»   » ಕರಿಷ್ಮಾಗಿದು ತಾಳಿ ಕಟ್ಟಿದ ಶುಭ ವೇಳೆ

ಕರಿಷ್ಮಾಗಿದು ತಾಳಿ ಕಟ್ಟಿದ ಶುಭ ವೇಳೆ

Subscribe to Filmibeat Kannada

ಉದ್ಯಮಿ ಸಂಜಯ್‌ ಕಪೂರ್‌ ಕೈಲಿ ತಾಳಿ ಕಟ್ಟಿಸಿಕೊಳ್ಳುವ ಮೂಲಕ ಬಾಲಿವುಡ್‌ನ ನೀಲಿ ಕಂಗಳ ಬೆಡಗಿ ಕರಿಷ್ಮಾ ಕಪೂರ್‌ ಇವತ್ತು (ಸೆ.29) ಶ್ರೀಮತಿಯಾದಳು.

ತನ್ನ ತಾತ ದಿವಂಗತ ರಾಜ್‌ಕಪೂರ್‌ ಮನೆ ಆರ್‌.ಕೆ.ಕಾಟೇಜ್‌ನಲ್ಲಿ ಸಿಖ್‌ ಸಂಪ್ರದಾಯದಂತೆ ಮದುವೆ ಅಂದುಕೊಂಡಿದ್ದಕ್ಕಿಂತ ಕೊಂಚ ತಡವಾಗಿ ನಡೆಯಿತು. ಬೆಳಗ್ಗೆ 11 ಗಂಟೆಗೇ ಮದುವೆ ಶಾಸ್ತ್ರ ಶುರುವಾಗಬೇಕಿತ್ತು. ಆದರೆ ವರ ಸಂಜಯ್‌ ಟ್ರಾಫಿಕ್‌ ಜಾಮ್‌ನಲ್ಲಿ ಸಿಕ್ಕಿ ಹಾಕಿಕೊಂಡ ಕಾರಣ ಮಂಟಪಕ್ಕೆ ಬಂದದ್ದು ಮಧ್ಯಾಹ್ನ 12.45 ಗಂಟೆಗೆ.

ಕರಿಷ್ಮಾಳ ಗಳಸ್ಯಕಂಠಸ್ಯ ಗೆಳತಿಯರಾದ ಸುಪರ್ಣ ಮೋಟ್ವಾನೆ ಮತ್ತು ಮಂದಿರ ಕಪೂರ್‌ ಸೋದರನಾದ ಸಂಜಯ್‌ ಸೋನಾ ಕೋಯಾ ಸ್ಟೀರಿಂಗ್‌ನ ಮ್ಯಾನೇಜಿಂಗ್‌ ಡೈರೆಕ್ಟರ್‌. ಈತನ ತಾತ ದಿವಂಗತ ರೌನಾಕ್‌ ಸಿಂಗ್‌ ಅಪೋಲೋ ಟೈರ್ಸ್‌ ಎಂಪೈರ್‌ ಎಂಬ ಬೃಹತ್‌ ಕಂಪನಿ ಕಟ್ಟಿದ್ದರು. ಅಪ್ಪ ಸುರಿಂದರ್‌ ಕಪೂರ್‌ ಕೂಡ ಸೋನಾ ಸಮೂಹದ ಸಹಭಾಗಿ. ಒಟ್ಟಿನಲ್ಲಿ ಸಂಜಯ್‌ ಕಪೂರ್‌ ಭಾರೀ ಕುಳ.

ಮಿಂಚು ನಟಿ ಕರೀನಾ ಕಪೂರ್‌ ಹಾಗೂ ಆಕೆಯ ಅತ್ತೆ ರೀಮಾ ಜೈನ್‌ ಮದುವೆ ಸಂಭ್ರಮದಲ್ಲಿ ಜೋರಾಗಿ ಓಡಾಡುತ್ತಿದ್ದರು. ಚಿಕ್ಕಪ್ಪ ರಿಷಿ ಕಪೂರ್‌ ಹಾಗೂ ನಟ ಸಂಜಯ್‌ ಕಪೂರ್‌ ಮದುವೆಯಲ್ಲಿ ಹುಡುಗಿಯ ಅಣ್ಣಂದಿರಾಗಿ ಮಾಡಬೇಕಾದ ಶಾಸ್ತ್ರದಲ್ಲಿ ಭಾಗಿಯಾದರು. ಕರಿಷ್ಮಾ ಚಿಕ್ಕ ತಾತ ಹಾಗೂ ನಟ ಶಶಿ ಕಪೂರ್‌, ಚಿತ್ರೋದ್ಯಮಿ ಭರತ್‌ ಷಾ, ಮೊಹಮ್ಮದ್‌ ಅಜರುದ್ದೀನ್‌- ಬಿಜಲಾನಿ ದಂಪತಿ, ಕರಿಷ್ಮಾ ಜೋಡಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿರುವ ಗೋವಿಂದ, ನಟ ಸೋದರರಾದ ರಾಹುಲ್‌ ಹಾಗೂ ಅಕ್ಷಯ್‌ ಖನ್ನ, ನಟ ಸಂಜಯ್‌ ದತ್‌, ನಟಿ ಶ್ರೀದೇವಿ, ಆಕೆಯ ಗಂಡ ಬೋನಿ ಕಪೂರ್‌, ನಟಿ ಸಿಮಿ ಗರೆವಾಲ್‌, ನಿರ್ದೇಶಕ ಡೇವಿಡ್‌ ಧವನ್‌ ಮದುವೆ ಸಮಾರಂಭದಲ್ಲಿ ಕಣ್ಣಿಗೆ ಬಿದ್ದ ಮಿಂಚು ಮುಖಗಳು. ಅಮಿತಾಬ್‌ ಬಚ್ಚನ್‌ ಕ್ಯಾಂಪ್‌ನಲ್ಲಿ ಗುರ್ತಿಸಿಕೊಂಡ ಮಂದಿ ಕರಿಷ್ಮಾ ಮದುವೆಯಲ್ಲಿ ಕಾಣುತ್ತಿರಲಿಲ್ಲ .

ಮನೆಯಂಗಳದ ವಿಶಾಲ ಉದ್ಯಾನವನ್ನು ಶೀಶ್‌ ಮಹಲ್‌ ಆಗಿ ಪರಿವರ್ತಿಸಲಾಗಿದ್ದು, 600 ಅತಿಥಿಗಳು ಕೂರುವಂತೆ ವ್ಯವಸ್ಥೆ ಮಾಡಲಾಗಿದೆ. ಕಪೂರ್‌ ಸಂಪ್ರದಾಯದ ಬಗೆಬಗೆ ತಿನಿಸುಗಳು ಘಮಘಮಿಸುತ್ತಿವೆ.

ಮಂಗಳವಾರ (ಸೆ.30) ಕರಿಷ್ಮಾ ಗಂಡನ ಜೊತೆ ಯೂರೋಪ್‌ಗೆ ಮಧುಚಂದ್ರಕ್ಕೆ ಹೋಗಲಿದ್ದಾಳೆ.

(ಏಜೆನ್ಸೀಸ್‌)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada