»   » ‘ರಮ್ಯಾ-ರಕ್ಷಿತಾ’ : ಗಾಂಧಿ ನಗರದಲ್ಲಿ ಮತ್ತೆ ಗುಸುಗುಸು!

‘ರಮ್ಯಾ-ರಕ್ಷಿತಾ’ : ಗಾಂಧಿ ನಗರದಲ್ಲಿ ಮತ್ತೆ ಗುಸುಗುಸು!

Subscribe to Filmibeat Kannada


ಆರಂಭದಲ್ಲಿ ಆರತಿ, ಆಮೇಲೆ ಮಾಲಾಶ್ರೀ, ಆಮೇಲೆ ಅಕ್ಷರಶಃ ಮಾಧ್ಯಮಗಳಲ್ಲಿ ಮಿಂಚಿದ್ದು ರಕ್ಷಿತಾ! ಅವರನ್ನು ಬಿಟ್ಟರೆ ರಮ್ಯಾ. ಯಾಕೋ ರಕ್ಷಿತಾ ಮದುವೆಯಾದ ಮೇಲೆ, ಸ್ಯಾಂಡಲ್‌ವುಡ್‌ನಲ್ಲಿ ಈಗೀಗ ಸುದ್ದಿಯೂ ಇಲ್ಲ. ಗಾಳಿ ಸುದ್ದಿಯೂ ಇಲ್ಲ. ಸುಂಟರಗಾಳಿ ಸುದ್ದಿಯೂ ಇಲ್ಲ!

ಈಗ ಮತ್ತೆ ರಮ್ಯಾ ಮತ್ತು ರಕ್ಷಿತಾ ಸುದ್ದಿಯ ಕೇಂದ್ರ ಬಿಂದು! ರಮ್ಯಾ ಮತ್ತು ರಕ್ಷಿತಾ ಮಧ್ಯೆ ತನನಂ ತನನಂ ಶುರುವಾಗಿದೆಯಾ? ಮತ್ತೆ ಒಟ್ಟಾಗಿ ಸಿನಿಮಾದಲ್ಲಿ ಮಾಡ್ತಾರಾ? ಸದ್ಯಕ್ಕೆ ಆ ಸಾಧ್ಯತೆಗಳಿಲ್ಲ. ಮತ್ತೇನಾದರೂ ಕೋಳಿ ಜಗಳ ಶುರುವಾಯಿತಾ ಎಂದು ನೀವು ಬಾಯಿಬಿಡಬೇಡಿ. ಪಾಪ ಇಬ್ಬರೂ ಮನೆಯಲ್ಲಿ ಆರಾಮವಾಗಿದ್ದಾರೆ. ‘ರಮ್ಯಾ-ರಕ್ಷಿತಾ’ ಅನ್ನೋ ಹೊಸ ಚಿತ್ರದ ಶೀರ್ಷಿಕೆ, ಗಾಂಧಿನಗರದಲ್ಲೀಗ ಮಾತಿನ ವಿಷಯ.

ಈ ಚಿತ್ರವನ್ನು ‘ಬೆಳ್ಳಿ ಬೆಟ್ಟ’ದ ನಿರ್ಮಾಪಕ ಪಿ.ಎಸ್‌.ಹುತ್ತೇಶ್‌ ನಿರ್ಮಾಣ ಮಾಡುತ್ತಿದ್ದಾರೆ. ಕವಿ ರಾಜೇಶ್‌ ಸಿನಿಮಾದ ನಿರ್ದೇಶಕರು. ಇವರು ‘ರೋಮಾಂಚನ’ ಮತ್ತು ‘ರೀಲ್‌ ರೀಲ್‌’ ನಿರ್ದೇಶಿಸಿದ ಕುಖ್ಯಾತರು. ಪ್ರದೀಪ್‌, ಸೂರ್ಯ, ಇಷಾ, ಸಂಗೀತ ಶೆಟ್ಟಿ ಸೇರಿದಂತೆ ಸಾಕಷ್ಟು ಹೊಸ ಮುಖಗಳೇ ಚಿತ್ರದಲ್ಲಿವೆ.

ರಮ್ಯಾ ಪಾತ್ರವನ್ನು ಜಂಭದ ಕೋಳಿಯಂತೆ, ರಕ್ಷಿತಾ ಪಾತ್ರವನ್ನು ಮುಗ್ಧೆಯಂತೆ ಚಿತ್ರಿಸುವ ಪ್ರಯತ್ನ ನಡೆದಿದೆ. ರಮ್ಯಾ ಮತ್ತು ರಕ್ಷಿತಾ ನಡುವಿನ ಕೋಳಿ ಜಗಳವೇ ಕತೆಯ ಹಂದರ. ಈ ಬಗ್ಗೆ ರಮ್ಯಾ ಮತ್ತು ರಕ್ಷಿತಾ ಇನ್ನೂ ಏನೂ ಹೇಳಿಲ್ಲ. ನೀವೇನಾದ್ರೂ ಹೇಳೋದಿದೆಯಾ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada