»   » ಕೇಳುಗರ ಮನ ಗೆದ್ದ '3 ಗಂಟೆ 30 ದಿನ 30 ಸೆಕೆಂಡ್' ಹಾಡುಗಳು

ಕೇಳುಗರ ಮನ ಗೆದ್ದ '3 ಗಂಟೆ 30 ದಿನ 30 ಸೆಕೆಂಡ್' ಹಾಡುಗಳು

Posted By:
Subscribe to Filmibeat Kannada

ಒಂದು ಸಿನಿಮಾದ ಗೆಲುವಿನಲ್ಲಿ ಹಾಡುಗಳ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಎಷ್ಟೊ ಸಿನಿಮಾಗಳು ಒಳ್ಳೆಯ ಹಾಡುಗಳಿಂದ ಗೆದ್ದು ಬಿಟ್ಟಿದೆ. ಸದ್ಯ ಕನ್ನಡದಲ್ಲಿ ಬಂದಿರುವ ಹಾಡುಗಳ ಪೈಕಿ '3 ಗಂಟೆ 30 ದಿನ 30 ಸೆಕೆಂಡ್' ಹಾಡುಗಳು ಎಲ್ಲರ ಮನ ಗೆದ್ದಿದೆ.

'3 ಗಂಟೆ 30 ದಿನ 30 ಸೆಕೆಂಡ್' ಸಿನಿಮಾ ಇದೇ ತಿಂಗಳು 19 ಕ್ಕೆ ರಾಜ್ಯಾದಂತ್ಯ ರಿಲೀಸ್ ಆಗುತ್ತದೆ. ಅದಕ್ಕೂ ಮುಂಚೆ ಚಿತ್ರದ ಹಾಡುಗಳು ಪ್ರೇಕ್ಷಕರಿಗೆ ಹತ್ತಿರವಾಗಿ ಬಿಟ್ಟಿದೆ. ಸಿನಿಮಾಗೆ ವಿ.ಶ್ರೀಧರ್ ಸಂಭ್ರಮ್ ಸಂಗೀತ ನೀಡಿದ್ದು, ಎಲ್ಲ ಹಾಡುಗಳು ಕೇಳುಗರಿಗೆ ಹೊಸ ಫೀಲ್ ನೀಡುತ್ತಿದೆ.

ಚಾನಲ್ ಮಾಲಿಕರ ಮಗಳು ಮತ್ತು ಲಾಯಲ್ ಇಬ್ಬರ ಪ್ರೇಮಕತೆಯ ಚಿತ್ರ ಇದು

ಸಿನಿಮಾದಲ್ಲಿ ಒಟ್ಟು 6 ಹಾಡುಗಳಿವೆ. ಎರಡು ಹಾಡನ್ನು ಜಯಂತ್ ಕಾಯ್ಕಿಣಿ ಮತ್ತು ಮೂರು ಹಾಡನ್ನು ಮಧುಸೂದನ್‌ ಬರೆದಿದ್ದಾರೆ. ಜೊತೆಗೆ ವಿಜಯ್ ಪ್ರಕಾಶ್, ಚಂದನ್ ಶೆಟ್ಟಿ, ಟಿಪ್ಪು ಮತ್ತು ವಿ.ಶ್ರೀಧರ್ ಸಂಭ್ರಮ್ ಹಾಡುನ್ನು ಹಾಡಿದ್ದಾರೆ. ಎಲ್ಲ್ ಹಾಡುಗಳು ಸಹ ಒಂದಕ್ಕಿಂತ ಒಂದು ವಿಭಿನ್ನವಾಗಿದೆ. ಚಿತ್ರದ ನಾಯಕ ನಾಯಕಿ ಆಗಿ ಅರು ಗೌಡ ಮತ್ತು ಕಾವ್ಯ ಶೆಟ್ಟಿ ಕಾಣಿಸಿಕೊಂಡಿದ್ದಾರೆ.

3 gante 30 dina 30 second kannada movie songs got a positive response

'3 ಗಂಟೆ 30 ದಿನ 30 ಸೆಕೆಂಡ್' ಚಿತ್ರವನ್ನು ಪದ್ಮಶಾಲಿ ನಿರ್ಮಾಣ ಮಾಡಿದ್ದಾರೆ. ಮಧುಸೂದನ್‌ ಅವರು ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಶ್ರೀನಿವಾಸ್ ರಾಮಯ್ಯ ಈ ಸಿನಿಮಾಕ್ಕೆ ಕ್ಯಾಮೆರಾ ಹಿಡಿದಿದ್ದು, ಸಿನಿಮಾ ಜನವರಿ 19ಕ್ಕೆ ರಿಲೀಸ್ ಆಗಲಿದೆ.

English summary
kannada actor arun gowda and actress kavya shetty starrer '3 gante 30 dina 30 second' movie will releasing on january 19th. The film songs got a positive response.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X