‘ಮಾರ್ಚ್ 22’: ಇದು ಕೂಡ್ಲುರ ಹೊಸಚಿತ್ರ
ಕೂಡ್ಲು ರಾಮಕೃಷ್ಣ ನಿರ್ದೇಶನದ ‘ಮಿಸ್ ಕ್ಯಾಲಿಫೋರ್ನಿಯಾ’ ಚಿತ್ರಕ್ಕೆ ಕಡೆಗೂ ಮೋಕ್ಷಸಿಕ್ಕಿದೆ. ಏಪ್ರಿಲ್ ಎರಡನೇ ವಾರದಲ್ಲಿ ಚಿತ್ರ ಬಿಡುಗಡೆಯಾಗುತ್ತಿರುವ ಬೆನ್ನಲ್ಲಿಯೇ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ.
ಚಿತ್ರಕ್ಕೆ ‘ಮಾರ್ಚ್ 22 ’ ಎಂದು ನಾಮಕರಣ ಮಾಡಲಾಗಿದೆ. ಇದಕ್ಕೂ ಮೊದಲು ‘ಇಂಡಿಯಾ-ಪಾಕಿಸ್ತಾನ’ ಎಂಬ ಹೆಸರಿಡಲಾಗಿತ್ತು. ‘ಮಾರ್ಚ್ 22’ -ಈ ಹೆಸರು ಸಹ ಬದಲಾದರೇ ಅಚ್ಚರಿಯೇನಿಲ್ಲ. ಈ ಚಿತ್ರದ ವಸ್ತು ನೀರು. ಮಾರ್ಚ್ 22 ವಿಶ್ವ ಜಲ ದಿನ. ಈ ಹಿನ್ನೆಲೆಯಲ್ಲಿ ಶೀರ್ಷಿಕೆ ಸೂಕ್ತವಾಗಿದೆ ಎನ್ನುತ್ತಾರೆ ಕೂಡ್ಲು ರಾಮಕೃಷ್ಣ.
ಕಥೆ ಕೂಡ್ಲು ಅವರದೇ ಆಗಿದ್ದು, ಈ ಚಿತ್ರದಲ್ಲಿ ಒಟ್ಟು 6 ಹಾಡುಗಳಿವೆ. ಅಮೆರಿಕಾ ಅಮೆರಿಕಾ, ಜೋಕ್‌ಫಾಲ್ಸ್ ಖ್ಯಾತಿಯ ಮನೋಮೂರ್ತಿ ಸಂಗೀತ ನೀಡುತ್ತಿದ್ದಾರೆ. ಚಿತ್ರವನ್ನು ರಾಂಪ್ರಸಾದ್ ಅವರ ವೈದೀಪ್ಸ್ ಚಿತ್ರನಿರ್ಮಾಣ ಸಂಸ್ಥೆ ನಿರ್ಮಿಸುತ್ತಿದೆ.
ಈಗಾಗಲೇ ಚಿತ್ರದ ಹಾಡುಗಳ ಧ್ವನಿಮುದ್ರಣ ಪ್ರಸಾದ್ ರೆರ್ಕಾಡಿಂಗ್ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಚಿತ್ರಸಂಭಾಷಣೆ ನಂಜುಂಡ ಅವರದು. ಚಿತ್ರಕ್ಕಿನ್ನೂ ನಾಯಕನನ್ನ ಆಯ್ಕೆ ಮಾಡಿಲ್ಲ. ಶಿವರಾಜ್‌ಕುಮಾರ್, ಮುರಳಿ ಅಥವಾ ಆದಿತ್ಯ ಹೆಸರುಗಳು ನಾಯಕನ ಪಾತ್ರಕ್ಕೆ ಕೇಳಿ ಬರುತ್ತಿವೆ.
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications