»   » ಹಿಂದಿ ಹಾಸ್ಯನಟ ಜಾನಿ ವಾಕರ್‌ ನಿಧನ

ಹಿಂದಿ ಹಾಸ್ಯನಟ ಜಾನಿ ವಾಕರ್‌ ನಿಧನ

Subscribe to Filmibeat Kannada

ಬಾಲಿವುಡ್‌ನ ಕಚಗುಳಿಗಾರ ಜಾನಿ ವಾಕರ್‌ ಮಂಗಳವಾರ (ಜು.29) ಮುಂಬಯಿಯಲ್ಲಿ ನಿಧನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು.

ಈತನ ಹೆಸರು ಬದ್ರುದ್ದೀನ್‌ ಕಾಜಿ ಅನ್ನೋದು ಅನೇಕ ಸಿನಿಮಾಭಿಮಾನಿಗಳಿಗೆ ಗೊತ್ತಿರಲಿಕ್ಕಿಲ್ಲ. ಮಂಗಳೂರು ಮೂಲದ ಗುರುದತ್‌ ಈತನಿಗೆ ಆಗ ಹೆಸರಾಗಿದ್ದ ವಿಸ್ಕಿ ಬ್ರಾಂಡ್‌ನ ಹೆಸರನ್ನು ಇಟ್ಟು, ಸಿನಿಮಾ ಲೋಕಕ್ಕೆ ಕಚಗುಳಿಯಿಡಲು ತಂದು ಬಿಟ್ಟರು. ಬಸ್‌ ಕಂಡಕ್ಟರಾಗಿದ್ದ ಬದ್ರುದ್ದೀನ್‌ ‘ಬಾಜಿ’ ಚಿತ್ರದ ಬ್ರೇಕ್‌ನ ನಂತರ ಜಾನಿ ವಾಕರ್‌ ಅಂತ ಮನೆಮಾತಾದರು.

ಗುರುದತ್‌ ಅಲ್ಲದೆ ರಾಜ್‌ ಖೋಸ್ಲ, ಬಿ.ಆರ್‌.ಛೋಪ್ರಾ, ವಿಜಯ್‌ ಆನಂದ್‌, ಬಿಮಲ್‌ ರಾಯ್‌ ಮೊದಲಾದ ನಿರ್ದೇಶಕರ ಗರಡಿಯಲ್ಲಿ ಪಳಗಿದವರು ಜಾನಿ. ಇವರ ಅಭಿನಯದ ಚೋರಿ ಚೋರಿ, ಮಧುಮತಿ, ಪ್ಯಾಸಾ, ಸಿಐಡಿ, ನಯಾ ದೌರ್‌ ಮತ್ತು ಮೇರೇ ಮೆಹಬೂಬ್‌ ಮರೆಯಲಾರದ ಚಿತ್ರಗಳು.

ಕುಡುಕನ ಪಾತ್ರಧಾರಿಯಾಗಿ ನಗಿಸುತ್ತಿದ್ದ ಜಾನಿ ಹೃಷಿಕೇಶ್‌ ಮುಖರ್ಜಿಯ ಆನಂದ್‌ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಪ್ರೇಕ್ಷಕರನ್ನು ಅಳಿಸುವ ಮೂಲಕ ತಾವೊಬ್ಬ ಪಳಗಿದ ನಟ ಎಂಬುದನ್ನು ಸಾಬೀತು ಮಾಡಿದ್ದರು.

14 ವರ್ಷಗಳ ಅಂತರದ ನಂತರ ಕಮಲ ಹಾಸನ್‌ ತಮ್ಮ ಚಾಚಿ 420 ಚಿತ್ರದಲ್ಲಿ ಜಾನಿ ಕೈಲಿ ಅಭಿನಯ ಮಾಡಿಸಿದ್ದರು. ಅದು ಜಾನಿ ವಾಕರ್‌ ಕೊನೆ ಚಿತ್ರ.

ಜಾನಿ ಇನ್ನಿಲ್ಲ, ಆದರೆ ಆತನ ಕಳಗುಳಿಗಳು ಎಂದಿಗೂ ಜೀವಂತ.

(ಇನ್ಫೋ ವಾರ್ತೆ)


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada