twitter
    For Quick Alerts
    ALLOW NOTIFICATIONS  
    For Daily Alerts

    ಹಿರಿಯ ನಟ ಶಿವರಾಂ ವಿರುದ್ಧ ಎಫ್‌ಐಆರ್‌ಗೆ ಆದೇಶ

    By Rajendra
    |

    2009-10ನೇ ಸಾಲಿನ ಸಬ್ಸಿಡಿ ಚಿತ್ರಗಳ ಆಯ್ಕೆಯಲ್ಲಿ ಭಾರಿ ಗೋಲ್ ಮಾಲ್ ನಡೆದಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಹಿರಿಯ ನಟ ಶಿವರಾಂ ಹಾಗೂ ಸುರೇಶ್ ಮಂಗಳೂರು ವಿರುದ್ಧ ಎಫ್ಐಆರ್ ದಾಖಲಿಸುವಂತೆ ಉಪ್ಪಾರಪೇಟೆ ಪೊಲೀಸರಿಗೆ ixನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶಿದೆ.

    ಸಬ್ಸಿಡಿ ಚಿತ್ರಗಳ ಆಯ್ಕೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಸಿನಿಮಾ ನಿರ್ದೇಶಕ ಕೋಡ್ಲು ರಾಮಕೃಷ್ಣ ಅವರು ಖಾಸಗಿ ದೂರು ದಾಖಲಿಸಿದ್ದರು. ಈ ಸಂಬಂಧ ನ್ಯಾಯಾಧೀಶರಾದ ರುಡಾಲ್ಫ್ ಪೆರೈರ ಅವರು ಕ್ರಮಕೈಗೊಳ್ಳಲು ಸೂಚಿಸಿದ್ದಾರೆ.

    ಸುವರ್ಣ ವಾಹಿನಿಯ ಕುಟುಕು ಕಾರ್ಯಾಚರಣೆಯಲ್ಲಿ ಸುರೇಶ್ ಅವರು ಕೋಡ್ಲು ಅವರಿಂದ ರು.2.5 ಲಕ್ಷ ಲಂಚ ಪಡೆದಿರುವ ಅಂಶಗಳು ಬಯಲಾಗಿದ್ದವು. ಅದಕ್ಕೆ ಸಂಬಂಧಿಸಿದ ಸಿಡಿಯನ್ನು ನ್ಯಾಯಾಲಯಕ್ಕೆ ಹಸ್ತಾಂತರಿಸಲಾಗಿತ್ತು.

    ಇದಾದ ಬಳಿಕ ಸಬ್ಸಿಡಿ ಚಿತ್ರಗಳ ಗೋಲ್‌ಮಾಲ್ ವ್ಯವಹಾರ ದಿನಕ್ಕೊಂದು ತಿರುವು ಪಡೆದುಕೊಂಡು ಹೊಸ ಹೊಸ ಬೆಳವಣೆಗೆಳಳಿಗೆ ಕಾರಣವಾಗಿತ್ತು. ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಕೂಲಂಕುಷ ತನಿಖೆ ನಡೆಸುವ ಭರವಸೆ ನೀಡಿದ್ದಾರೆ. (ಏಜೆನ್ಸೀಸ್)

    English summary
    The Additional Chief Metropolitan Magistrate court ordered registration of FIR against Kannada actors Shivaram and Suresh Mangalore for allegedly named in a cash-for-subsidy scandal. The court passed the directions last week when filmmaker Koodlu Ramakrishna’s private complaint, about the scandal,
    Tuesday, April 3, 2012, 10:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X