»   » ಗೋಲ್ಡನ್ ಸ್ಟಾರ್, ಲಕ್ಕಿ ಸ್ಟಾರ್ ಜೋಡಿ ಬೊಂಬಾಟ್

ಗೋಲ್ಡನ್ ಸ್ಟಾರ್, ಲಕ್ಕಿ ಸ್ಟಾರ್ ಜೋಡಿ ಬೊಂಬಾಟ್

Posted By:
Subscribe to Filmibeat Kannada


ರಾಕ್ ಲೈನ್ ವೆಂಕಟೇಶ್ ಕೊನೆಗೂ ತಮ್ಮ ಮುಂದಿನ ಚಿತ್ರಕ್ಕೆ ಹೆಸರನ್ನು ಹುಡುಕಿದ್ದಾರೆ. 'ಗೋಲ್ಡನ್ ಸ್ಟಾರ್' ಗಣೇಶ್, 'ಲಕ್ಕಿ ಸ್ಟಾರ್' ರಮ್ಯ್ಯ ಅಭಿನಯದ ಹೊಸ ಚಿತ್ರಕ್ಕೆ 'ಬೊಂಬಾಟ್' ಎಂದು ಹೆಸರಿಡಲಾಗಿದೆ. ಚಿತ್ರದ ಹೆಸರು ಗಣೇಶ್‌ಗೂ ಇಷ್ಟವಾಗಿದೆಯಂತೆ.

ಇದೇ ಮೊದಲ ಬಾರಿಗೆ, ಹಿರಿಯ ನಿರ್ದೇಶಕ ಡಿ.ರಾಜೇಂದ್ರಬಾಬು ಅವರ ಕೈಕೆಳಗೆ ಅಭಿನಯಿಸೋ ಅವಕಾಶ ದೊರೆತಿರುವುದಕ್ಕೆ ಗಣೇಶ್ ಖುಷಿಯಾಗಿದ್ದಾರೆ. ಡಿ.ರಾಜೇಂದ್ರಬಾಬು ಅವರಿಗೆ ಹೋಲಿಸಿದರೆ ಯುವ ನಿರ್ದೇಶಕರೆನ್ನಬಹುದಾದಂತ ಎಂ.ಡಿ.ಶ್ರೀಧರ್(ಚೆಲ್ಲಾಟ ಮತ್ತು ಕೃಷ್ಣ), ಸಂಜಯ್ (ಹುಡುಗಾಟ), ಯೋಗರಾಜ್ ಭಟ್(ಮುಂಗಾರು ಮಳೆ, ಗಾಳಿಪಟ) ಹಾಗೂ ಎಸ್. ನಾರಾಯಣ್ (ಚೆಲುವಿನ ಚಿತ್ತಾರ) ಅವರ ನಿರ್ದೇಶನದಲ್ಲಿ ಅಭಿನಯಿಸಿ ಗಣೇಶ್ ಸೈ ಎನಿಸಿಕೊಂಡಿದ್ದಾರೆ.

ಭಟ್ಟರು ತೆಲುಗಿಗೆ ಹೋದ ಮೇಲೆ ಗಣೇಶನಿಗೆ ಇನ್ಯಾರೂ ಗತಿ ಎಂದು ಗಾಂಧಿನಗರದಲ್ಲಿ ಗುಸುಗುಸು ಶುರುವಾದ ಬೆನ್ನಲ್ಲೇ 50 ಚಿತ್ರಗಳನ್ನು ನಿರ್ದೇಶನ(ಬಿಂದಾಸ್ ಇವರ ನಿರ್ದೇಶನದ ಐವತ್ತನೇ ಚಿತ್ರ)ಮಾಡಿರುವ ಅನುಭವವುಳ್ಳ ಹಿರಿಯ ನಿರ್ದೇಶಕ ಡಿ.ರಾಜೇಂದ್ರ ಬಾಬು ಚಿತ್ರಕ್ಕೆ ಗಣೇಶ್ ಆಯ್ಕೆ ಯಾಗಿರುವುದು ಒಳ್ಳೆಯ ಬೆಳವಣಿಗೆ. ರಿಮೇಕ್ ಚಿತ್ರಗಳನ್ನು ನೀಡುವಲ್ಲಿ ಪಳಗಿರುವ ಡಿ.ರಾಜೇಂದ್ರಬಾಬು ಅವರ ಕೈ ಕೆಳಗೆ ಗಣೇಶ್ ಕೂಡ ಪಳಗಿದರೆ, ಅವರ ಪ್ರತಿಭೆಗೆ ಇನ್ನಷ್ಟು ಹೊಳಪು ಸಿಗುವುದರಲ್ಲಿ ಸಂಶಯವಿಲ್ಲ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿಬರುತ್ತಿವೆ!

ರಮ್ಯಾ ಮತ್ತೊಂದು ಕಿರಿಕ್ : ಒಬ್ಬ ಬಾಬು ಕೈಕೆಳಗೆ ನಟಿಸುತ್ತಿರುವ ರಮ್ಯಾ ಮತ್ತೊಬ್ಬ ಬಾಬುಗೆ ಕೈನೀಡಿದ್ದಾರೆ. ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ 'ಭೀಮೂಸ್ ಬ್ಯಾಂಗ್ ಬ್ಯಾಂಗ್' ಚಿತ್ರದ ಚಿತ್ರೀಕರಣಕ್ಕೆ ಸರಿಯಾಗಿ ಬರದೆ ತಮ್ಮ ಹಳೆಯವರಸೆಯ ನಮೂನೆಯನ್ನು ನೀಡಿದ್ದಾರೆ. ಈ ಮೊದಲು ರವಿ ಬೆಳಗೆರೆಯ 'ಮುಖ್ಯಮಂತ್ರಿ ಐ ಲವ್ ಯೂ' ಚಿತ್ರದಲ್ಲಿ ರಮ್ಯಾ ನಟಿಸಬೇಕಾಗಿತ್ತು. ಆದರೆ, ಆಕೆ ಆಕೆಯ ಕಿರಿಕಿರಿ, ಹಮ್ಮುಬಿಮ್ಮು ಸಹಿಸಲಾಗದೆ ರವಿ ರಮ್ಯಾಳನ್ನು ಎತ್ತಂಗಡಿ ಮಾಡಿ ಭಾವನಾಳನ್ನು ಹಾಕಿಕೊಂಡರು.

(ದಟ್ಸ್ ಸಿನಿವಾರ್ತೆ )

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada