ಮೈಸೂರ್ ಲ್ಯಾಂಪ್ಸ್ ಬಳಿ 'ಜಾನೂ' ಯಶ್, ದೀಪಾ

ಜಯಣ್ಣ ಕಂಬೈನ್ಸ್ ಲಾಂಛನದಲ್ಲಿ ಜಯಣ್ಣ ಹಾಗೂ ಭೋಗೇಂದ್ರ ನಿರ್ಮಾಣದ ಜಾನೂ ಚಿತ್ರ ಚಿತ್ರೀಕರಣ ಮುಗಿಸಿದೆ. ಜಯಂತ್ ಕಾಯ್ಕಿಣಿ ಬರೆದಿರುವ 'ನೀನೆ ನನ್ನ ಸವಿಗನಸು...ಬೇಗ ಬಂದು ಉಪಚರಿಸು ಜಾನೂ ಮೇರಿ ಜನೂ' ಎಂಬ ಗೀತೆಯ ಚಿತ್ರೀಕರಣ ಮುರಳಿ ನೃತ್ಯ ಸಂಯೋಜನೆಯಲ್ಲಿ 'ಮೈಸೂರ್ ಲ್ಯಾಂಪ್ಸ್' ನಲ್ಲಿ ಹಾಕಲಾಗಿದ್ದ ವಿಶೇಷ ಸೆಟ್ ನಲ್ಲಿ ನಡೆಯಿತು.

"ಇದರೊಂದಿಗೆ ಜಾನೂ ಚಿತ್ರ ಚಿತ್ರೀಕರಣ ಮುಕ್ತಾಯವಾಯ್ತು, ಚಿತ್ರ ಮೇ ತಿಂಗಳಲ್ಲಿ ತೆರೆಗೆ ಬರಲಿದೆ" ಎಂದಿದ್ದಾರೆ ನಿರ್ದೇಶಕ ಪ್ರೀತಂ ಗುಬ್ಬಿ. ಯಶ್ ನಾಯಕತ್ವದ ಈ ಚಿತ್ರದಲ್ಲಿ 'ಸಾರಥಿ' ಹಾಗೂ ಪರಮಾತ್ಮ ಬೆಡಗಿ ದೀಪಾ ಸನ್ನಿಧಿ ನಾಯಕಿ. ಈ ಚಿತ್ರಕ್ಕೆ "ಏನ್ ಸಮಾಚಾರ ರೀ ಎಲ್ಲರೂ ಹೇಗಿದ್ದೀರಿ..." ಎಂಬ ಹಾಡೊಂದನ್ನು ಯೋಗರಾಜ ಭಟ್ ಬರೆದಿದ್ದಾರೆ.

ನಾಯಕಿ ದೀಪಾಸನ್ನಿಧಿ 'ಹುಬ್ಬಳ್ಳಿ ಹುಡುಗಿ' ಪಾತ್ರ ನಿರ್ವಹಿಸಿದ್ದಾರೆ. ರಂಗಾಯಣ ರಘು, ಸಂಗೀತಾ, ಶೋಭರಾಜ್, ಲಯೇಂದ್ರ ಮುಂತಾದವರು ತಾರಾಗಣದಲ್ಲಿದ್ದಾರೆ. ಸಾಧುಕೋಕಿಲಾ ಹಾಸ್ಯ ಚಿತ್ರಕ್ಕೆ ಬೋನಸ್ ಎಂದಿದ್ದಾರೆ ಪ್ರೀತಂ ಗುಬ್ಬಿ. ನಿರ್ದೇಶಕ ಪ್ರೀತಂ ಗುಬ್ಬಿಯೇ ಜಾನೂ ಗೆ ಕಥೆ, ಚಿತ್ರಕಥೆ ಬರೆದಿದ್ದಾರೆ. (ಒನ್‌ ಇಂಡಿಯಾ ಕನ್ನಡ)

More from Filmibeat

English summary
After Jayanth Kaykini's Song Shooting, the movie Janoo Shooting took an end. It releases in May, as director Pretham Gubbi told. Krishna is behind the camera and V Harikrishna has scored the music. Yash and Deepa Sannidhi are in lead.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X