»   » ಜಿಂಕೆ ಮರಿ ಮರಳಿ ಬಂತೈದೆ ನೋಡ್ಲಾ ಮಗಾ !

ಜಿಂಕೆ ಮರಿ ಮರಳಿ ಬಂತೈದೆ ನೋಡ್ಲಾ ಮಗಾ !

Posted By:
Subscribe to Filmibeat Kannada

ಎರಡೂವರೆ ವರ್ಷಗಳ ನಂತರ ಸ್ಯಾಂಡಲ್‌ವುಡ್‌ಗೆ ಮತ್ತೆ ಜಿಂಕೆ ಮರಿಯ ಆಗಮನವಾಗಿದೆ! ಪ್ರಸ್ತುತ ಮುಂಬಯಿನಲ್ಲಿ ನೆಲೆಸಿರುವ ರೇಖಾ, ಜಾಹೀರಾತು ಮತ್ತು ಸಿನಿಮಾ ಕ್ಷೇತ್ರದಲ್ಲಿ ಬಿಜಿಯಾಗಿದ್ದರಂತೆ. ಈಗ ಸ್ವಲ್ಪ ಬಿಡುವು ಮಾಡಿಕೊಂಡು ಕನ್ನಡದತ್ತ ತಿರುಗಿ ನೋಡಿದ್ದಾರೆ.

ಉದಯ ಟಿ.ವಿ.ಯ ‘ಕಾಮಿಡಿಟೈಮ್‌’ ಕಾರ್ಯಕ್ರಮದ ಮೂಲಕ ಕರ್ನಾಟಕದ ಮಾನೆಮಾತಾಗಿರುವ ಗಣೇಶ್‌, ರೇಖಾ ಜೋಡಿಯಾಗಿ ‘ಚೆಲ್ಲಾಟ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆ ಮೂಲಕ ನಾಯಕ ನಟನಾಗಿ ಬಡ್ತಿ ಹೊಂದುತ್ತಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ರೇಖಾ, ಗಣೇಶ್‌ರೊಂದಿಗೆ ನಟಿಸಲು ನನಗೆ ಮುಜುಗರವೇನಿಲ್ಲ. ನನಗೆ ಹೊಸಬರು, ಹಳಬರು ಎಂಬ ವ್ಯತ್ಯಾಸವಿಲ್ಲ. ಪಾತ್ರ ಮುಖ್ಯ ಎನ್ನುತ್ತಾರೆ. ಹುಚ್ಚ, ಚಿತ್ರಾ, ತುಂಟಾಟ ಮತ್ತು ಮೊನಾಲಿಸಾ ಚಿತ್ರಗಳಲ್ಲಿ ಪ್ರೇಕ್ಷಕರ ಎದೆಮಿಡಿತ ಹೆಚ್ಚಿಸಿ, ಕಾಣದಂತೆ ಮಾಯವಾಗಿದ್ದ ರೇಖಾರ ‘ಚೆಲ್ಲಾಟ’ದ ಬಗ್ಗೆ ಗಾಂಧಿನಗರದಲ್ಲಿ ಕುತೂಹಲಗಳಿವೆ.

ಬಾಡಿ ಲಾಂಗ್ವೇಜ್‌ ಮೂಲಕವೇ ಎಲ್ಲರನ್ನೂ ನಕ್ಕುನಲಿಸುವ ಗಣೇಶ್‌ ನಾಯಕನಾಗಿ ಅಭಿನಯಿಸುತ್ತಿರುವ ಈ ಚಿತ್ರವನ್ನು ಎಂ.ಡಿ.ಶ್ರೀಧರ್‌ ನಿರ್ದೇಶಿಸುತ್ತಿದ್ದಾರೆ. ದಯಾನಂದ್‌ಪೈ ಮತ್ತು ಪ್ರದೀಪ್‌ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಗುರುಕಿರಣ್‌ ಸಂಗೀತ ನೀಡುತ್ತಿದ್ದಾರೆ.

Post your views

ರೇಖಾ ವಾಲ್‌ಪೇಪರ್‌


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada