For Quick Alerts
  ALLOW NOTIFICATIONS  
  For Daily Alerts

  ಇದೇ ತಿಂಗಳು ನಡೆಯಲಿದೆ ಬೆಂಗಳೂರು ಬೆಂಗಾಲಿ ಫಿಲ್ಮ್ ಫೆಸ್ಟಿವಲ್

  By Naveen
  |

  'ಬೆಂಗಳೂರು ಬೆಂಗಾಲಿ ಹಾಗೂ ಕನ್ನಡ ಫಿಲ್ಮ್ ಫೆಸ್ಟಿವಲ್' ಇದೇ ತಿಂಗಳು ನಡೆಯಲಿದೆ. ಜೂನ್ 8, 9 ಮತ್ತು 10 ರಂದು ಮೂರು ದಿನಗಳ ಕಾಲ ಬೆಂಗಳೂರಿನ ಗಾಂಧಿ ಭವನ ಹಾಗೂ ಚಾಮುಂಡೇಶ್ವರಿ ಸ್ಟುಡಿಯೊದಲ್ಲಿ ಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ.

  ಸತ್ಯಜಿತ್ ರೇ ಫಿಲ್ಮ್ ಸೊಸೈಟಿ ಬೆಂಗಳೂರು, ಕರ್ನಾಟಕ ಚಲನಚಿತ್ರ ಅಕಾಡೆಮಿ ಮತ್ತು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಸಹಯೋಗದೊಂದಿಗೆ 2 ನೇ ಬೆಂಗಳೂರು ಬಂಗಾಳಿ ಮತ್ತು ಕನ್ನಡ ಚಲನಚಿತ್ರೋತ್ಸವವನ್ನು ಆಯೋಜಿಸಲಾಗಿದೆ. ಜೂನ್ 8 ರಂದು ಸಂಜೆ 5.30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಚಿತ್ರೋತ್ಸವದ ಮೊದಲ ಸಿನಿಮಾವಾಗಿ ಬೆಂಗಾಳಿ ಭಾಷೆಯ 'Asha Jwar Maje' ಚಿತ್ರ ಪ್ರದರ್ಶನ ಆಗಲಿದೆ.

  ಜೂನ್ 9 ರಂದು ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಸಿನಿಮಾ, ಜೂನ್ 10ಕ್ಕೆ 'ಒಂದು ಮೊಟ್ಟೆಯ ಕಥೆ' ಸಿನಿಮಾ ಪ್ರದರ್ಶನ ಆಗಲಿದೆ. ಇತ್ತೀಚೆಗಷ್ಟೇ ರಾಜ್ಯ ಪ್ರಶಸ್ತಿ ಪಡೆದ 'ಹೆಬ್ಬೆಟ್ ರಾಮಕ್ಕ' ಸಿನಿಮಾ ಸಹ ಚಿತ್ರೋತ್ಸವದಲ್ಲಿ ಸ್ಥಾನ ಪಡೆದಿದೆ. ಕನ್ನಡ ಮತ್ತು ಬಂಗಾಳಿ ಭಾಷೆಯ 17 ಸಿನಿಮಾಗಳು (ಮೂರು ಕಿರುಚಿತ್ರ ಸೇರಿದಂತೆ) ಪ್ರದರ್ಶನ ಆಗಲಿದೆ. ಜೂನ್ 10 ರಂದು ಸಮಾರೋಪ ಸಮಾರಂಭ ನಡೆಯಲಿದೆ.

  2nd Bengaluru Bengali and Kannada Film Festival 2018
  English summary
  Satyajit Ray Film Society Bengaluru in collaboration with Karnataka Chalanachitra Academy and Film Federation of India (SR) is organising '2nd Bengaluru Bengali and Kannada Film Festival 2018 to be held on 8th June 2018 onwards and will last till 10th June 2018.
  Monday, June 4, 2018, 14:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X