»   » ಸಿಲ್ಕ್‌ ಸೀರೆಯಲ್ಲಿ ಮಿರಮಿರ ಮಿಂಚಿದ ಬಿಪಾಶಾ

ಸಿಲ್ಕ್‌ ಸೀರೆಯಲ್ಲಿ ಮಿರಮಿರ ಮಿಂಚಿದ ಬಿಪಾಶಾ

Subscribe to Filmibeat Kannada

ಬಾಲಿವುಡ್‌ನ ಮಾದಕ ಸುಂದರಿ, ಹಸಿಬಿಸಿ ನಟಿ ಬಿಪಾಶಾ ಬಸು ಬೆಂಗಳೂರಿಗೆ ಆಗಮಿಸಿದ್ದರು. ಮೈತುಂಬ ಬಂಗಾರ ತುಂಬಿಕೊಂಡು, ಸಿಲ್ಕ್‌ ಸೀರೆಯಲ್ಲಿ ಈ ನೀರೆ ಬಳುಕುತ್ತಲೇ, ಎರಡು ಖಜಾನಾ ಮಳಿಗೆಗಳನ್ನು ಉದ್ಘಾಟಿಸಿದರು.

ಚೆನ್ನೈ ಮೂಲದ ಆಭರಣ ಮಾರಾಟ ಸಂಸ್ಥೆ ‘ಖಜಾನಾ’ ತಳಕಿನ ಸಿಂಗಾರಿಯನ್ನು ಕರೆಸಿ, ನಗರದ ಕಮರ್ಷಿಯಲ್‌ ಸ್ಟ್ರೀಟ್‌ ಹಾಗೂ ಜಯನಗರ 3ನೇ ಬ್ಲಾಕ್‌ನಲ್ಲಿ ತಲಾ ಒಂದೊಂದು ಮಳಿಗೆಗೆ ಚಾಲನೆ ನೀಡಿದೆ. ಬಿಪಾಶಾ ನೋಡಲು ಜನ ಮುಗಿಬಿದ್ದಿದ್ದರು. ಸೀರೆ ಮೇಲೆಯೇ ಬಿಪಾಶಾ ಸೌಂದರ್ಯವನ್ನು ಆರಾಧಿಸುತ್ತಿದ್ದ ಅಭಿಮಾನಿಗಳಿಗೆ, ಅದೊಂದು ರೋಮಾಂಚಕ ಅನುಭವ. ನೆಚ್ಚಿನ ನಟಿಯ ನೆರಳು ಮೈಮೇಲೆ ಬಿದ್ದರೆ ಸಾಕು ಎಂಬಂತಹ ಧನ್ಯತೆ.

ಏನಮ್ಮಾ ಸಮಾಚಾರ? :

ಹಲವು ವರ್ಷಗಳಿಂದ ಬಾಲಿವುಡ್‌ ನಟ ಹಾಗೂ ತನ್ನ ಮಾಡಲಿಂಗ್‌ ಸಂಗಾತಿ ಜಾನ್‌ ಅಬ್ರಹಾಂ ಜೊತೆ ಚಕ್ಕಂದದಲ್ಲಿ ತೊಡಗಿರುವ ಬಿಪಾಶಾ, ಮದುವೆ ಕಾಲದಲ್ಲಿ ಆಭರಣ ಮಳಿಗೆ ಉದ್ಘಾಟಿಸುವ ಮೂಲಕ ತಾನೂ ಮದುವೆಗೆ ಸಿದ್ಧಗೊಂಡಿದ್ದೇನೆ ಎಂಬ ಸಂದೇಶ ರವಾನಿಸಿದ್ದಾರೆಯೇ ಎಂಬುದು ಬಿಪಾಶಾ ಪ್ರಿಯರ ಬಿಸಿಬಿಸಿ ಉವಾಚ...!

ಖಜಾನಾ ಬಗ್ಗೆ ಎರಡು ಮಾತು :

ಕಳೆದ ಹತ್ತು ವರ್ಷಗಳಿಗಿಂತಲೂ ಚಿನ್ನಾಭರಣ ಉದ್ಯಮದಲ್ಲಿ ಖಜಾನಾ ತೊಡಗಿಸಿಕೊಂಡಿದೆ. ಈಗಾಗಲೇ ಮುಂಬಯಿ ಹಾಗೂ ಕೋಲ್ಕತಾಗಳಲ್ಲಿ ಮಾರಾಟ ಮಳಿಗೆಗಳನ್ನು ಹೊಂದಿರುವ ಸಂಸ್ಥೆ, ಕಳೆದ ವರ್ಷವಷ್ಟೇ ಆಂಧ್ರಪ್ರದೇಶದಲ್ಲೂ ಮಳಿಗೆಯಾಂದನ್ನು ತೆರೆದಿತ್ತು. ಆಂಧ್ರಪ್ರದೇಶದ ನಂತರ ಇದೀಗ ರಾಜ್ಯಕ್ಕೆ ಕಾಲಿಟ್ಟಿದೆ.

ಸದ್ಯಕ್ಕೆ ಚಿನ್ನಾಭರಣ ಮಾರಾಟಗಾರರು ಗ್ರಾಂ ಒಂದಕ್ಕೆ 845 ರೂಪಾಯಿ ಬೆಲೆ ನಿಗದಿಪಡಿಸಿದ್ದಾರೆ. ಆದರೆ ನಾವು ಪ್ರತಿ ಗ್ರಾಂಗೆ 40 ರೂಪಾಯಿ ಕಡಿಮೆ ತೆಗೆದುಕೊಳ್ಳುತ್ತಿದ್ದೇವೆ. ಅಂದರೆ ನಮ್ಮಲ್ಲಿ ಆಭರಣ ಕೊಳ್ಳುವ ಗ್ರಾಹಕರು ಗ್ರಾಂ ಒಂದಕ್ಕೆ 845 ರೂಪಾಯಿ ಬದಲಿಗೆ 805 ರೂಪಾಯಿ ನೀಡಿದರೆ ಸಾಕು. ನಾವು ಆಭರಣ ತಯಾರಿಕೆ ವೆಚ್ಚವನ್ನು ವಿಧಿಸುವುದಿಲ್ಲ. ಗ್ರಾಹಕರು ಕೇವಲ ಚಿನ್ನದ ಬೆಲೆ ನೀಡಿದರೆ ಸಾಕು ಎಂದು ಸಂಸ್ಥೆಯ ವ್ಯವಸ್ಥಾಪಕ ಮಂಡಳಿ ತಿಳಿಸಿದೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada