»   » ಕೆಪಿಜೆಪಿ ಪಕ್ಷದ ಅಧ್ಯಕ್ಷ ಉಪೇಂದ್ರ ವಿರುದ್ಧ ಇನ್ನೊಂದು ದೂರು.!

ಕೆಪಿಜೆಪಿ ಪಕ್ಷದ ಅಧ್ಯಕ್ಷ ಉಪೇಂದ್ರ ವಿರುದ್ಧ ಇನ್ನೊಂದು ದೂರು.!

Posted By:
Subscribe to Filmibeat Kannada

ಇತ್ತೀಚೆಗಷ್ಟೇ ಜೆಡಿಯು ಪಕ್ಷದ ನಾಗೇಶ್ ಶೇಷಾದ್ರಿ ಪೊಲೀಸ್ ಠಾಣೆಯಲ್ಲಿ ಕೆಪಿಜೆಪಿ ಪಕ್ಷದ ಅಧ್ಯಕ್ಷ ಉಪೇಂದ್ರ ಅವರ ವಿರುದ್ಧ ಭ್ರಷ್ಟಚಾರಕ್ಕೆ ಪ್ರಚೋದನೆ ನೀಡುವಂತಹ ಹೇಳಿಕೆ ನೀಡಿದ್ದಾರೆ ಎಂದು ದೂರು ನೀಡಿದ್ದರು. ಈಗ ಅದರ ಬೆನ್ನಲ್ಲೆ ಇನ್ನೊಂದು ಕಂಪ್ಲೆಂಟ್ ಉಪ್ಪಿ ವಿರುದ್ಧ ದಾಖಲಾಗಿದೆ.

ಗಾಂಧಿ ಭವನದಲ್ಲಿ ಉಪೇಂದ್ರ ಅವರು ತಮ್ಮ ರಾಜಕೀಯ ಪಕ್ಷ ಘೋಷಿಸುವ ಸುದ್ದಿಗೋಷ್ಟಿ ಆಯೋಜಿಸಿದ್ದು ತಪ್ಪು ಎಂದು ವಕೀಲ ಅಮೃತೇಶ್ ಅವರು ಆರೋಪಿಸಿದ್ದಾರೆ.

ಪಕ್ಷ ಘೋಷಿಸಿದ ಬೆನ್ನಲ್ಲೆ ಉಪೇಂದ್ರ ವಿರುದ್ಧ ದೂರು ದಾಖಲು.!

2nd complaint filed against KPJP President Upendra

ಗಾಂಧಿ ಭವನದಲ್ಲಿ ಗಾಂಧಿ ವಿಚಾರಧಾರೆ, ಚರ್ಚೆ, ಮತ್ತಿತರ ಚಟುವಟಿಕೆಗಳಷ್ಟೇ ನಡೆಯಬೇಕು. ಅದನ್ನು ಹೊರತುಪಡಿಸಿ ಯಾವುದೇ ರಾಜಕೀಯ ಪಕ್ಷಗಳ ನಾಯಕರಿಗೆ ಅದು ವೇದಿಕೆ ನೀಡುವಂತಿಲ್ಲ. ಇದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಟ್ರಸ್ಟ್ ತನಗೆ ತಾನೇ ವಿಧಿಸಿಕೊಂಡಿರುವ ನಿರ್ಬಂಧ. ಹೀಗಿರುವಾಗ ಹೊಸ ರಾಜಕೀಯ ಪಕ್ಷದ ಘೋಷಣೆಗೆ ಗಾಂಧಿ ಭವನದಲ್ಲಿ ಅವಕಾಶ ನೀಡಿದ್ದು ತಪ್ಪು ಎಂದು ಅಮೃತೇಶ್ ದೂರು ದಾಖಲಿಸಿದ್ದಾರೆ.

ಉಪೇಂದ್ರ ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ.? ಮುಖ್ಯಮಂತ್ರಿ ಅಭ್ಯರ್ಥಿ ಯಾರು?

ಉಪೇಂದ್ರ ಪಕ್ಷದ ಘೋಷಣೆ ಮಾಡಿದ್ದು ಅಭಿಮಾನಿಗಳಿಗೆ ಎಷ್ಟು ಖುಷಿ ತಂದಿದೆಯೋ, ಈ ದೂರು ದಾಖಲಾಗಿರುವುದನ್ನ ಕೇಳಿ ಅಷ್ಟೇ ಬೇಜಾರು ಮಾಡಿಕೊಳ್ಳುತ್ತಿದ್ದಾರೆ.

English summary
Advocate NP Amrutesh has filed complaints against KPJP President Upendra.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X