»   » ಶಂಕರ್‌ : ಆಗ ಉಲ್ಟಾಪಲ್ಟಾ ಈಗ ಜೂಟಾಟ

ಶಂಕರ್‌ : ಆಗ ಉಲ್ಟಾಪಲ್ಟಾ ಈಗ ಜೂಟಾಟ

Posted By: Staff
Subscribe to Filmibeat Kannada

ಉಲ್ಟಾಪಲ್ಟಾ ಖ್ಯಾತಿಯ ನಿರ್ದೇಶಕ ಹಾಗೂ ಪತ್ರಕರ್ತ ಎನ್‌.ಎಸ್‌. ಶಂಕರ್‌ ರಾಂಗ್‌ನಂಬರ್‌ ಮೂಲಕ ನಾಪತ್ತೆಯಾಗಿದ್ದರು. ್ಫಅವರೀಗ ಜೂಟ್‌ ಎನ್ನುತ್ತಿದ್ದಾರೆ!

ಅಡೆತಡೆಯಿಲ್ಲದ ನಾನ್‌ಸ್ಟಾಪ್‌ ಹಾಸ್ಯ ನೀಡುವುದು ಶಂಕರ್‌ಗೆ ಸಲೀಸೆನ್ನುವುದು ಉಲ್ಟಾಪಲ್ಟಾದ ಮೂಲಕ ಸಾಬೀತಾಗಿತ್ತು . ವಿಜಯ್‌ಕುಮಾರ್‌ ನಿರ್ಮಾಪಕರಾಗಿರುವ ಜೂಟಾಟ ಚಿತ್ರದಲ್ಲೂ ಅಪ್ಪಟ ಹಾಸ್ಯದ ಸರಣಿಯನ್ನು ಮುಂದುವರೆಸುವ ಭರವಸೆಯನ್ನು ಶಂಕರ್‌ ನೀಡಿದ್ದಾರೆ. ಜೂಟಾಟ ಶಂಕರ್‌ಗೆ ಮೂರನೇ ಚಿತ್ರ. ಎರಡನೇ ಚಿತ್ರ ರಾಂಗ್‌ನಂಬರ್‌ ಗೆಲ್ಲದ ಕಾರಣ ಮರಳಿ ಹಾಸ್ಯದ ಟ್ರ್ಯಾಕ್‌ಗೆ ಶಂಕರ್‌ ಹೊರಳಿದ್ದಾರೆ.

ಕಾರ್‌ ಕಾರ್‌ ಹುಡುಗ ಧ್ಯಾನ್‌, ರೀಚಾ ಪಲ್ಲಟ್‌ ಮತ್ತು ಆಕಾಶ್‌ ಜೂಟಾಟದಲ್ಲಿದ್ದಾರೆ. ಇಪ್ಪತ್ತಕ್ಕೂ ಅಧಿಕ ನಟರು ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವುದು ಒಂದು ವಿಶೇಷ. ಜೂಟಾಟ ಹೊಸತೇನಲ್ಲ. ಮಳಯಾಳಂನಲ್ಲಿ ಇಪ್ಪತ್ತು ವರ್ಷಗಳ ಹಿಂದೆ ತೆರೆಕಂಡಿದ್ದ ಕುಚಿಕುರು ಮುಕುತಿ ಚಿತ್ರವನ್ನು ರಿಮೇಕ್‌ ಮಾಡಲಾಗುತ್ತಿದೆ. ಇದು ಹಿಂದಿಯಲ್ಲಿ ಹಂಗಾಮ ಹೆಸರಿಂದ ತೆರೆಗೆ ಬಂದಿತ್ತು. ಮಕ್ಕಳು ಸೇರಿದಂತೆ ಮನೆಮಂದಿಗೆ ಜೂಟಾಟ ಮುದ ನೀಡಲಿದೆ. 35 ದಿನಗಳ ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸುವ ಉದ್ದೇಶ ಶಂಕರ್‌ ಅವರದು.

ಜೂಟಾಟ ಮೂಲಕ ನನ್ನ ಇಪ್ಪತ್ತು ವರ್ಷಗಳ ಕನಸು ಈಗ ನನಸಾಗುತ್ತಿದೆ. ಇದಕ್ಕೆ ಹೆಗಲು ಕೊಟ್ಟ ಗೆಳೆಯ ಶಂಕರ್‌, ಸುಧೀರ್‌, ಹನುಮಂತರಾಜು ಮತ್ತಿತರರ ಸಹಕಾರವನ್ನು ಮರೆಯಲಾಗದು ಎನ್ನುತ್ತಾರೆ ನಿರ್ಮಾಪಕ ವಿಜಯಕುಮಾರ್‌.

ಜೂಟಾಟ ಎಲ್ಲರಿಗೂ ಖುಷಿ ಕೊಡಲಿ- ಮುಖ್ಯವಾಗಿ ನಿರ್ಮಾಪಕ ನಿರ್ದೇಶಕರಿಗೆ.

English summary
Journalist turned director N.S.Shanker of the 'Ulta Pulta' fame has taken up his third film 'Jootata'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada