twitter
    For Quick Alerts
    ALLOW NOTIFICATIONS  
    For Daily Alerts

    ಮೂರು ಕತೆ, ಮೂರು ನಿರ್ದೇಶಕರು 'ಶಾಂತಿಯನ್ನು ಕಳೆದುಕೊಳ್ಳಬೇಡಿ' ಎನ್ನುತ್ತಿರುವುದೇಕೆ?

    |

    ಚಂದನವನದಲ್ಲಿ ವಿಭಿನ್ನ ರೀತಿಯ ಸಿನಿಮಾಗಳೇನು ಕೊರತೆ ಇಲ್ಲ. ಚಿತ್ರರಂಗಕ್ಕೆ ಎಂಟ್ರಿ ಕೊಡುವ ಹೊಸಬರು ಹೊಸ ರೀತಿಯ ಕತೆ, ವಿನೂತ ಪ್ರಯತ್ನದ ಮೂಲಕ ಕನ್ನಡ ಚಿತ್ರ ಪ್ರೇಕ್ಷಕರನ್ನು ಸೆಳೆಯುತ್ತಿದ್ದಾರೆ. ಇದೀಗ ಚಂದನವನದಲ್ಲಿ 'ಶಾಂತಿಯನ್ನು ಕಳೆದುಕೊಳ್ಳಬೇಡಿ' ಎನ್ನುವ ಹೊಸ ಸಿನಿಮಾ ಸೆಟ್ಟೇರಿದೆ.

    ಈ ಸಿನಿಮಾ ವಿಶೇಷತೆ ಎಂದರೆ ಮೂರು ಕತೆ, ಮೂವರು ನಿರ್ದೇಶಕರು. ಈಗಾಗಲೇ ಚಂದನವನದಲ್ಲಿ ಇದೇ ಮಾದರಿಯ ಕಥಾಸಂಗಮ ಎನ್ನುವ ಸಿನಿಮಾ ರಿಲೀಸ್ ಆಗಿದೆ. ಇದೀಗ ಅದೇ ರೀತಿಯ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸಬರ ತಂಡವೊಂದು ಸದ್ದು ಮಾಡುತ್ತಿದೆ.

    ಈಗಾಗಲೇ ಕಿರುತೆರೆಯಲ್ಲಿ ಸಹ ನಿರ್ದೇಶಕರಾಗಿ ಅನುಭವ ಹೊಂದಿದ್ದ ವಿಘ್ನೇಶ್ ಶೇರೆಗಾರ್ ಶಾಂತಿಯನ್ನು ಕಳೆದುಕೊಳ್ಳಬೇಡಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಕಾಲಿಡುತ್ತಿದ್ದಾರೆ. ಇನ್ನು ಗಿರೀಶ್ ಕಾಸರವಳ್ಳಿ ಜೊತೆ ಕೆಲಸ ಮಾಡಿರುವ ಬಾಸುಮ ಮತ್ತು ಕಿರುಚಿತ್ರ ನಿರ್ದೇಶನ ಮಾಡಿರುವ ಶಿವ ಅವರು ನಿರ್ದೇಶನ ಮಾಡುತ್ತಿದ್ದಾರೆ.

    3 Directors Vignesh, Basuma and Shivu come together for Shantiyannu kaledukollabedi movie

    ವಿಘ್ನೇಶ್ ನಿರ್ದೇಶನದ ಮೊದಲ ಭಾಗದ ಕಥೆ ಮಾನವನ ಅಸ್ತಿತ್ವದ ಬಗ್ಗೆ ಹೇಳಲಿದೆಯಂತೆ. ಮನುಷ್ಯ ಸತ್ತ ಮೇಲೂ ಜೀವಂತವಾಗಿರುವ ಬಗ್ಗೆ ಕಥೆ ಹೇಳುತ್ತಾರೆ. ಎರಡನೇ ಭಾಗದ ಕಥೆಯನ್ನು ಬಾಸುಮ ಕೊಡಗು ನಿರ್ದೇಶಿಸುತ್ತಿದ್ದು ಇದರಲ್ಲಿ ತಾಯಿ ಮಗುವಿನ ಸಂಬಂಧದ ಬಗ್ಗೆ ಹೇಳುತ್ತಿದ್ದಾರೆ. ಮೂರನೇ ಕಥೆ, ಶಿವ ನಿರ್ದೇಶನದಲ್ಲಿ ಮೂಡಿಬರುತ್ತಿದ್ದು, ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬರುವ ಹುಡುಗನೊಬ್ಬ ಹ್ಯಾಕರ್ ಆಗಿ ಬದಲಾಗುವ ಕುರಿತಾಗಿದೆ.

    Recommended Video

    ಈ ವರ್ಷದ ಮ್ಯೂಸಿಕಲ್ ಹಿಟ್ ಸಿನಿಮಾ ರಾಬರ್ಟ್ | Filmibeat Kannada

    ನಾಯಕ ನಟನಾಗಿ ಕಾರ್ತಿಕ್ ಹಾಗೂ ನಾಯಕಿಯಾಗಿ ಹರ್ಷಿತಾ ಅಭಿನಯಿಸಿದ್ದು, ನಿರ್ದೇಶಕರಿಂದ ಹಿಡಿದು ಈ ಸಿನಿಮಾದಲ್ಲಿ ಹಿರಿಯ ನಟರಾದ ಜಿ.ಕೆ. ಶಂಕರ್, ರಾಜಣ್ಣ, ಹಾಗೂ ನಟರನ್ನೂ ಸೇರಿ ಎಲ್ಲವೂ ಹೊಸಬರ ತಂಡವೇ ಆಗಿದೆ. ಕಾರ್ತಿಕ್, ಇಂದ್ರಜಿತ್, ಹರ್ಷಿತಾ, ಸಂಗೀತ, ಚಂದ್ರಕಲಾ ಭಟ್,ರಾಕೇಶ್, ಸಂಪತ್ ಶಾಸ್ತ್ರೀ ,ಕಾವ್ಯ ಕೊಡಗು ಅವರ ತಾರಾಂಗಣವಿದೆ.

    English summary
    3 Directors Vignesh, Basuma and Shivu come together for Shantiyannu kaledukollabedi movie.
    Sunday, April 18, 2021, 18:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X