ಜೈಲಿನಲ್ಲಿ ದರ್ಶನ್‌ರನ್ನು ಶಿವಣ್ಣ ಕಣ್ಣೆತ್ತಿಯೂ ನೋಡಲಿಲ್ಲ

By Rajendra

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬುಧವಾರ (ಸೆ.28) ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದರು. ಆದರೆ ನಟ ದರ್ಶನ್‌ರನ್ನು ಮಾತನಾಡಿಸಲು ಅಲ್ಲ. ಓಂ ಪ್ರಕಾಶ್ ರಾವ್ ನಿರ್ದೇಶಿಸುತ್ತಿರುವ 'ಶಿವ' ಚಿತ್ರೀಕರಣಕ್ಕಾಗಿ. ಶೂಟಿಂಗ್ ನಡೆದದ್ದು ದರ್ಶನ್ ಇರುವ ವಿಶೇಷ ಭದ್ರತಾ ಸೆಲ್ 4ರ ಮುಂಭಾಗದಲ್ಲೆ!

ಆದರೆ ಶಿವಣ್ಣ ಮಾತನಾಡುವುದು ಹೋಗಲಿ ದರ್ಶನ್‌ರತ್ತ ಕಣ್ಣೆತ್ತಿಯೂ ನೋಡಿಲ್ಲ. ತಮ್ಮ ಪಾಡಿಗೆ ತಾವು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಹೋಗಲಿ ಶಿವಣ್ಣ ಮಾತನಾಡಲಿಲ್ಲ ದರ್ಶನ್? ಅವರು ಅಷ್ಟೇಯಾ ಯಾವುದೋ ಪುಸ್ತಕ ಹಿಡಿದು ಕೂತಿದ್ದರು, ತಲೆಯೆತ್ತದೆ!

ಆದರೆ ಜೈಲಿನಲ್ಲಿರುವ ಇತರೆ ಕೈದಿಗಳು ಇವರಿಬ್ಬರು ಆಗ ಮಾತನಾಡಬಹುದು ಈಗ ಮಾತನಾಡಬಹುದು ಎಂದು ಕಣ್ಣಿಗೆ ಎಣ್ಣೆಬಿಟ್ಟುಕೊಂಡು ಕೂತಿದ್ದರು. ಕಡೆಗೂ ಶಿವಣ್ಣ ದರ್ಶನ್ ಭೇಟಿಯಾಗಲೇ ಇಲ್ಲ. ಕೈದಿಗಳಿಗೆ ನಿರಾಸೆ ತಪ್ಪಲಿಲ್ಲ. 'ಶಿವ' ಚಿತ್ರೀಕರಣ ಸಂಜೆವರೆಗೂ ನಡೆಯಿತು. ಗುರುವಾರವೂ (ಸೆ.29) ಚಿತ್ರೀಕರಣ ನಡೆಯಲಿದೆ. ಇಬ್ಬರ ನಡುವೆ ಮಾತಿಲ್ಲ ಕತೆಯಿಲ್ಲ. (ಏಜೆನ್ಸೀಸ್)

More from Filmibeat

English summary
Century hero Shivaraj Kumar had visited Parappana Agrahara Jail in Bangalore. The Kannada actor was not there to meet Challenging star Darshan, which is in the police custody for beating his wife, but for the shooting of his upcoming movie Shiva. Sources claim that Shivanna did not talk to Darshan, though he was shooting in front of the cell, where was put.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X