ಈ ವರ್ಷ ತೆರೆಕಂಡ 'ಡಬ್ಬಿಂಗ್' ಚಿತ್ರಗಳು

By Pavithra

ಡಬ್ಬಿಂಗ್ ಬೇಕು-ಬೇಡ ಎಂಬ ವಿಚಾರವಾಗಿ ಸಾಕಷ್ಟು ಚರ್ಚೆಗಳು ಮತ್ತು ಹೋರಾಟಗಳು ನಡೆಯುತ್ತಲೇ ಇದೆ. ಕೋರ್ಟ್ ಡಬ್ಬಿಂಗ್ ವಿರೋಧಿಸುವಂತಿಲ್ಲ ಎಂದು ತೀರ್ಪು ನೀಡಿದ ನಂತರವೂ ಕನ್ನಡ ಪರ ಸಂಘಟನೆಗಳು ಹಾಗೂ ಸಿನಿಮಾ ಕಲಾವಿದರು ಡಬ್ಬಿಂಗ್ ನಮ್ಮ ಸಂಸ್ಕೃತಿ ಅಲ್ಲ ಎಂಬ ವಾದವನ್ನ ಮಾಡಿದ್ದರು. ಇವುಗಳ ಮಧ್ಯೆ ಮೂರು ಚಿತ್ರಗಳು ಕನ್ನಡಕ್ಕೆ ಡಬ್ಬಿಂಗ್ ಆಗಿ ರಿಲೀಸ್ ಕೂಡ ಆಯ್ತು. ಆದ್ರೆ, ಆ ಸಿನಿಮಾಗಳು ಅಂದುಕೊಂಡಷ್ಟು ಮಟ್ಟಿಗೆ ಯಶಸ್ಸು ಕಾಣದೇ ಇದ್ದರು ಡಬ್ಬಿಂಗ್ ಚಿತ್ರ ಮಾತ್ರ ತೆರೆಗೆ ಬಂತು.

ಹಾಲಿವುಡ್ ಸೂಪರ್ ಹಿಟ್ ಸಿನಿಮಾ 'ಫಾಸ್ಟ್ ಅಂಡ್ ಫ್ಯೂರಿಯಸ್-8' ಕನ್ನಡದಲ್ಲಿ 'ವೇಗ ಮತ್ತು ಉದ್ವೇಗ-8' ಎಂಬ ಹೆಸರಿನಲ್ಲಿ ರಿಲೀಸ್ ಆಯ್ತು. 'ಫಾಸ್ಟ್ ಅಂಡ್ ಫ್ಯೂರಿಯಸ್ 8' ಹಾಲಿವುಡ್ ಚಿತ್ರ ಮುಂಬೈನಲ್ಲಿ ಕನ್ನಡಕ್ಕೆ ಡಬ್ ಆಗಿ ಸೆಪ್ಟಂಬರ್ ತಿಂಗಳಲ್ಲಿ 'ವೇಗ ಮತ್ತು ಉದ್ವೇಗ 8' ಎಂಬ ಹೆಸರಿನಲ್ಲಿ ತೆರೆಗೆ ಬಂತು. ಡಬ್ಬಿಂಗ್ ಗುಣಮಟ್ಟ ಸರಿ ಇಲ್ಲದ ಕಾರಣ ಚಿತ್ರ ಯಶಸ್ವಿ ಕಾಣುವಲ್ಲಿ ಹಿಂದೆ ಬಿತ್ತು.

3 dubbing movies released in 2017

ತಮಿಳು ಸ್ಟಾರ್ ನಟ ಅಜಿತ್ ಅಭಿನಯದ 'ಆರಂಭಂ' ಸಿನಿಮಾ ಕನ್ನಡದಲ್ಲಿ 'ಧೀರ' ಎಂಬ ಹೆಸರಿನಲ್ಲಿ ತೆರೆಕಂಡಿತ್ತು. 'ಧೀರ' ಸಿನಿಮಾ ನೋಡಿದ ಅನೇಕರು ಡಬ್ಬಿಂಗ್ ಉತ್ತಮವಾಗಿ ಮಾಡಿದ್ದಾರೆ. ಭೇದ ಭಾವಲ್ಲದೆ ಚಿತ್ರಗಳನ್ನ ನೋಡಿ ಎಂಬ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ರು.

3 dubbing movies released in 2017

ನಿರ್ದೇಶಕ ಗೌತಮ್ ಮೆನನ್ ನಿರ್ದೇಶಿಸಿ, ಅಜಿತ್, ಅನುಷ್ಕಾ ಶೆಟ್ಟಿ, ತ್ರಿಷಾ ಅಭಿನಯಿಸಿದ್ದ 'ಎನ್ನೈ ಅರಿಂಧಾಳ್' ಚಿತ್ರ ಕನ್ನಡದಲ್ಲಿ 'ಸತ್ಯದೇವ್ ಐಪಿಎಸ್' ಆಗಿ ರಿಲೀಸ್ ಆಗಿತ್ತು. ದರ್ಶನ್ ಎಂಟರ್ ಪ್ರೈಸಸ್ ಬ್ಯಾನರ್‌ ನಡಿ ಕೃಷ್ಣಮೂರ್ತಿ ಅವರು ಹೊರತಂದಿರುವ 'ಸತ್ಯದೇವ್ ಐಪಿಎಸ್' ಚಿತ್ರದ ಡಬ್ಬಿಂಗ್ ಗುಣಮಟ್ಟದ ಬಗ್ಗೆ ಪರ ವಿರೋಧ ಚರ್ಚೆಗೆ ಕಾರಣವಾಗಿದ್ರು ಕೂಡ ಡಬ್ಬಿಂಗ್ ಸಿನಿಮಾ ಅಭಿಮಾನಿಗಳು ಚಿತ್ರವನ್ನ ಬಿಡುಗಡೆ ಮಾಡಿದ್ರು. ಆದರೆ ಚಿತ್ರ ಮಾತ್ರ ಸಕ್ಸಸ್ ಕಾಣಲಿಲ್ಲ.

3 dubbing movies released in 2017

ಅದೆಷ್ಟೇ ವಿರೋಧವಿದ್ದರು ಈ ವರ್ಷ ಮೂರು ಡಬ್ಬಿಂಗ್ ಸಿನಿಮಾಗಳು ರಿಲೀಸ್ ಆಯ್ತು. ಕೆ ಜಿ ರಸ್ತೆಯಲ್ಲಿ ಸಿನಿಮಾ ಬಿಡುಗಡೆಯಾಗದೇ ಇದ್ದರೂ ಹೊರ ಜಿಲ್ಲೆಗಳಲ್ಲಿ ಸದ್ದಿಲ್ಲದೆ ಚಿತ್ರ ರಿಲೀಸ್ ಆಗಿತ್ತು.

More from Filmibeat

English summary
3 dubbing movies were released in 2017. Even though the film did not succeed in expectation, only three films would be screened.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X