»   » ನಲ್ಲ ಸುದೀಪ್ ವಿಷ್ಣುವರ್ಧನ ಡಿಸೆಂಬರ್ 8ಕ್ಕೆ ತೆರೆಗೆ

ನಲ್ಲ ಸುದೀಪ್ ವಿಷ್ಣುವರ್ಧನ ಡಿಸೆಂಬರ್ 8ಕ್ಕೆ ತೆರೆಗೆ

Posted By:
Subscribe to Filmibeat Kannada

ಸುದೀರ್ಘ ಸಮಯದಿಂದ ತಮ್ಮ ನೆಚ್ಚಿನ ನಟನ ಚಿತ್ರವನ್ನು ಎದುರು ನೋಡುತ್ತಿರುವ ನಲ್ಲ ಸುದೀಪ್ ಅಭಿಮಾನಿಗಳಿಗೆ ಈ ವಾರವೂ ನಿರಾಸೆ ಕಾದಿದೆ. ಏಕೆಂದರೆ ಅವರ ಬಹುನಿರೀಕ್ಷಿತ 'ವಿಷ್ಣುವರ್ಧನ' ಚಿತ್ರದ ಬಿಡುಗಡೆ ಒಂದು ವಾರ ಕಾಲ ಮುಂದೂಡಲ್ಪಟ್ಟಿದೆ.

ದ್ವಾರಕೀಶ್ ನಿರ್ಮಾಣದ ಈ ಚಿತ್ರ ಡಿಸೆಂಬರ್ 1ಕ್ಕೆ ತೆರೆಕಾಣ ಬೇಕಾಗಿತ್ತು. ಈಗಷ್ಟೇ ಸೆನ್ಸಾರ್ ಆಪರೇಷನ್ ಮುಗಿಸಿಕೊಂಡು ಬಂದಿರುವ 'ವಿಷ್ಣುವರ್ಧನ' ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಚಿತ್ರವನ್ನು ಡಿಸೆಂಬರ್ 8ರಂದು ಬಿಡುಗಡೆ ಮಾಡುತ್ತಿರುವುದಾಗಿ ಯೋಗೀಶ್ ದ್ವಾರಕೀಶ್ ತಿಳಿಸಿದ್ದಾರೆ.

ತಮ್ಮ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿರುವುದಕ್ಕೆ ಸಂತಸವನ್ನೂ ವ್ಯಕ್ತಪಡಿಸಿದ್ದಾರೆ ಯೋಗೀಶ್. ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಇಬ್ಬರು ನಾಯಕಿಯರು ಭಾವನಾ ಹಾಗೂ ಪ್ರಿಯಾಮಣಿ. ಈಗಾಗಲೆ ಚಿತ್ರದ ಪ್ರೋಮೋಗಳು ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆಯಂತೆ. (ಒನ್‌ಇಂಡಿಯಾ ಕನ್ನಡ)

English summary
Sudeep, Bhavana, Priyamani lead most awaited Kannada movie Vishnuvardhana releasing on 8th December and not on 1st December which he had planned earlier. The movie has been censored with U/A certificate.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada