»   » ಅನಂತನ ಅವಾಂತರ ನಿರಂತರ!

ಅನಂತನ ಅವಾಂತರ ನಿರಂತರ!

Posted By: Super
Subscribe to Filmibeat Kannada

ಕಾಶಿನಾಥ್‌ ಮರಳಿ ಬಂದಿದ್ದಾರೆ. ಅವರ ಭಾಷೆಯಲ್ಲೇ ಹೇಳುವುದಾದರೆ ಹೋದೆಯಾ ಪಿಶಾಚಿ ಎಂದುಕೊಳ್ಳುವಷ್ಟರಲ್ಲಿ ಬಂದೆ ಗವಾಕ್ಷೀಲಿ ಎನ್ನುವಂತೆ ಗಾಂಧಿನಗರದಲ್ಲಿ ಕಾಣಿಸಿಕೊಂಡಿದ್ದಾರೆ. ಸೆಟ್ಟೇರುತ್ತಿರುವ ಅವರ ಚಿತ್ರಗಳ ಸದ್ದು ಸಡಗರ ಬಿಡಿ- ಇಲ್ಲಿನ ವಿಷಯ ಜ.30ರ ಶುಕ್ರವಾರ ಸದ್ದಿಲ್ಲದೆ ತೆರೆ ಕಾಣುತ್ತಿರುವ ಅವರ ಚಿತ್ರದ್ದು .

ತೆರೆಮರೆಗೆ ಸರಿದಿದ್ದ ವಿ'ಚಿತ್ರ" ರಸಿಕರ ರಾಜ ಕಾಶಿನಾಥ್‌ರ 'ಸೂಪರ್‌ ಅಳಿಯ" ಚಿತ್ರ ಶುಕ್ರವಾರ ಬಿಡುಗಡೆಯಾಗುತ್ತಿದೆ. ಎಂ ರಾಜೇಂದ್ರ ಆರ್ಯ ಇದರ ನಿರ್ದೇಶಕರು.

ಜಯನಗರದ ಶ್ರಿ ಗಾಯತ್ರಿಆರ್ಟ್ಸ್‌ನಲ್ಲೀಗ ಆಭಿಮಾನಿಗಳ ಕಾವೇರುತ್ತಿದೆ. ಚಿತ್ರದ ಶೂಟಿಂಗ್‌ ಯಾವಾಗ? ಎಲ್ಲಿ? ನಡೆಯಿತೆಂಬ ವರದಿಗಳು ತಲುಪುವ ಮುನ್ನವೇ ಚಿತ್ರ ತೆರೆ ಕಾಣುತ್ತಿದೆ. ಆವರಿಗೆ ಪ್ರಚಾರ ಅಷ್ಟೊಂದು ಬೇಕಾಗಿಲ್ಲವಂತೆ. ಆವರ ಪ್ರಕಾರ ತಮ್ಮ ಚಿತ್ರಕ್ಕೆ ತಮ್ಮದೇ ಆದ '3ಖ" ಪ್ರೇಕ್ಷಕರಿದ್ದಾರೆ. 'ಆನುಭವ" ಚಿತ್ರದ ಮೂಲಕ ನಾಯಕರಾದ ಕಾಶಿನಾಥ್‌ ದ್ವಿಪಾತ್ರದಲ್ಲಿ ಅಭಿನಯಿಸಿರುವ ಚೊಚ್ಚಲ ಚಿತ್ರ 'ಸೂಪರ್‌ ಅಳಿಯ".

'ಸೂಪರ್‌ ಅಳಿಯ" ಮಾತ್ರವಲ್ಲದೆ, ಮೂರು ಹೊಸ ಚಿತ್ರಗಳಲ್ಲಿ (ನಾರಿ ಮುನಿದರೆ ಗಂಡು ಪರಾರಿ, 3ಖ, ಸೂಪರ್‌ ಆಳಿಯ ) ಕಾಶೀನಾಥ್‌ ನಟಿಸುತ್ತಿರುವುದು ಇನ್ನೊಂದು ವಿಶೇಷ.

ಕಾಶಿನಾಥ್‌ ನಡೆದದ್ದೇ ದಾರಿ !

ಕನ್ನಡ ಚಿತ್ರ ಪರಂಪರೆಯಲ್ಲಿ ಕಾಶಿನಾಥ್‌ರದು ಒಂದು ವಿಭಿನ್ನ ಮಾರ್ಗ. ಅತ್ತ A ಎನಿಸದ ಇತ್ತ U ಅಲ್ಲದ ಮಧ್ಯಮ ವಯಸ್ಕರು ಮುಗಿಬೀಳುವ ಸಿನಿಮಾ ಅವರದು. ಮೂರು ದಶಕದ ಅನುಭವದಲ್ಲಿ ಸುನೀಲ್‌ ಕುಮಾರ್‌ ದೇಸಾಯಿ, ಉಪೇಂದ್ರ, ಉಮಾಶ್ರೀ, ವಿ.ಮನೋಹರ್‌, ಅಭಿನಯರಂತಹ ಪ್ರತಿಭೆಗಳನ್ನು ಹೆಕ್ಕಿದ ಅಗ್ಗಳಿಕೆ ಅವರದು. 10ಕ್ಕಿಂತಲೂ ಹೆಚ್ಚು ಚಿತ್ರ ನಿರ್ಮಿಸಿದ ಅನುಭವ ಅವರದು.

ತೆರೆಮರೆಗೆ ಸರಿದಿರುವ ನಟಿ ಭವ್ಯ ಹೊಸ ಚಿತ್ರ 3ಖದಲ್ಲಿ ಕಾಣಿಸಿ ಕೊಳ್ಳುತ್ತಿದ್ದಾರೆ. ಸಿನಿಮಾ ವಿದ್ಯಾರ್ಥಿಗಳಿಗೆ ಕಾಶೀನಾಥ್‌ ತಮ್ಮ ಚಿತ್ರದಲ್ಲಿ ತರಬೇತಿಯೂ ನೀಡುತಿದ್ದಾರೆ.

ಕನ್ನಡ ಚಿತ್ರಗಳಿಗೀಗ ಪ್ರೇಕ್ಷಕರೇ ಬರುತ್ತಿಲ್ಲ ಎಂದು ವಿಷ್ಣು , ಸುದೀಪ್‌ ಅಲವತ್ತುಕೊಳ್ಳುತ್ತಿರುವ ಸಂದರ್ಭದಲ್ಲೇ ಕಾಶೀನಾಥ್‌ ಪುನರಾಗಮನವಾಗಿದೆ. ತಮ್ಮದೇ ವಿಚಿತ್ರ ಮ್ಯಾನರಿಸಂ ಮೂಲಕ ಕಾಶಿನಾಥ್‌ ಚಿತ್ರಮಂದಿರಗಳಿಗೆ ಜನರನ್ನು ಕರೆತಂದಾರೆ ? ಹಾಗೆ ನೋಡಿದರೆ ಕಾಶಿಗೊಂದಿಷ್ಟು ಅನುಕೂಲಗಳಿವೆ. ಬಿ-ಸಿ ಸೆಂಟರ್‌ಗಳಲ್ಲಿ ಅವರದೊಂದಿಷ್ಟು ಪ್ರೇಕ್ಷಕರ ಬ್ಯಾಂಕಿದೆ. ಆ ಶಕ್ತಿಯೇ ಅವರನ್ನು ಕಾಪಾಡಬೇಕು !

ಅಂದಹಾಗೆ, ಸೂಪರ್‌ಅಳಿಯ ಚಿತ್ರಕ್ಕೆ ಸೆನ್ಸಾರ್‌ ಮಂಡಳಿ ಯು /ಪ್ರಮಾಣಪತ್ರ ನೀಡಿದೆ. ಚಿತ್ರದ ಸ್ಟಿಲ್‌ಗಳಲ್ಲೂ ಕಾಶಿ ಪೆಕರುಪೆಕರಾಗಿ ಜೊಲ್ಲು ಸುರಿಸುತ್ತಿದ್ದಾರೆ. ಅಂದಮೇಲೆ, ಅನಂತನ ಅವಾಂತರಗಳಿಗೆ ಮೋಸವಿಲ್ಲ ಎಂದಾಯಿತು !

English summary
Kashinath new film appears from nowwhere!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada