»   » ರಮ್ಯಾ ಮೇಡಂ ಲುಕ್ಕು,ಲಕ್ಕು ಮತ್ತು ಕಾಮಣ್ಣನ ಮಕ್ಕಳು!

ರಮ್ಯಾ ಮೇಡಂ ಲುಕ್ಕು,ಲಕ್ಕು ಮತ್ತು ಕಾಮಣ್ಣನ ಮಕ್ಕಳು!

Subscribe to Filmibeat Kannada


ರಮ್ಯಾ ಲುಕ್ ಏನು ಕಡಿಮೆಯಾಗಿಲ್ಲ,ಯಾಕೋ ಲಕ್ ಸ್ವಲ್ಪ ಕೈಕೊಟ್ಟಂತೆ ಕಾಣಿಸುತ್ತಿದೆ!(ಲುಕ್ ಮತ್ತು ಲಕ್ ತಂಟೆ ಸಾಕೆಂದು ರಕ್ಷಿತಾ ಮದುವೆಯಾಗಿ ಹಾಯಾಗಿದ್ದಾರೆ).

ಬಹು ನಿರೀಕ್ಷೆಯ ಮೀರಾ ಮಾಧವ ರಾಘವ, ಅದಕ್ಕೂ ಹಿಂದೆ ತನನಂ ತನನಂಚಿತ್ರಮಂದಿರದಲ್ಲಿ ನಿಲ್ಲಲಿಲ್ಲ. ಈ ಚಿತ್ರಗಳಲ್ಲಿ ರಮ್ಯಾ ಅಮೋಘವಾಗಿ ಅಭಿನಯಿಸಿದ್ದಾರೆ ಎಂದು ಪತ್ರಿಕೆಗಳು ಹಾಡಿ ಹೊಗಳಿದರೂ, ರಮ್ಯಾಗೆ ಪ್ರಯೋಜನವಾಗಲಿಲ್ಲ. ಹೊಸ ಅವಕಾಶಗಳು ಮನೆ ಬಾಗಿಲಿಗೆ ಬರಲಿಲ್ಲ.

ಹೊಸ ಹುಡುಗಿಯರ ಅಬ್ಬರದ ಮಧ್ಯೆ ರಮ್ಯಾಳ ರಮ್ಯ ಚೈತ್ರ ಕಾಲ ಮುಗಿದೇ ಹೋಯಿತು ಎಂದು ಕೆಲವರು ಷರಾ ಬರೆದರೂ, ರಮ್ಯಾಗೆ ಅಲ್ಲಲ್ಲಿ ಅವಕಾಶಗಳು ಸಿಗುತ್ತಲೇ ಇವೆ. ಈಗ ಅವರು ಕಾಮಣ್ಣನ ಮಕ್ಕಳು ಚಿತ್ರದಲ್ಲಿ ಅಭಿನಯಿಸಲಿದ್ದಾರೆ.

ಸೆ.24ರಂದು ಚಿತ್ರ ಸೆಟ್ಟೇರಲಿದೆ. ಸುದೀಪ್ ಚಿತ್ರದ ನಾಯಕ. ಉದಯ ಶಂಕರ್ ಪುತ್ರ ಗುರುದತ್ ನಿರ್ದೇಶನದ ಈ ಚಿತ್ರದಲ್ಲಿ ರಾಕ್ ಲೈನ್ ವೆಂಕಟೇಶ್ ಗೆ ಒಂದು ಮುಖ್ಯವಾದ ಪಾತ್ರ ಇದೆ.

ಇನ್ನೊಂದು ಸುದ್ದಿ : ರಮ್ಯಾ ತಮಿಳು ಚಿತ್ರರಂಗದಲ್ಲಿ ಅವಕಾಶಗಳ ಹುಡುಕುತ್ತಿದ್ದಾರೆ. ಕಂಡಕಂಡವರನ್ನೆಲ್ಲ ಅವಕಾಶ ಕೊಡಿ ಎಂದು ಕೇಳುತ್ತಿದ್ದಾರೆ. ಒಂದು ತಮಿಳು ಚಿತ್ರಕ್ಕಾಗಿರಮ್ಯಾ ಧಾರಾಳತೆ ಪ್ರದರ್ಶಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಲೇ ಬೇಕು. ಅವರ ಧಾರಾಳತನ ಅವರಿಗೆ ಕೆಲಸ ಕೊಡುವುದೇನೋ ನೋಡೋಣ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada