»   » ಶಾರೂಖ್‌ ಖಾನ್‌ ಎಂಬ ಜಾತ್ಯತೀತ

ಶಾರೂಖ್‌ ಖಾನ್‌ ಎಂಬ ಜಾತ್ಯತೀತ

By Super
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

    'ಜಾತ್ಯತೀತ' !

    ಹಾಗೆಂದ ಕೂಡಲೇ ಎದೆ ಢವಢವ ಎಂದರೆ ಆಶ್ಚರ್ಯಪಡಬೇಕಿಲ್ಲ . ಅತ್ಯಂತ ಅಪಾಯಕಾರಿ ಶಬ್ದಗಳಲ್ಲಿ 'ಜಾತ್ಯತೀತ' ಶಬ್ದವೂ ಒಂದು. ಪ್ರತಿಯಾಬ್ಬರೂ ತಾವು ಜಾತ್ಯತೀತ ಎಂದು ಹೇಳಿಕೊಳ್ಳುವವರೇ. ಆದರೆ, ಬುದ್ಧಿಜೀವಿಗಳ ಖಾಸಾ ಪಡಖಾನೆ ಒಳಹೊಕ್ಕಂತೆಲ್ಲ ಮಡಿವಂತಿಕೆಯ ಕಮಟು ಹೊಡೆಯಲಾರಂಭಿಸುತ್ತದೆ, ಮುಖವಾಡಗಳು ಕಳಚಿಬೀಳುತ್ತವೆ. ಆ ಕಾರಣದಿಂದಲೇ ಹೇಳುವುದು- 'ಜಾತ್ಯತೀತ' ಶಬ್ದವನ್ನು ಕಪ್ಪುಪಟ್ಟಿಯಲ್ಲಿಡಲಾಗಿದೆ !

    ಒಂದೆಡೆ ಜಾತ್ಯತೀತತೆಯ ಕೂಗು ಬಲವಾದಂತೆ ಇನ್ನೊಂದೆಡೆ ಕೋಮುವೈಷಮ್ಯದ ಕಹಿಯೂ ಗಾಢವಾಗುತ್ತಿರುವಾಗ ಯಾರ ಮಾತು ನಿಜವೆಂದು ನಂಬುವುದು? ನಿಜ, ನಮಗಿಂದು ನಾಯಕರಿಲ್ಲ . ಬೆನ್ನಿಗೆ ಆದರ್ಶಗಳ ಭಾರ ಇರುವುದಾದರೂ ಮುಂದೆ ಬೆಳಕಿಲ್ಲ . ಇಂಥ ಸ್ಥಿತಿಯಲ್ಲಿ , ಅಲ್ಲಲ್ಲಿ ಓಣಿಗಳಲ್ಲಿ ಸುಳಿದಾಡುವ ಹಣತೆಯ ಬೆಳಕೇ ದಾರಿದೀಪ. ಅಂಥದೊಂದು ಹಣತೆಯ ಸೆಳಕಿನ ಕಿಡಿ ನಮ್ಮ ಶಾರೂಖ್‌ ಖಾನ್‌ ಆದಾರಾ ?

    ಬಾಲಿವುಡ್‌ನ ಕಣ್ಮಣಿ ಶಾರೂಖ್‌ ಬಿಬಿಸಿಯ 'ಏಷ್ಯಾ ಟುಡೆ' ಕಾರ್ಯಕ್ರಮಕ್ಕೆ ನೀಡಿರುವ ಸಂದರ್ಶನದಲ್ಲಿ ಒಂದಷ್ಟು ಒಳ್ಳೆಯ ಮಾತಾಡಿದ್ದಾನೆ . ಆತನ ಮಾತುಗಳಲ್ಲಿ ಮಡಿವಂತಿಕೆಯ ಕಮಟಿಲ್ಲ , ಧರ್ಮದ ಘಾಟಿಲ್ಲ , ಬುದ್ಧಿವಂತಿಕೆಯ ಗರ್ವವೂ ಇಲ್ಲ . 38 ವರ್ಷದ ಶಾರೂಖ್‌ ಅಪ್ಪಟ ಮನುಷ್ಯನಂತೆ ಮಾತನಾಡಿದ್ದಾನೆ.

    ಶಾರೂಖ್‌ ಸಂದರ್ಶನದ ಮುಖ್ಯಾಂಶಗಳು:

    ಧರ್ಮ ಕೆಲವರ ಕೈಯಲ್ಲಿ ದುರ್ಬಳಕೆಯಾಗುತ್ತಿದೆ. ಈ ದುರ್ಬಳಕೆಯಿಂದಾಗಿಯೇ ಕೋಮು ಐಕ್ಯತೆ ನಷ್ಟವಾಗುತ್ತಿದೆ.
    ಸಣ್ಣಸಣ್ಣ ಲಾಭಗಳ ತಮ್ಮ ಅಜೆಂಡಾವನ್ನು ಅನುಷ್ಠಾನಗೊಳಿಸಲು ಕೆಲವರು ಧರ್ಮವನ್ನು ತಪ್ಪು ದಾರಿಯಲ್ಲಿ ಬಳಸುತ್ತಿದ್ದಾರೆ.
    ವಿದ್ಯಾವಂತ ಯುವ ಜನತೆ ಧರ್ಮದ ದಳ್ಳುರಿಯ ವಿರುದ್ಧ ಸಿಡಿದೇಳಬೇಕು. ಆಗಷ್ಟೇ ಸೂಪರ್‌ ಪವರ್‌ ಆಗುವತ್ತ ಭಾರತ ಮುನ್ನಡೆಯಲು ಸಾಧ್ಯ. ಮಧ್ಯಮ ವರ್ಗದ ಜನತೆಯಂತೂ ಅತ್ಯಂತ ವೇಗವಾಗಿ ಅಭಿವೃದ್ಧಿಪಥದತ್ತ ಹೆಜ್ಜೆ ಹಾಕುತ್ತಿದೆ. ಇವರಲ್ಲಿ ಧಾರ್ಮಿಕ ಅಪಬಳಕೆಯ ಕುರಿತ ಜಾಗೃತಿ ಉಂಟಾಗಬೇಕು.
    ಜಾತ್ಯತೀತತೆಗೆ ನನಗಿಂತ ಉತ್ತಮ ಉದಾಹರಣೆ ಬೇಕಾ ? ನಾನು ಮಾತನಾಡುವ, ನಡೆದಾಡುವ ಜಾತ್ಯತೀತತೆಯ ಉದಾಹರಣೆ. (ಶಾರೂಕ್‌ ಪತ್ನಿ ಗೌರಿ, ಹಿಂದೂ ಹೆಣ್ಣುಮಗಳು).
    ನಾವು ಜಾತೀಯತೆಯ ವಿರುದ್ಧ ಮಾತನಾಡಿದರಷ್ಟೇ ಸಾಲದು, ಅದನ್ನು ಸಂಪೂರ್ಣವಾಗಿ ವಿರೋಧಿಸಬೇಕು. ಇದು ತುಂಬಾ ಮುಖ್ಯ. ನಾನು ಈ ನಿಟ್ಟಿನಲ್ಲಿಯೇ ಸಾಗುತ್ತಿದ್ದು , ದೇಶದ ಹಿತಾಸಕ್ತಿಯಲ್ಲಿ ನನ್ನ ದಾರಿ ಬಹುಮುಖ್ಯ ಪಾತ್ರವೆಂದು ಭಾವಿಸಿದ್ದೇನೆ.
    ಸ್ವಭಾವತಃ ಭಾರತೀಯರು ಧರ್ಮ ಸಹಿಷ್ಣುಗಳು. ಮುಸ್ಲಿಂ ಯುವಕನೊಬ್ಬ ಕಳೆದ 13 ವರ್ಷಗಳಿಂದ ಜನಪ್ರಿಯತೆಯ ತುದಿಯಲ್ಲಿರುವುದೇ ನನ್ನ ಈ ಮಾತಿಗೆ ಸಾಕ್ಷಿ . ಜನ ನನ್ನನ್ನು ಒಪ್ಪಿಕೊಂಡಿದ್ದಾರೆ. ಯಾರೊಬ್ಬರೂ ನನ್ನ........ ಪ್ರಶ್ನೆ ಮಾಡಿಲ್ಲ .
    ನಾನು ರಾಜಕೀಯಕ್ಕೆ ಸೇರೊಲ್ಲ . ಪ್ರತಿಯಾಬ್ಬರಿಗೂ ತಮ್ಮದೇ ಆದ ನಿರ್ದಿಷ್ಟ ಕೆಲಸವಿದೆ ಎಂದುಕೊಂಡಿರುವೆ. ನಾನು ನನ್ನ ಕೆಲಸದಲ್ಲಿಯೇ ತೊಡಗುತ್ತೇನೆ. ಜನರನ್ನು ಮನರಂಜನೆ ನೀಡುವುದು ಬಹಳ ಮುಖ್ಯ. ಅದು ನನ್ನ ಕೆಲಸ ಕೂಡ.
    ನಾನು ನಟಿಸುತ್ತೇನೆ. ಚಿತ್ರಗಳನ್ನೂ ನಿರ್ಮಿಸುತ್ತೇನೆ.

    ಈಗ ಹೇಳಿ, ಶಾರೂಖ್‌ನಂಥ ಪ್ರಬುದ್ಧತೆ-ಬದ್ಧತೆ ಸಿನಿಮಾದ ಎಷ್ಟು ಮಂದಿಗಿದೆ ?

    English summary
    Dont abuse religion, says Bollywood heartthrob Shah Rukh
    ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?

    Kannada Photos

    Go to : More Photos

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more