»   » ಮನರಂಜನೆ: ಯೂಟ್ಯೂಬ್ ಪ್ರತಿಸ್ಪರ್ಧಿ ವೆಬ್ ಸೈಟ್ ಶುರು

ಮನರಂಜನೆ: ಯೂಟ್ಯೂಬ್ ಪ್ರತಿಸ್ಪರ್ಧಿ ವೆಬ್ ಸೈಟ್ ಶುರು

Subscribe to Filmibeat Kannada


ಲಾಸ್ ಏಂಜಲಿಸ್, ಅ. 29 : ಗೂಗಲ್ ಕಂಪನಿಯ ಜನಪ್ರಿಯ ಯುಟ್ಯೂಬ್ ಗೆ ಸೆಡ್ಡು ಹೊಡೆಯಲು ಇನ್ನೊಂದು ಕಂಪನಿ ಸಿದ್ಧವಾಗಿದೆ. ಮನರಂಜಿಸುವ ವಿಡಿಯೋ ಚಿತ್ರ ಸಾಮಗ್ರಿಗಳ ಪ್ರಕಟಣೆಗೊಸ್ಕರ ತನ್ನದೇ ಆದ ವೆಬ್ ತಾಣವನ್ನು ಆರಂಭಿಸಿ ಗೂಗಲ್ ಗ್ರಾಹಕರನ್ನು ತನ್ನತ್ತ ಸೆಳೆದುಕೊಳ್ಳಲು, ಎನ್ಬಿಸಿ ಮತ್ತು ಫಾಕ್ಸ್ ಟೆಲಿವಿಷನ್ ವಾಹಿನಿಗಳು ಜಂಟಿಯಾಗಿ ಪ್ಲಾನ್ ಮಾಡಿವೆ.

ಮನರಂಜನೆಯ ಸರಕುಗಳನ್ನು ಪೂರೈಸುವ ಜಗತ್ತಿನ ವಿವಿಧ ಕಂಪನಿಗಳಿಂದ ಸಿನಿಮಾ, ಧಾರಾವಾಹಿ ಮತ್ತಿತರ ಸರಕುಗಳನ್ನು ಪಡೆದು ತನ್ನ ವೆಬ್ ಜಾಲದ ಮುಖಾಂತರ ಜನಪ್ರಿಯಗೊಳಿಸಲು ಈ ಕಂಪನಿಗಳು ಯೋಜನೆ ಹಾಕಿವೆ. ಪೈಪೋಟಿ ಒಡ್ಡುವುದು ಎಂದರೆ ಹೀಗೆ !

ಹೊಸ ಜಾಲ ತಾಣದ ಹೆಸರು www.hulu.com. ಅಕ್ಟೋಬರ್ 29ರ ಸೋಮವಾರ ಹೊಸ ಸೈಟಿನ ಪ್ರಯೋಗಾರ್ಥ ಪ್ರಸಾರ ಆರಂಭವಾಗುತ್ತದೆ. ಬರಲಿರುವ ಮೂರ್ನಾಲ್ಕು ತಿಂಗಳಲ್ಲಿ ಮನರಂಜನೆಯ ಸರಕು ಸಮಗ್ರವಾಗಿ ಪೂರೈಸಲಾಗುತ್ತದೆ ಎಂದು ಕಂಪನಿಯ ವಕ್ತಾರರು ಹೇಳಿದ್ದಾರೆ.

ಈ ಸೈಟನ್ನು ಜನರಲ್ ಇಲೆಕ್ಟ್ರಿಕ್ ಕಂಪನಿಯ ಅಂಗಸಂಸ್ಥೆ ಎನ್ ಬಿ ಸಿ ಯೂನಿವರ್ಸ ಲ್ ಮತ್ತು ನ್ಯೂಸ್ ಕಾರ್ಪೋರೇಷನ್ ಕಂಪನಿಗಳು ಸಂಯುಕ್ತವಾಗಿ ನಿರ್ಮಿಸಿವೆ. ಈ ಜಾಲದಲ್ಲಿ ಚಲನಚಿತ್ರಗಳನ್ನು ಪೂರ್ತಿಯಾಗಿ ನೋಡಬಹುದು. ಜೊತೆಗೆ ಟೆಲಿ ಧಾರಾವಾಹಿಗಳು ಮತ್ತು ಜಾಹಿರಾತುಗಳು ಇದ್ದೇ ಇರುತ್ತವೆ.

( ಏಜೆನ್ಸೀಸ್)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada