಸ್ ಗೀತಾ ಚಿತ್ರಕ್ಕಿದೆಯೇ ಎಂಬ ಪ್ರಶ್ನೆ ತಲೆಯೆತ್ತಿದೆ. ಆದರೆ ಆಯಾ ಭಾಷೆಯ, ಆಯಾ ನಟರ ಅಭಿಮಾನಿಗಳು ಇದ್ದೇ ಇದ್ದಾರೆ. ಕಡೆಗೆ ಯಾವ ಚಿತ್ರದಲ್ಲಿ ಸತ್ವ ಇದೆಯೋ ಆ ಚಿತ್ರ ಬಾಕ್ಸಾಫೀಸಲ್ಲಿ ಗಟ್ಟಿಯಾಗಿ ನಿಲ್ಲುತ್ತದೆ. ಜೊಳ್ಳು ಯಾವುದು ಕಾಳು ಯಾವುದು ಎಂಬುದನ್ನು ತೀರ್ಮಾನಿಸಬೇಕಾದವನು ಪ್ರೇಕ್ಷಕ.


Click it and Unblock the Notifications











