»   » ‘ಖಾನ್‌’ದಾನ್‌ ‘ರೋಶನ್‌’ ಮಾಡಲು ಬಂದ ಜ್ಯೂ.ಹೃತಿಕ್‌

‘ಖಾನ್‌’ದಾನ್‌ ‘ರೋಶನ್‌’ ಮಾಡಲು ಬಂದ ಜ್ಯೂ.ಹೃತಿಕ್‌

Subscribe to Filmibeat Kannada


ಖಾನ್‌-ರೋಶನ್‌ ಕುಟುಂಬದಲ್ಲಿ ಹರ್ಷದ ವಾತಾವರಣ

ಮುಂಬಯಿ : ಖ್ಯಾತ ಹಿಂದಿ ಚಿತ್ರನಟ ಹೃತಿಕ್‌ ರೋಶನ್‌ ಅವರೀಗ ಗಂಡು ಮಗುವಿನ ತಂದೆ. ಹೃತಿಕ್‌ ಪತ್ನಿ ಸುಜಾನ್‌ಖಾನ್‌ ನಗರದ ನಾನಾವತಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ತಾಯಿ-ಮಗು ಆರೋಗ್ಯವಾಗಿದ್ದು, ಹೊಸ ಸದಸ್ಯನ ಆಗಮನದಿಂದ ರೋಶನ್‌ ಮತ್ತು ಖಾನ್‌ ಕುಟುಂಬಗಳು ಹರ್ಷದಲ್ಲಿ ತೇಲುತ್ತಿವೆ. ಕುಟುಂಬದ ಮೂಲಗಳ ಪ್ರಕಾರ ಹೆರಿಗೆಯನ್ನು ಏಪ್ರಿಲ್‌ನಲ್ಲಿ ನಿರೀಕ್ಷಿಸಲಾಗಿತ್ತು. ಆದರೆ, ಸ್ವಲ್ಪ ಬೇಗನೆ ನಡೆದಿದೆ.

ತಂದೆ ರಾಕೇಶ್‌ ರೋಶನ್‌ ನಿರ್ಮಿಸಿ, ನಿರ್ದೇಶಿಸಿದ ‘ಕಹೋ ನಾ ಪ್ಯಾರ್‌ ಹೈ’ ಚಿತ್ರದ ಭಾರೀ ಯಶಸ್ಸಿನ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ಹೃತಿಕ್‌, ಆನಂತರ ಸೋಲಿನ ಸರಮಾಲೆ ಎದುರಿಸಬೇಕಾಯಿತು. ‘ಕೋಯಿ ಮಿಲ್‌ ಗಯಾ’ ಚಿತ್ರದ ಯಶಸ್ಸಿನ ಮೂಲಕ ಅವರು ಮತ್ತೆ ಜನಪ್ರಿಯತೆ ಸಂಪಾದಿಸಿದವರು.

2000 ಡಿಸೆಂಬರ್‌ 20ರಂದು, ನಟ ಸಂಜಯ್‌ಖಾನ್‌ ಪುತ್ರಿ ಸುಜಾನ್‌ಖಾನ್‌ ಅವರನ್ನು ಹೃತಿಕ್‌ ವರಿಸಿದ್ದರು. ಸಂಜಯ್‌ಖಾನ್‌ ಮಾಲೀಕತ್ವದ, ಬೆಂಗಳೂರಿನಲ್ಲಿ ಇರುವ ರೆಸಾರ್ಟೊಂದರಲ್ಲಿ ಮದುವೆ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.

(ಏಜೆನ್ಸೀಸ್‌)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada