ಕನ್ನಡಕ್ಕೆ ಜಿಂಕೆ ಕಂಗಳ ಬೆಡಗಿ ಸ್ನೇಹಾ ಉಲ್ಲಾಳ್

By Rajendra

Actress Sneha Ullal
ಜಿಂಕೆ ಕಂಗಳ ಬೆಡಗಿ ಸ್ನೇಹಾ ಉಲ್ಲಾಳ್ ಕಡೆಗೂ ಕನ್ನಡಕ್ಕೆ ಅಡಿಯಿಟ್ಟಿದ್ದಾರೆ. ಕನ್ನಡಕ್ಕೆ ಆಕೆಯನ್ನು ಕರೆತರುವ ಭಾಗ್ಯ ಮಧು ಬಂಗಾರಪ್ಪ ಅವರಿಗೆ ಧಕ್ಕಿದೆ. ಚಿತ್ರದ ನಾಯಕ ನಟ ಕೂಡ ಅವರೇ ಎಂಬುದು ವಿಶೇಷ. ಮಂಗಳೂರು ಮೂಲದ ಸ್ನೇಹಾಗೆ ಕನ್ನಡದಲ್ಲಿ ನಟಿಸಲು ಸಾಕಷ್ಟು ಆಫರ್‌ಗಳು ಬಂದರೂ ಆಕೆ ಇದುವರೆಗೂ ಯಾವುದೇ ಚಿತ್ರವನ್ನೂ ಒಪ್ಪಿರಲಿಲ್ಲ.

ಹೆಚ್ಚಾಗಿ ಆಕೆ ಹಿಂದಿ ಮತ್ತು ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದರು. ಮಧು ಬಂಗಾರಪ್ಪ ಜೊತೆಗಿನ ಚಿತ್ರಕ್ಕೆ 'ದೇವಿ' ಎಂದು ಹೆಸರಿಡಲಾಗಿದೆ. ಈಕೆ ಅಭಿನಯದ ತೆಲುಗು ಚಿತ್ರ 'ಉಲ್ಲಾಸಂಗಾ ಉತ್ಸಾಹಂಗಾ' ಸೂಪರ್ ಹಿಟ್ ಆಗಿತ್ತು. ಈ ಚಿತ್ರದಲ್ಲಿ ಕನ್ನಡಿಗ ಯಶೋ ಸಾಗರ್ ನಾಯಕ ನಟನಾಗಿದ್ದ.

ಅದೇ ಚಿತ್ರ ಕನ್ನಡಕ್ಕೆ 'ಉಲ್ಲಾಸ ಉತ್ಸಾಹ' ಎಂದು ರೀಮೇಕ್ ಆಗಿತ್ತು. ಯಾಮಿ ಗೌತಮ್, ಗೋಲ್ಡನ್ ಸ್ಟಾರ್ ಗಣೇಶ್ ಮುಖ್ಯಭೂಮಿಕೆಯಲ್ಲಿದ್ದ ಚಿತ್ರ. ಅಂದಹಾಗೆ ದೇವಿ ಚಿತ್ರಕ್ಕೆ ಈಶ್ವರ್ ಆಕ್ಷನ್, ಕಟ್ ಹೇಳಲಿದ್ದಾರೆ. ಡಿಸೆಂಬರ್‌ನಲ್ಲಿ ಸೆಟ್ಟೇರಲಿರುವ ಚಿತ್ರಕ್ಕೆ ಶ್ರೀಧರ್ ಸಂಗೀತ ಸಂಯೋಜಿಸಲಿದ್ದಾರೆ. ಚಿತ್ರದ ಉಳಿದ ಪಾತ್ರವರ್ಗ, ತಾಂತ್ರಿಕ ಬಳಗ ಆಯ್ಕೆ ನಡೆಯುತ್ತಿದೆ.

More from Filmibeat

English summary
Mangalorean born actress Sneha Ullal debuts to Kannada movie titled as "Devi". Kannada films Producer, Akash Audio and Studio owner Madhu Bangarappa plays lead role opposite to Sneha Ullal. The film going on the floor in the month of December 2010.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X