»   » ಶುಭ ಶುಕ್ರವಾರ : ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಗಿಜಿಗಿಜಿ!

ಶುಭ ಶುಕ್ರವಾರ : ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಗಿಜಿಗಿಜಿ!

Posted By:
Subscribe to Filmibeat Kannada


ಬೆಂಗಳೂರು : ‘ರೋಗಿ ಬಯಸಿದ್ದು ಹಾಲು- ಅನ್ನ, ವೈದ್ಯ ಹೇಳಿದ್ದು ಹಾಲು ಅನ್ನ ಅನ್ನುವಂತೆ ನಿರ್ಮಾಪಕರ ಸಂಘ ಮತ್ತು ಕಾರ್ಮಿಕರ ಸಂಘಗಳು ಈಗ ರಾಜಿಗೆ ಒಪ್ಪಿವೆ. ಮೂರು ತಿಂಗಳ ಚಿತ್ರೋದ್ಯಮದ ಬಿಕ್ಕಟ್ಟು ಸದ್ಯಕ್ಕೆ ತಿಳಿಯಾಗಿದೆ.

ಕೇಂದ್ರ ಸಚಿವ ಅಂಬರೀಷ್‌ ಸಲಹೆ ಮೇರೆಗೆ ನಟ ವಿಷ್ಣುವರ್ಧನ್‌, ಶಿವರಾಜಕುಮಾರ್‌, ರವಿಚಂದ್ರನ್‌ ನೇತೃತ್ವದ ಸಮಿತಿ ನಡೆಸಿದ ಸಭೆ ಫಲ ನೀಡಿದೆ. ಕಲಾವಿದರ ಒಕ್ಕೂಟದ ಅಧ್ಯಕ್ಷ ಅಶೋಕ್‌, ನಿರ್ಮಾಪಕರಿಗೆ ಸಹಕಾರ ನೀಡಲು ಸಮ್ಮತಿಸಿದ್ದಾರೆ. ಕಾರ್ಮಿಕರ ಹಿತಕಾಯುವುದಾಗಿ ಸಮಿತಿ ಭರವಸೆ ನೀಡಿದೆ. ಈ ನಿಟ್ಟಿನಲ್ಲಿ ಶುಕ್ರವಾರ ಅಲ್ಲಲ್ಲಿ ಚಿತ್ರೀಕರಣಗಳು ಚುರುಕಾಗಿವೆ.

ಈ ಸಂಧಾನ ನಿರ್ಮಾಪಕರ ವಲಯದಲ್ಲಿ ಕೆಲವರಿಗೆ ಅಸಮಾಧಾನ ತಂದಿದೆ. ನಿರ್ಮಾಪಕರ ಸಂಘಕ್ಕೆ ಮುಖಭಂಗವಾಗಿದೆ ಎಂದು ಕೆಲವರು ಗೊಣಗುತ್ತಿದ್ದಾರೆ. ಅದೇನೇ ಇರಲಿ, ಹೊಸ ವರ್ಷದ ಹೊತ್ತಿನಲ್ಲಿ ಕನ್ನಡ ಚಿತ್ರರಂಗದಲ್ಲಿ ಗೊಂದಲಗಳು ಕರಗಿ, ಭರವಸೆಯ ಬೆಳಕು ಕಾಣಿಸುತ್ತಿದೆ.

ಸಿನಿಮಾ ಬಿಡುಗಡೆ : ಕಾಮಿಡಿ ಟೈಮ್‌ ಗಣೇಶ್‌ ನಾಯಕತ್ವದ ಎರಡನೇ ಚಿತ್ರ ‘ಮುಂಗಾರು ಮಳೆ’ ಮತ್ತು ‘ಗೀಯಗೀಯ’ ಎಂಬ ಎರಡು ಚಿತ್ರಗಳು ಇಂದು ಬಿಡುಗಡೆಯಾಗಿವೆ.

(ದಟ್ಸ್‌ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada