»   » ಸದ್ಯಕ್ಕೆ ಅಂಬರೀಷ್‌ ಸಿನಿಮಾಗಳಲ್ಲಿ ನಟಿಸುತ್ತಿಲ್ಲ

ಸದ್ಯಕ್ಕೆ ಅಂಬರೀಷ್‌ ಸಿನಿಮಾಗಳಲ್ಲಿ ನಟಿಸುತ್ತಿಲ್ಲ

Posted By: Staff
Subscribe to Filmibeat Kannada

ಅಂಬಿಗೆ ಐವತ್ತು !
ಕನ್ನಂಬಾಡಿಯಲ್ಲಿ ನೀರು ಕಡಿಮೆಯಾಗಿರಬಹುದು ; ಕಬ್ಬಿನ ನಗರಿ ಮಂಡ್ಯದಲ್ಲಿ ಮಾತ್ರ ಸಂಭ್ರಮ ತುಳುಕುತ್ತಿದೆ. ಮೇ 29 ರ ಸಂಜೆ 5 ಗಂಟೆಗೆ, ವಿಶ್ವೇಶ್ವರಯ್ಯ ಆಟದ ಮೈದಾನದಲ್ಲಿ 'ಅಂಬಿ-50" ವಿಶೇಷ ಕಾರ್ಯಕ್ರಮ. ಪ್ರಸಿದ್ಧ ಚಿತ್ರನಟರು ಹಾಗೂ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಅಂಬಿ ಹುಟ್ಟುಹಬ್ಬದ ಆಚರಣೆ.

ಅಂಬಿ ಸಿನಿ ಕಲಾವಿದ ಮಾತ್ರವಲ್ಲ ; ರಾಜಕಾರಣಿಯೂ ಹೌದು. ಆ ಕಾರಣದಿಂದಲೇ ಹುಟ್ಟುಹಬ್ಬದ ಕಾರ್ಯಕ್ರಮ ಒಂದು ದಿಕ್ಕಿನಿಂದ ಸಿನಿಮಾ ಕಾರ್ಯಕ್ರಮದಂತೆ, ಇನ್ನೊಂದು ದಿಕ್ಕಿನಿಂದ ರಾಜಕೀಯ ಕಾರ್ಯಕ್ರಮದಂತೆ ಕಂಡರೆ ಅದು ಅಂಬಿ ತಪ್ಪಲ್ಲ . ಅದೇನೇ ಇರಲಿ, ತವರು ಜಿಲ್ಲೆಯಲ್ಲಿ ಅಂಬಿಗೆ ಶುಭಾಶಯ ಸಲ್ಲಿಸುವ ಕಾರ್ಯಕ್ರಮ ಅದ್ದೂರಿ ಅನ್ನುವುದರಲ್ಲಿ ಎರಡು ಮಾತಿಲ್ಲ .

ಅಖಿಲ ಕರ್ನಾಟಕ ಅಂಬರೀಷ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಪಿ.ಶಿವರಾಂ ದಟ್ಸ್‌ಕನ್ನಡ.ಕಾಂಗೆ ತಿಳಿಸಿರುವಂತೆ- ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ , ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಫರೂಕ್‌ ಅಬ್ದುಲ್ಲಾ ಅಂಬಿ ಹುಟ್ಟುಹಬ್ಬದಲ್ಲಿ ಭಾಗವಹಿಸುವರು. ಅಲ್ಲದೇ ಸಿನಿಮಾ ರಂಗದಿಂದ ವಿಷ್ಣು ವರ್ಧನ್‌, ಜಯಪ್ರದಾ, ಶತ್ರುಘ್ನ ಸಿನ್ಹಾ , ಅರ್ಜುನ್‌ ಸರ್ಜಾ, ರಜನಿಕಾಂತ್‌, ಶಿವರಾಜ್‌ ಕುಮಾರ್‌, ರವಿಚಂದ್ರನ್‌, ರಾಕ್‌ಲೈನ್‌ ವೆಂಕಟೇಶ್‌, ಪುನೀತ್‌, ಮೋಹನ್‌ಬಾಬು ಸೇರಿದಂತೆ ಸಾಲು ಸಾಲು ತಾರೆಯರು ಅಂಬಿ- 50 ಸಮಾರಂಭವನ್ನು ಬೆಳಗಲಿದ್ದಾರೆ.

ಅಂಬರೀಷ್‌ರ 49ನೇ ಹುಟ್ಟು ಹಬ್ಬ ನಡೆದದ್ದು ದಾವಣಗೆರೆಯಲ್ಲಿ . ಅಲ್ಲಿ ಅವರಿಗೆ ವಜ್ರದ ಕಿರೀಟ ಅರ್ಪಿಸಲಾಗಿತ್ತು . ಈ ಬಾರಿಯ ಹುಟ್ಟುಹಬ್ಬದಲ್ಲಿ ಅಂಬರೀಷ್‌ ಅವರ ಜೀವನ ಚರಿತ್ರೆ ಒಳಗೊಂಡ ಅಭಿನಂದನಾ ಗ್ರಂಥ ಹೊರ ತರಲಾಗುತ್ತಿದೆ. ಅಂಬಿ ಅವರನ್ನು ಕುರಿತು ಅವರ ಆತ್ಮೀಯರು ಬರೆದ ಲೇಖನಗಳನ್ನು ಒಳಗೊಂಡ ಈ ಕೃತಿ ಚಿತ್ರರಂಗದ ಏಳುಬೀಳುಗಳ ದಾಖಲೆಯೂ ಆಗಿದೆ. ವರ್ಣರಂಜಿತ ಚಿತ್ರಗಳು, ಸಂಸದರಾಗಿ ಅಂಬಿ ಸಾಧನೆಗಳ ಪಕ್ಷಿನೋಟವೂ ಅಭಿನಂದನಾ ಗ್ರಂಥದಲ್ಲಿದೆ ಎಂದು ಶಿವರಾಂ ತಿಳಿಸಿದ್ದಾರೆ.

ಅಂದಹಾಗೆ, ಮೇ 30 ರಂದು ಕ್ರೇಜಿಸ್ಟಾರ್‌ ರವಿಚಂದ್ರನ್‌ ಹುಟ್ಟುಹಬ್ಬ!

English summary
Kannada Film Actor Rebelstar Ambarish celebrates His 50<SUP>th</SUP> Birthday
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada