»   » ಚಾನಲ್ ಮಾಲಿಕರ ಮಗಳು ಮತ್ತು ಲಾಯಲ್ ಇಬ್ಬರ ಪ್ರೇಮಕತೆಯ ಚಿತ್ರ ಇದು

ಚಾನಲ್ ಮಾಲಿಕರ ಮಗಳು ಮತ್ತು ಲಾಯಲ್ ಇಬ್ಬರ ಪ್ರೇಮಕತೆಯ ಚಿತ್ರ ಇದು

Posted By:
Subscribe to Filmibeat Kannada

ಕನ್ನಡದಲ್ಲಿ ವಿಭಿನ್ನ ಕಥಾವಸ್ತು ಇಟ್ಟುಕೊಂಡ ಸಿನಿಮಾಗಳು ಬರುವುದು ಹೆಚ್ಚಾಗುತ್ತಿದೆ. ಇದೇ ಸಮಯದಲ್ಲಿ ಒಬ್ಬ ಟಿವಿ ಚಾನಲ್ ಮಾಲಿಕನ ಮಗಳು ಮತ್ತು ಒಬ್ಬ ಲಾಯರ್ ಇವರಿಬ್ಬರ ಪ್ರೇಮಕಥೆಯನ್ನು ಹೇಳುವ ಒಂದು ಸಿನಿಮಾ ಕನ್ನಡದಲ್ಲಿ ಬರುತ್ತಿದೆ.

'3 ಗಂಟೆ 30 ದಿನ 30 ಸೆಕೆಂಡ್' ಈ ಸಿನಿಮಾ ಈಗಾಗಲೇ ಸದ್ದು ಮಾಡಿದೆ. ನಟ ಅರು ಗೌಡ ಮತ್ತು ಕಾವ್ಯ ಶೆಟ್ಟಿ ಚಿತ್ರದ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕಾವ್ಯ ಶೆಟ್ಟಿ ಟಿವಿ ಚಾನಲ್ ಮಾಲಿಕನ ಮಗಳ ಪಾತ್ರದಲ್ಲಿ ಮತ್ತು ವಕೀಲನಾಗಿ ಅರು ಗೌಡ ನಟಿಸಿದ್ದಾರೆ. ಇಬ್ಬರ ಜೋಡಿ ತೆರೆ ಮೇಲೆ ನೋಡುವುದಕ್ಕೆ ಮುದ್ದಾಗಿ ಕಾಣುತ್ತದೆ.

ಜನವರಿ 19ರಂದು ತೆರೆಕಾಣ್ತಿದೆ '3 ಗಂಟೆ 30 ದಿನ 30 ಸೆಕೆಂಡ್'

ಈ ಹಿಂದೆ 'ಮುದ್ದು ಮನಸೇ' ಚಿತ್ರದಲ್ಲಿ ಅರು ಗೌಡ ಗಮನ ಸೆಳೆದಿದ್ದರೆ, 'ಇಷ್ಟಕಾಮ್ಯ' ಚಿತ್ರದಲ್ಲಿ ಕಾವ್ಯಶೆಟ್ಟಿ ಇಷ್ಟ ಆಗಿದ್ದರು. ಇನ್ನು ಈ ಸಿನಿಮಾದಲ್ಲಿ ಇವರಿಬ್ಬರ ಪ್ರೇಮಕಥೆ ವಿಧಿಯನ್ನು ಮೀರಿದ ವಿಶಿಷ್ಟ ಪ್ರೇಮಕಥೆಯಂತೆ. ಅರು ಗೌಡ ಮತ್ತು ಕಾವ್ಯ ಶೆಟ್ಟಿ ಜೊತೆಗೆ ದೊಡ್ಡ ತಾರ ಬಳಗವೇ ಚಿತ್ರದಲ್ಲಿದೆ. 'ಎಡಕಲ್ಲು ಗುಡ್ಡದ ಮೇಲೆ' ಖ್ಯಾತಿಯ ಚಂದ್ರಶೇಖರ್, ಡೈನಾಮಿಕ್ ಹೀರೋ ದೇವರಾಜ್, ಸುಧಾರಾಣಿ, ಸುಂದರ್, ಯಮುನಾ, ಜಯಲಕ್ಷ್ಮಿ ಪಾಟೀಲ್, ಟಿ.ಎಸ್‌. ನಾಗಾಭರಣ, ಅನಂತ ವೇಲು, ರಮೇಶ್‌ ಭಟ್‌, ಶ್ರೀನಾಥ್ ವಸಿಷ್ಠ, ಹನುಮಂತೇ ಗೌಡ, ಯತಿರಾಜ್ ಸೇರಿದಂತೆ ಮತ್ತಿತರರು ಅಭಿನಯಿಸಿದ್ದಾರೆ.

3 gante 30 dina 30 second movie releasing on this month

ಕೆಲ ವರ್ಷಗಳಿಂದ ಜಾಹೀರಾತು ಕ್ಷೇತ್ರದಲ್ಲಿ ಕೆಲಸ ಮಾಡಿರುವ ಮಧುಸೂದನ್‌ ಅವರು ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಶ್ರೀಧರ್ ವಿ ಸಂಭ್ರಮ್ ಅವರ ಸಂಗೀತ ಚಿತ್ರಕ್ಕಿದ್ದು, ಒಟ್ಟು 6 ಹಾಡುಗಳಿವೆ. ಈಗಾಗಲೇ ಚಂದನ್ ಶೆಟ್ಟಿ ಹಾಡಿರುವ ಟೈಟಲ್ ಹಾಡು ಯೂಟ್ಯೂಬ್ ನಲ್ಲಿ ಸಖತ್ ಸೌಂಡ್ ಮಾಡ್ತಿದೆ. ಇನ್ನುಳಿದಂತೆ ಶ್ರೀನಿವಾಸ್ ರಾಮಯ್ಯ ಈ ಸಿನಿಮಾಕ್ಕೆ ಕ್ಯಾಮೆರಾ ಹಿಡಿದಿದ್ದು, ಚಂದ್ರಶೇಖರ್ ಆರ್. ಪದ್ಮಶಾಲಿ ನಿರ್ಮಾಣ ಮಾಡಿದ್ದಾರೆ. ಅಂದಹಾಗೆ, '3 ಗಂಟೆ 30 ದಿನ 30 ಸೆಕೆಂಡ್' ಸಿನಿಮಾ ಜನವರಿ 19ಕ್ಕೆ ರಿಲೀಸ್ ಆಗಲಿದೆ.

English summary
kannada actor arun gowda and actress kavya shetty starrer '3 gante 30 dina 30 second' movie will releasing on january 19th. the film directed by madhusudhan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X