»   » ಮುಂಬೈನಲ್ಲಿ ಅಮಿತಾಭ್‌ಗೆ ಚಿಕಿತ್ಸೆ

ಮುಂಬೈನಲ್ಲಿ ಅಮಿತಾಭ್‌ಗೆ ಚಿಕಿತ್ಸೆ

Subscribe to Filmibeat Kannada

ಮುಂಬಯಿ : ಇಲ್ಲಿನ ಲೀಲಾವತಿ ಆಸ್ಪತ್ರೆಯಲ್ಲಿ ನಟ ಅಮಿತಾಭ್‌ ಅವರನ್ನು ನಾನಾ ವೈದ್ಯಕೀಯ ಪರೀಕ್ಷೆಗಳಿಗೆ ಮಂಗಳವಾರ ಒಳಪಡಿಸಲಾಗಿದೆ.

ಹೊಟ್ಟೆ ನೋವಿನ ಕಾರಣ ಹಿಂದಿ ಚಿತ್ರರಂಗದ ಮೇರು ತಾರೆ ಅಮಿತಾಭ್‌ ಬಚ್ಚನ್‌, ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯಕೀಯ ಪರೀಕ್ಷೆಗಳ ಫಲಿತಾಂಶಗಳು ಮಂಗಳವಾರ ರಾತ್ರಿ ವೇಳೆಗೆ ಲಭ್ಯವಾಗಲಿವೆ. ಆಸ್ಪತ್ರೆಯಲ್ಲಿ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ದೆಹಲಿಯ ಎಸ್ಕಾರ್ಟ್ಸ್‌ ಆಸ್ಪತ್ರೆಯಲ್ಲಿ ಸೋಮವಾರ ಬೆಳಗ್ಗೆ ಚಿಕಿತ್ಸೆಗಾಗಿ ದಾಖಲಾಗಿದ್ದ ಅವರು, ರಾತ್ರಿ ಹೊತ್ತಿಗೆ ಮುಂಬೈ ನಗರದ ಲೀಲಾವತಿ ಆಸ್ಪತ್ರೆಯಲ್ಲಿ ದಾಖಲಾದರು. ಸುಮಾರು 63ವರ್ಷದ ಪ್ರಬುದ್ಧ ನಟ ಬೇಗ ಚೇತರಿಕೆ ಕಾಣಲಿ ಎಂದು ಅಪಾರ ಅಭಿಮಾನಿಗಳು ಹಾರೈಸಿದ್ದಾರೆ.

ಸಮಾಜವಾದಿ ಪಕ್ಷದ ಧುರೀಣ ಅಮರ್‌ಸಿಂಗ್‌ ಸೇರಿದಂತೆ ವಿವಿಧ ಮುಖಂಡರು ಮಂಗಳವಾರ ಆಸ್ಪತ್ರೆಗೆ ಭೇಟಿ ನೀಡಿ, ಅಮಿತಾಭ್‌ರ ಆರೋಗ್ಯ ವಿಚಾರಿಸಿದರು.

(ಏಜನ್ಸೀಸ್‌)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada