For Quick Alerts
  ALLOW NOTIFICATIONS  
  For Daily Alerts

  ಕರಿಬಸವಯ್ಯ ನಿಧನಕ್ಕೆ ಸಿನಿತಾರೆಯರ ಅಶ್ರುತರ್ಪಣ

  |

  Karibasaviah
  ಕನ್ನಡದ ಯಶಸ್ವೀ ಹಾಸ್ಯನಟ ಕರಿಬಸವಯ್ಯ ಅಗಲಿಕೆಗೆ ಹಿರಿಯ ನಟ ರೆಬಲ್ ಸ್ಟಾರ್ ಅಂಬರೀಷ್ ಶೋಕ ವ್ಯಕ್ತಪಡಿಸಿದ್ದಾರೆ. "ರಂಗಭೂಮಿ ಹಾಗೂ ಕಿರುತೆರೆಯಲ್ಲೂ ಬಹಳಷ್ಟು ಪ್ರಸಿದ್ಧರಾಗಿದ್ದ ಅವರು ಕಲಾ ಬೇರು ಕೀರ್ತನೆ. ಹರಿದಾಸ ಕೀರ್ತೆನೆಗಳಿಂದ ಮನೆಮಾತಾಗಿದ್ದ ಅವರು ಕನ್ನಡದ ಜನಪ್ರಿಯ ಹಾಸ್ಯಕಲಾವಿದರೂ ಆಗಿ ಬಹಳಷ್ಟು ಎತ್ತರಕ್ಕೆ ಬೆಳೆದಿದ್ದರು.

  ಅವರ ನಟನೆಯಲ್ಲಿ ಮಾತ್ರವಲ್ಲದೇ ವ್ಯಕ್ತಿತ್ವದಲ್ಲಿ ಕೂಡ ಹಾಸ್ಯ ಹಾಸುಹೊಕ್ಕಾಗಿತ್ತು. ಅವರೊಬ್ಬ ಕಲಾವಿದ ಮಾತ್ರವಲ್ಲದೇ ಒಳ್ಳೆಯ ವ್ಯಕ್ತಿಯಾಗಿದ್ದರು" ಎಂದಿದ್ದಾರೆ ಅಂಬರೀಷ್. ಅದೇ ರೀತಿ ಹಿರಿಯ ನಟ ದೊಡ್ಡಣ್ಣ ಕೂಡ ಅವರ ಅಕಾಲಿಕ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಅವರದು ಅಕಾಲಿಕ ಸಾವು. ಅವರ ಮಗಳ ಸಾವಿನಿಂದ ಇನ್ನೂ ಚೇತರಿಸಿಕೊಂಡಿರಲಿಲ್ಲ" ಎಂದಿದ್ದಾರೆ.

  ನಿರ್ದೆಶಕ ನಾಗಶೇಖರ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಕರಿಬಸವಯ್ಯ ನಿಧನಕ್ಕೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಕಾರಣ ಅವರು ಕೇವಲ ನಟ ಮಾತ್ರವಲ್ಲ, ತುಂಬಾ ಸ್ನೇಹಜೀವಿ ಕೂಡ ಆಗಿದ್ದರು. ನಮಗೂ ಅವರಿಗೂ ಬಹಳ ಹತ್ತಿರದ ನಂಟು. ತುಂಬಾ ವರ್ಷಗಳಿಂದ ನಾವೆಲ್ಲ ಸ್ನೇಹಿತರು" ಎಂದಿದ್ದಾರೆ. (ಒನ್ ಇಂಡಿಯಾ ಕನ್ನಡ)

  English summary
  Actor Karibasaviah died today (03-02-2012), from accident held on 31st, Jan. 2012. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X