»   » ಇದು ಪ್ರಚಾರದ ಕಾಲ. ಸೋಪಾಗಲೀ, ಸೀರೆಯಾಗಲಿ

ಇದು ಪ್ರಚಾರದ ಕಾಲ. ಸೋಪಾಗಲೀ, ಸೀರೆಯಾಗಲಿ

Posted By: Staff
Subscribe to Filmibeat Kannada

ಬೆಂಗಳೂರಿನ ಯಾವುದೇ ರಸ್ತೆಯಲ್ಲಿ ನೋಡಿ ಡಕೋಟಾ ಎಕ್ಸ್‌ಪ್ರೆಸ್‌!

ಸೂಪರ್‌ ಸ್ಟಾರ್‌ಗಳ ಸಿನಿಮಾಗಳೆಲ್ಲ ಮಕಾಡೆ ಮಲಗಿರುವಾಗ, ರಾಕ್‌ಲೈನ್‌ ವೆಂಕಟೇಶ್‌ ಹಾಗೂ ಓಂಪ್ರಕಾಶ್‌ ರಾವ್‌ ಮೊದಲ ಬಾರಿಗೆ ನಾಯಕರಾಗಿ ಅಭಿನಯಿಸಿರುವ ಡಕೋಟಾ ಎಕ್ಸ್‌ಪ್ರೆಸ್‌ ಸಿನಿಮಾ ಜನ ಮೆಚ್ಚುಗೆಗೆ ಪಾತ್ರವಾಗಿದೆ. ಡಕೋಟಾ ಎಕ್ಸ್‌ಪ್ರೆಸ್‌ ಕುಲುಕಿಗೆ ಥಿಯೇಟರ್‌ನಲ್ಲಿ ಜನ ಬಿದ್ದೂಬಿದ್ದೂ ನಗುತ್ತಿದ್ದರೆ, ಅದೇ ಡಕೋಟಾ ಈಗ ರಸ್ತೆಗೂ ಬಂದಿದೆ.

ಗೋಡೆ ಮೇಲೆ ಪೋಸ್ಟರ್‌ ಹಚ್ಚುವಂತಿಲ್ಲ . ಹಚ್ಚಿದರೂ ನಗರ ಪಾಲಿಕೆಯ ನೌಕರರು ಒಪ್ಪೊತ್ತಿನಲ್ಲಿ ಕಿತ್ತು ತೆಗೆಯುತ್ತಾರೆ. ವೃತ್ತಗಳಲ್ಲಿ ಹೋರ್ಡಿಂಗ್‌ ಹಾಕಿಸುವುದು ತುಂಬಾನೇ ದುಬಾರಿ. ಆದರೆ ಪ್ರಚಾರ ಇಲ್ಲದಿದ್ದರೆ ಸಿನಿಮಾ ಗೆಲ್ಲುವುದು ಹೇಗೆ. ಪ್ರಚಾರ ಆಕರ್ಷಕವಾಗಿದ್ದಷ್ಟೂ ಜನರ ಗಮನ ಸೆಳೆಯುತ್ತದೆ ಎನ್ನುವುದು ರಾಕ್‌ಲೈನ್‌ ನಂಬುಗೆ. ಇಂಥ ಸಂದರ್ಭದಲ್ಲಿ ಧೀರನ ಕಣ್ಣಿಗೆ ಬಿದ್ದದ್ದು ಊರಿಂದೂರು ಸುತ್ತುವ ಬಸ್ಸುಗಳು.

ರಾಜ್ಯಾದ್ಯಂತ ಒಟ್ಟು 110 ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಬುಕ್‌ ಮಾಡಿರುವ ರಾಕ್‌ಲೈನ್‌, ಬಸ್ಸುಗಳ ಮೇಲೆ ಡಕೋಟಾ ಎಕ್ಸ್‌ಪ್ರೆಸ್‌ ಪೋಸ್ಟರ್‌ ಮಾದರಿಯ ಚಿತ್ರ ಬರೆಸಿದ್ದಾರೆ. ಬಸ್ಸಿನ ಮೇಲೊಂದು ಬಸ್ಸಿನ ಚಿತ್ರ. ಪ್ರತಿ ಬಸ್ಸಿಗೆ ತಿಂಗಳಿಗೆ ನಾಲ್ಕು ಸಾವಿರ ರುಪಾಯಿ ಬಾಡಿಗೆ. ಬಸ್ಸು ಊರೂರು ಸುತ್ತಿದ್ದಂತೆ, ಡಕೋಟಾ ಎಕ್ಸ್‌ಪ್ರೆಸ್‌ಗೆ ಪ್ರಚಾರ!

ಸದ್ಯಕ್ಕಂತೂ ರಾಕ್‌ಲೈನ್‌ ಐಡಿಯಾ ಗೆದ್ದಿದೆ. ಡಕೋಟಾ ಬಸ್ಸುಗಳನ್ನು ಜನ ಮೆಚ್ಚಿಕೊಂಡಿದ್ದಾರೆ. ಫಲಿತಾಂಶ ಗಲ್ಲಾಪೆಟ್ಟಿಗೆಯಲ್ಲಿ ಕಾಣುತ್ತಿದೆ.

English summary
Dakota Express adds in BMTC and KSRTC buses!
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada