»   » ಬೆಂಗಳೂರಲ್ಲಿ ಮೆಹಮೂದ್‌ ಮರಳಿಮಣ್ಣಿಗೆ

ಬೆಂಗಳೂರಲ್ಲಿ ಮೆಹಮೂದ್‌ ಮರಳಿಮಣ್ಣಿಗೆ

Posted By: Staff
Subscribe to Filmibeat Kannada
Hindi film comedian Mehmood
ಬೆಂಗಳೂರು : ಜುಲೈ 23ರಂದು ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ನಿಧನರಾದ ಬಾಲಿವುಡ್‌ ನಗೆಚಕ್ರವರ್ತಿ ಮೆಹಮೂದ್‌ ಆಲಿ ಅವರ ಅಂತ್ಯಸಂಸ್ಕಾರ ನಗರದ ಹೊರವಲಯದಲ್ಲಿನ ಕೆಂಚನಹಳ್ಳಿಯಲ್ಲಿ ಗುರುವಾರ (ಜುಲೈ29) ನಡೆಯಿತು.

ನೂರಾರು ಅಭಿಮಾನಿಗಳು, ಬಂಧುಮಿತ್ರರು ಹಾಗೂ ಕಲಾವಿದರ ಸಮ್ಮುಖದಲ್ಲಿ ಮೆಹಮೂದ್‌ ಆಲಿ ಅವರ ಅಂತ್ಯಕ್ರಿಯೆ ನಡೆಯಿತು. ನಮಾಜ್‌-ಇ-ಜನಝಾ (ಸಾವಿಗಾಗಿ ಪ್ರಾರ್ಥನೆ) ನಂತರ ಮೆಹಮೂದ್‌ ಆಲಿ ತಂದೆ ಮುಮ್ತಾಜ್‌ ಆಲಿ ತಮ್ಮ ಪುತ್ರನ ಅಂತಿಮ ಸಂಸ್ಕಾರ ನೆರವೇರಿಸಿದರು. ಅಂತ್ಯ ಸಂಸ್ಕಾರ ಮೆಹಮೂದ್‌ರ ಎಸ್ಟೇಟ್‌ನಲ್ಲಿ ನಡೆಯಿತು.

ಜುಲೈ 28ರ ಬುಧವಾರ ಸಂಜೆ ಮುಂಬಯಿಯಿಂದ ಮೆಮಮೂದ್‌ರ ದೇಹವನ್ನು ಬೆಂಗಳೂರಿಗೆ ತರಲಾಗಿತ್ತು .

ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌, ಕೇಂದ್ರದ ಮಾಜಿ ಸಚಿವ ಹಾಗೂ ನಟ ಶತ್ರುಘ್ನ ಸಿನ್ಹ, ಕಾಂಗ್ರೆಸ್‌ ನಾಯಕ ಸಿ.ಕೆ.ಜಾಫರ್‌ ಷರೀಫ್‌, ಸಂಸದ ಅಂಬರೀಷ್‌, ನಟ ಸಂಜಯ್‌ ಖಾನ್‌, ನಟ ದ್ವಾರಕೀಶ್‌, ಖಳನಟ ಬಾಬ್‌ ಕ್ರಿಸ್ಟೊ , ಮೆಹಮೂದ್‌ ಪುತ್ರ ಹಾಗೂ ಪ್ರಸಿದ್ಧ ಗಾಯಕ ಲಕ್ಕಿ ಆಲಿ ಮುಂತಾದವರು ಅಗಲಿದ ನಗೆನಟನಿಗೆ ಅಂತಿಮ ನಮನ ಸಲ್ಲಿಸಿದ ಕೆಲ ಪ್ರಮುಖರು.

ಮೆಹಮೂದ್‌ರ ದೈತ್ಯ ಪ್ರತಿಭೆಯನ್ನು ಸ್ಮರಿಸಿಕೊಂಡ ನಟ ಸಂಜಯ್‌ಖಾನ್‌- ಆತ ಹಾಸ್ಯಕ್ಕೆ ಹೊಸ ಭಾಷ್ಯ ಬರೆದ ಪ್ರತಿಭಾವಂತ ಎಂದು ಬಣ್ಣಿಸಿದರು.(ಪಿಟಿಐ)

English summary
Body of Legendary Hindi film comedian Mehmood Ali laid to rest near Bangalore . Mehmood dead in the United States on July 23, 2004. He was 72.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada