For Quick Alerts
  ALLOW NOTIFICATIONS  
  For Daily Alerts

  ಆತ್ಮಹತ್ಯೆ ಸುತ್ತಮುತ್ತ(ಭಾಗ-1)

  By Staff
  |
  • ಆವುಟರಾಯ
  ತಿಂದ ಒಂಬತ್ತು ನಿದ್ರೆ ಮಾತ್ರೆ ಅರಗದೆ ಮದ್ರಾಸಿನ ನರ್ಸಿಂಗ್‌ ಹೋಮ್‌ನಲ್ಲಿ ತೇಲುಗಣ್ಣು ಮಾಡಿಕೊಂಡು ಮಲಗಿರುವ ವಿಜಯಲಕ್ಷ್ಮಿ ಅಲಿಯಾಸ್‌ ಚಪ್ಲಿ ವಿಜಿ ಎಂಬ ಬುದ್ಧಿವಂತ ನಟಿಯನ್ನು ‘ಅಯ್ಯೋ’ ಅನ್ನಬೇಕೋ, ‘ಅಯ್ಯಯ್ಯೋ’ ಎಂಬಂತೆ ನೋಡಬೇಕೋ ಅರ್ಥವಾಗದೆ ಕನ್ನಡ ಇಂಡಸ್ಟ್ರಿ ಚಿಂತೆಗೆ ಬಿದ್ದಿದೆ. ಮೂರು ದಿನಗಳ ಹಿಂದೆ ಈ ಹುಡುಗಿ ಸತ್ತೇ ಹೋದಳು ಅಂತ ಸುದ್ದಿ ಬಂದಿತ್ತು.

  ಇವತ್ತು ಈಕೆಯಾಂದಿಗೆ ಉದಯ ಟೀವಿಯ ‘ಬಂಗಾರದ ಬೇಟೆ’ಯಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ರಮೇಶ್‌ ಇಂದಿರ ಎಂಬ ಯುವಕ ಮದರಾಸಿನ ಪೊಲೀಸರ ಕೈಗೆ ಸಿಗದೆ ನಿರೀಕ್ಷಣಾ ಜಾಮೀನು ಪಡೆಯಲು ಓಡಾಡುತ್ತಿದ್ದಾನೆ. ಟೀವಿಗಳಿಗೆ ಸೀರಿಯಲ್ಲೂ, ಈ ‘ಬಂಗಾರದ ಬೇಟೆ’ (ಬಂಬೇ)ಥರದ ಕಾರ್ಯಕ್ರಮಗಳನ್ನು ಮಾಡಿಕೊಡುವ ರಾಧಿಕಾಳ ‘ರಡಾನ್‌’ ಸಂಸ್ಥೆಯವರು ಕೂಡುವ ಜಾಗಕ್ಕೆ ಹಲಸಿನ ಅಂಟು ಮೆತ್ತಿಕೊಂಡವರಂತೆ ಪರದಾಡುತ್ತಿದ್ದಾರೆ.

  ಆತ ರಮೇಶ್‌

  ಖುದ್ದಾಗಿ ರಮೇಶ್‌ ಇಂದಿರ ಹೇಳುವಂತೆ, ಆತ ಮತ್ತು ವಿಜಯಲಕ್ಷ್ಮಿಯ ನಡುವಿನದು।/್ಛಟ್ಞಠಿ। short lived love story! ಈ ಹಿಂದೆ ‘ಮುಕ್ತ’, ‘ಮಾಯಾಮೃಗ’ ಮುಂತಾದ ಸೀರಿಯಲ್‌ಗಳಲ್ಲಿ ಕೆಲಸ ಮಾಡಿದ್ದ ರಮೇಶ್‌ ಕೆಟ್ಟ ಮನುಷ್ಯನೇನಲ್ಲ. ಆತನ ಬಗ್ಗೆ ಹುಡುಗೀರಿಗೆ ಸಂಬಂಧಿಸಿದಂತೆ ಅಪವಾದಗಳಿಲ್ಲ. ಸೀರಿಯಲ್‌ ನಟಿಯಾಬ್ಬಾಕೆಗೆ ಪ್ರಪೋಸ್‌ ಮಾಡಿ, ಆಕೆ ನಿರಾಕರಿಸಿದಾಗಲೂ ತನ್ನ ಪಾಡಿಗೆ ತಾನಿದ್ದ ಮನುಷ್ಯ. ಈ ಮಧ್ಯೆ ಉದಯದವರಿಗಾಗಿ ನಟಿ ರಾಧಿಕಾ ತಮ್ಮ ರಡಾನ್‌(Radaan)ಮೀಡಿಯಾ ವರ್ಕ್ಸ್‌ ಮೂಲಕ ‘ಬಂಬೇ’ ಎಪಿಸೋಡ್‌ಗಳನ್ನು ಮಾಡಿಕೊಡುತ್ತೇನೆ ಅಂದಾಗ, ಅದಕ್ಕೆ ನಿರ್ದೇಶಕರಾಗಿ ನೇಮಕಗೊಂಡವರು ಎಂ.ಜಿ.ಸತ್ಯ. ಆದರೆ ಬಹುಪಾಲು ಕೆಲಸ ನಿರ್ವಹಿಸುತ್ತಿದ್ದುದು ರಮೇಶ ಇಂದಿರ. ಈ ಕಾರ್ಯಕ್ರಮಕ್ಕೆ ಆ್ಯಂಕರ್‌ ಆಗಿ ಬಂದವಳು ವಿಜಯಲಕ್ಷ್ಮಿ.

  ಪ್ರಪೋಸ್‌ ಮಾಡಿದಳು

  ಮೊಟ್ಟಮೊದಲ ದಿನವೇ ಸೆಟ್‌ನಲ್ಲಿ ವಿಜಯಲಕ್ಷ್ಮಿ ಮತ್ತು ರಮೇಶ್‌ ಪರಸ್ಪರರನ್ನು ಏನಂತ ಕರೆದುಕೊಳ್ಳಬೇಕು ಎಂಬುದರ ತೀರ್ಮಾನವಾಗಿತ್ತು. ಅವಳು ‘ರಮೇಶ್‌’ ಅಂತ ಕರೆದರೆ ಈತ ‘ಲಕ್ಷ್ಮೀ’ ಅಂತ ಕರೆಯಬೇಕು ಎಂಬ ಕರಾರಾಯಿತು. ಹಾಗೆಯೇ ಸುಸೂತ್ರವಾಗಿ ಐವತ್ತೆರಡು ಎಪಿಸೋಡುಗಳ ‘ಬಂಬೇ’ ಶೂಟ್‌ ಮುಗಿಯಿತು. ಇದರ ಮಧ್ಯೆ ರಮೇಶ್‌ ಪ್ರಕಾರ, ವಿಜಯಲಕ್ಷ್ಮಿ ಆತನಿಗೆ ಪ್ರಪೋಸ್‌ ಮಾಡಿದಳು. ಅದು ಇಬ್ಬರಿಗೂ ಸಮ್ಮತವಿತ್ತು. ತುಂಬ ಚಿಕ್ಕ ಅವಧಿಯ ಒಂದು affair ಇವರಿಬ್ಬರ ಮಧ್ಯೆ ಇತ್ತು. ಹಾಗಂತ ಇಬ್ಬರೂ ತಂತಮ್ಮ ಗಡಿ ನಿಯಂತ್ರಣಾ ರೇಖೆಯನ್ನು ದಾಟಿರಲಿಲ್ಲ. ಮಧ್ಯೆ ಏನಾಯಿತೋ ಏನೋ, ಏಪ್ರಿಲ್‌ 2006ರ ಕೊನೇ ವಾರದ ಹೊತ್ತಿಗೆ ವಿಜಯಲಕ್ಷ್ಮಿಯೇ ‘ಈ affair ಸಾಕು’ ಅಂತ ಘೋಷಿಸಿ ದ್ವಿಪಕ್ಷೀಯ ಮಾತು ಹಾಗೂ ಕತೆ ಮುರಿದು ಹಾಕಿದಳು. ಅಲ್ಲಿಗೆ short lived affair ಮುಗಿದು ಹೋಯಿತು.

  ಕಂಪ್ಲೇಂಟ್‌ ಕೊಡ್ತೇನೆ

  ಇಷ್ಟಾದ ಮೇಲೆ ರಮೇಶ್‌ ಜೀವ ತಡೆಯಲಾಗದೆ ಎರಡು ಬಾರಿ ವಿಜಯಲಕ್ಷ್ಮಿಯ 98842 45214 ನಂಬರಿಗೆ ಫೋನು ಮಾಡಿದರೆ ಆಕೆ ರಿಸೀವ್‌ ಮಾಡಲಿಲ್ಲ. ಬದಲಿಗೆ, ‘ನಿನ್ನ ಎಲ್ಲ ಮೆಸೇಜುಗಳೂ, ಫೋನುಗಳೂ ನನ್ನನ್ನು ವಿಪರೀತವಾದ ತೊಂದರೆಗೆ ಈಡು ಮಾಡಿವೆ. ಇಷ್ಟು ಕೆಟ್ಟದಾಗಿ ನನ್ನನ್ನು let down ಮಾಡಿದ್ದಕ್ಕೆ ಧನ್ಯವಾದಗಳು. ಇನ್ನೊಂದು ಫೋನು, ಎಸ್ಸೆಮೆಸ್ಸು ಮಾಡಬೇಡ. ಅದು ಪರಿಸ್ಥಿತಿಯನ್ನು ಮತ್ತೂ ಹದಗೆಡಿಸುತ್ತದೆ’ ಎಂಬ ಮೆಸೇಜು ರಮೇಶನಿಗೆ ಬಂತು. ಆನಂತರ ಒಮ್ಮೆ ವಿಜಯಲಕ್ಷ್ಮಿ ಫೋನು ಮಾಡಿ ‘ನೀನು ಹೀಗೇ ಮುಂದುವರಿದರೆ ನಿನ್ನ ಮೇಲೆ ಪೊಲೀಸ್‌ ಕಂಪ್ಲೇಂಟ್‌ ಕೊಡುತ್ತೇನೆ’ ಅಂತ ಎಚ್ಚರಿಸಿದಳು.

  ಮೇಡಂ ಮೇಡಂ

  ಇಷ್ಟಾದ ಮೇಲೆ ಮತ್ತೆ ‘ಉದಯದವರಿಗಾಗಿ ರಡಾನ್‌ ಸಂಸ್ಥೆ ‘ಮೆಬಂಬೇ(ಮೆಗಾ ಬಂಗಾರದ ಬೇಟೆ)ಯನ್ನು ಶೂಟ್‌ ಮಾಡಲು ನಿರ್ಧರಿಸಿ ಆಗಸ್ಟ್‌ 15, 2006ರಂದು ಅದರ ಪ್ರಮೋ(ಜಾಹೀರಾತಿನಂಥದ್ದು) ಶೂಟ್‌ ಮಾಡಿತು. ಅದರಲ್ಲಿ ಇವರಿಬ್ಬರೂ ಭಾಗವಹಿಸಿದ್ದರು. ‘ಇನ್ನು ಮೇಲೆ ಲಕ್ಷ್ಮಿ ಅನ್ನುವಂತಿಲ್ಲ. ಮೇಡಂ ಅನ್ನು!’ ಅಂದಳು ವಿಜಯಲಕ್ಷ್ಮಿ. ಮುಂದೆ ಆಗಸ್ಟ್‌ 21 ಮತ್ತು 22ರಂದು ಚೆನ್ನೈನ ಪ್ರಸಾದ್‌ ಸ್ಟುಡಿಯೋದಲ್ಲಿ ಶೂಟಿಂಗ್‌ ಇತ್ತು.

  ಮೊದಲ ದಿನ ಮಾತ್ರ ನಿರ್ದೇಶಕ ಸತ್ಯ ಇದ್ದರು. ಎರಡನೇ ದಿನ ರಡಾನ್‌ ರಾಧಿಕಾ ಸೆಟ್‌ಗೆ ಭೇಟಿ ನೀಡಿದ್ದರು. ಆದರೆ ಮಧ್ಯಾಹ್ನ ಹೊತ್ತಿಗೆ ವಿಜಯಲಕ್ಷ್ಮಿ ಮತ್ತು ರಮೇಶ್‌ ಮಧ್ಯೆ ಚಿಕ್ಕದೊಂದು ಕಿತ್ತಾಟವಾಯಿತು. ಮೈಕ್‌ ಟೆಸ್ಟ್‌ ಮಾಡಲಿಕ್ಕಾಗಿ ‘ಹಲೋ ಹಲೋ ಹಲೋ ಅಂದದ್ದಕ್ಕೆ ‘ನೀನು ಹಲೋ ಅಂತಿದೀಯಾ ಮೇಡಂ ಅಂತಾ ಇಲ್ಲ!’ ಎಂದು ರಾಂಗ್‌ರಾಂಗಾದಳು ವಿಜಯಲಕ್ಷ್ಮಿ. ಮೈಕ್‌ ಟೆಸ್ಟ್‌ ಮಾಡುವುದಕ್ಕೂ ‘ಮೇಡಂ ಮೇಡಂ ಮೇಡಂ ಅಂತ ಯಾರೂ ಅನ್ನಲ್ಲ ಹೋಗ್ರೀ’ ಎಂಬುದು ರಮೇಶ್‌ ಸಿಡುಕು. ಕಡೆಗೆ ಕ್ಷಮೆ ಕೇಳುವ ತನಕ ನಾನು ಶೂಟಿಂಗೇ ಮುಂದುವರಿಸುವುದಿಲ್ಲ ಅಂತ ವಿಜಿ ಮುನಿದು ಕುಳಿತಳು.

  ಶುಭಾ ವೆಂಕಟ್‌

  ಅದನ್ನೆಲ್ಲ ಗಮನಿಸಿದ ಕ್ರಿಯೇಟಿವ್‌ ಡೈರೆಕ್ಟರ್‌(ಈಕೆ ಪತ್ರಕರ್ತೆಯೂ ಹೌದು) ಶುಭಾ ವೆಂಕಟ್‌ ಮಧ್ಯ ಪ್ರವೇಶಿಸಿ, ಕೆಲಸ ಕೆಡದಿರಲಿ ಅಂತ ರಮೇಶ್‌ನಿಂದ ಕ್ಷಮೆಯನ್ನು ಕೇಳಿಸಿದರು. ಮುಂದೆ ರಾತ್ರಿ ಹತ್ತು ಗಂಟೆಯತನಕ ಶೂಟಿಂಗ್‌ ಮುಂದುವರಿಯಿತು. ಮಧ್ಯದಲ್ಲಿ ಶುಭಾ ವೆಂಕಟ್‌ ಅವರೊಂದಿಗೆ ಮಾತನಾಡಿದ ವಿಜಯಲಕ್ಷ್ಮಿ ‘ಸೆಟ್‌ನಲ್ಲಿ ನನ್ನನ್ನು ಕಂಡರೆ ಯಾರಿಗೂ ಆಗಲ್ಲ. ನನಗೂ ಈ ಕನ್ನಡ ಟೀಮ್‌ ಜೊತೆಗೆ ಕೆಲಸ ಮಾಡಬೇಕು ಅನ್ನಿಸುತ್ತಿಲ್ಲ’ ಅಂದಿದ್ದಾಳೆ.

  ಮಾತಿನ ರಭಸದಲ್ಲಿ ‘ನಿನ್ನಿಂದ ನನ್ನ ಜೀವನ ಹಾಳಾಯಿತು. ನನಗೆ ಬಂದಿದ್ದ ಮದುವೆ ಪ್ರಪೋಸಲ್‌ ಮುರಿದು ಬಿತ್ತು’ಅಂತ ರಮೇಶ್‌ ಮೇಲೆ ಕೂಗಾಡಿದ್ದಾಳೆ. ರಾತ್ರಿ ಹನ್ನೊಂದರ ಹೊತ್ತಿಗೆ ರಮೇಶ್‌ ಇಂದಿರ ಬಸ್‌ ಹತ್ತಿಕೊಂಡು ಚೆನ್ನೈನಿಂದ ಬೆಂಗಳೂರಿಗೆ ಬಂದುಬಿಟ್ಟಿದ್ದಾನೆ.

  ನಂತರ ಏನಾಯಿತು? ನಾಳೆ ಕಾದು ಓದಿ..

  (ಸ್ನೇಹ ಸೇತು : ಹಾಯ್‌ ಬೆಂಗಳೂರ್‌!)

  Post your views

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X