»   » ಹೈದ್ರಾಬಾದ್ ನಲ್ಲಿ ನಟ ಸೂರ್ಯ ಭಾರೀ ಮಿಂಚಿಂಗ್

ಹೈದ್ರಾಬಾದ್ ನಲ್ಲಿ ನಟ ಸೂರ್ಯ ಭಾರೀ ಮಿಂಚಿಂಗ್

Posted By:
Subscribe to Filmibeat Kannada

ಜನಪ್ರಿಯ ತಮಿಳು ನಾಯಕ ನಟ ಸೂರ್ಯ, ಸಹೋದರ ಕಾರ್ತಿ ಹೆಜ್ಜೆಯನ್ನು ಅನುಸರಿಸುತ್ತಿದ್ದಾರಾ? ಹೌದೆನ್ನುತ್ತಿದೆ ಸುದ್ದಿಮೂಲಗಳು. ಕಾರಣ, ಇದೀಗ ಸೂರ್ಯ ತಮ್ಮ ತಮಿಳು ಚಿತ್ರ 'ಮಾತ್ರಾನ್'ದ ತೆಲುಗು ಆವೃತ್ತಿಗೆ ತಾವೇ ಸ್ವತಃ ಧ್ವನಿ ನೀಡಲಿರುವುದಾಗಿ ಹೇಳಿದ್ದಾರೆ. ಮಾತ್ರಾನ್ ಚಿತ್ರದ ಪ್ರಮೋಶನ್ ಗೆ ಹೈದ್ರಾಬಾದ್ ಗೆ ಹೋಗಿದ್ದ ಸೂರ್ಯ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.

ಎಲ್ಲರಿಗೂ ತಿಳಿದಿರುವಂತೆ ತೆಲುಗುನಲ್ಲಿ ಅತಿ ಬೇಡಿಕೆಯ ನಟ ಎನಿಸಿಕೊಂಡಿರುವ ಕಾರ್ತಿ, ಸೂರ್ಯ ಅವರ ಸ್ವಂತ ಸಹೋದರ. ತಮ್ಮ ತೆಲುಗು ಚಿತ್ರಕ್ಕೆ ತಾವೇ ಡಬ್ ಮಾಡುವ ಕಾರ್ತಿ ಈಗ ಅಣ್ಣ ಸೂರ್ಯನನ್ನೂ ಆ ದಾರಿಯಲ್ಲಿ ಕೊಂಡೊಯ್ದಿದ್ದಾರೆ. ಅಷ್ಟೇ ಅಲ್ಲ, ತಾವು ತಮ್ಮ ಕಾರ್ತಿಗಿಂತ ಚೆನ್ನಾಗಿ ಡಬ್ ಮಾಡುವುದಾಹಿ ಹೇಳಿ ಅಚ್ಚರಿ ಮೂಡಿಸಿದ್ದಾರೆ.

ಆಂಧ್ರ, ಹೈದ್ರಾಬಾದ್ ಗಳಲ್ಲಿ ಸೂರ್ಯ ಅವರಿಗೆ ಬಹಳಷ್ಟು ಅಭಿಮಾನಿಗಳಿದ್ದು ಅದು ಅವರ ಬಿಡುಗಡೆಯಾದ 'ಸಿಂಗಂ' ಹಾಗೂ '7 th ಸೆನ್ಸ್' ಚಿತ್ರಗಳ ತೆಲುಗು ಬಾಕ್ಸ್ ಆಫೀಸ್ ಗಳಿಕೆ ಮೂಲಕ ಸಾಬೀತಾಗಿದೆ. ತಮಿಳು ಚಿತ್ರ ಮಾತ್ರಾನ್ ದ ತೆಲುಗು ಆವೃತ್ತಿಗೆ ಇನ್ನೂ ಹೆಸರು ಪಕ್ಕಾ ಆಗಿಲ್ಲ. ತಮಿಳಿನಲ್ಲಿ ನಿರ್ದೇಶಿಸಿರುವ ಕೆವಿ ಆನಂದ್ ಅವರೇ ತೆಲುಗಿನಲ್ಲೂ ನಿರ್ದೇಶಿಸಲಿದ್ದು ನಾಯಕಿಯಾಗಿ ಕಾಜಲ್ ಅಗರವಾಲ್ ನಟಿಸಲಿದ್ದಾರೆ. (ಒನ್ ಇಂಡಿಯಾ ಕನ್ನಡ)

English summary
Surya is following the footsteps of his younger brother Karthi. Well, the actor, who was recently in Hyderabad for a promotional activity of his upcoming Tamil film Maatraan, has promised to dub his voice from now on in Telugu.
 

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X