»   » ಬಿಗ್‌ ಬ್ರದರ್‌ ಸ್ಪರ್ಧೆಯಲ್ಲಿ ಕೊನೆಗೂ ಗೆದ್ದಳು ಶಿಲ್ಪಾ ಶೆಟ್ಟಿ!

ಬಿಗ್‌ ಬ್ರದರ್‌ ಸ್ಪರ್ಧೆಯಲ್ಲಿ ಕೊನೆಗೂ ಗೆದ್ದಳು ಶಿಲ್ಪಾ ಶೆಟ್ಟಿ!

Subscribe to Filmibeat Kannada


ನವದೆಹಲಿ : ಬ್ರಿಟನ್‌ನ ಚಾನೆಲ್‌ 4ನ ‘ಸೆಲೆಬ್ರಿಟಿ ಬಿಗ್‌ ಬ್ರದರ್‌’ ಕಾರ್ಯಕ್ರಮದಲ್ಲಿ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ವಿಜಯಿಯಾಗಿದ್ದಾರೆ.

ವರ್ಣ ಭೇದ ದ್ವೇಷಕ್ಕೆ ಒಳಗಾಗಿ ಕಣ್ಣೀರು ಸುರಿಸಿದ್ದ ಶಿಲ್ಪಾರ ಪರ ಪ್ರೇಕ್ಷಕರು ನಿಂತಿದ್ದಾರೆ. ಹೆಚ್ಚಿನ ಮತ ನೀಡಿ, ಶಿಲ್ಪಾರನ್ನು ವಿಜಯಿಯಾಗಿಸಿದ್ದಾರೆ. ಶಿಲ್ಪಾರ ಪರ ಶೇ. 63ರಷ್ಟು ಜನ ಮತ ನೀಡಿದ್ದು, ಅವರಿಗೆ ಈಗ ಸುಮಾರು 1,00,000 ಪೌಂಡ್‌(ಸುಮಾರು 80 ಲಕ್ಷ ) ಲಭಿಸಲಿದೆ. ಇದರ ಜತೆಗೆ ಅಭರಣಗಳು, ಕ್ರಿಕೆಟ್‌ ಶೋ ನಡೆಸಿಕೊಡಲು ಅಹ್ವಾನ .. ಇತ್ಯಾದಿಗಳು ಅವರ ಮುಂದಿವೆ.

ಕೊನೆ ಸುತ್ತಿನಲ್ಲಿ 31 ವರ್ಷದ ಮುಂಬೈ ಬೆಡಗಿ ಶಿಲ್ಪಾ ಶೆಟ್ಟಿಗೆ, 52 ವರ್ಷದ ಜೆರೆಮಿ ಜಾಕ್ಸನ್‌ ತೀವ್ರವಾದ ಸ್ಪರ್ಧೆ ನೀಡಿದರೂ, ಜಾಕ್ಸನ್‌ ಪಡೆದದ್ದು ಶೇ.37ರಷ್ಟು ಜನರ ಬೆಂಬಲ ಮಾತ್ರ. ಡಿಕ್‌ ಬೆನಡ್ಟಿಕ್‌ ಮೂರನೇ ಸ್ಥಾನ ಗಳಿಸಿದ್ದಾರೆ.

ಮನುಷ್ಯರೆಂದ ಮೇಲೆ ತಪ್ಪುಗಳನ್ನು ಮಾಡುವುದು ಸಹಜ, ನಾನು ಈ ಸ್ಪರ್ಧೆಯಿಂದ ಬಹಳಷ್ಟು ಕಲಿತಿದ್ದೇನೆ. ಒಟ್ಟಾರೆ ಇಲ್ಲಿನ ಅನುಭವ ನನಗೆ ಖುಷಿ ಕೊಟ್ಟಿದೆ ಎಂದು ಶಿಲ್ಪಾ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ. ಸಹಸ್ಪರ್ಧಿಗಳಾದ ಜೇಡ್‌ ಗೂಡಿ ಹಾಗೂ ಡೇನಿಯಲ್‌ ಲಾಯ್ಡ್‌ ಅವರ ಅವಹೇಳನಕಾರಿ ಮಾತುಗಳಿಂದ ಶಿಲ್ಪಾ, ಇತ್ತೀಚೆಗೆ ನೊಂದಿದ್ದರು.

(ಏಜನ್ಸೀಸ್‌)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada