For Quick Alerts
  ALLOW NOTIFICATIONS  
  For Daily Alerts

  ಮಲ್ಟಿಫ್ಲೆಕ್ಸ್ ನಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ '3 ಗಂಟೆ 30 ದಿನ 30 ಸೆಕೆಂಡ್'

  By Bharath Kumar
  |

  ಅರುಣ್ ಗೌಡ ಮತ್ತು ಕಾವ್ಯ ಶೆಟ್ಟಿ ಅಭಿನಯದ '3 ಗಂಟೆ 30 ದಿನ 30 ಸೆಕೆಂಡ್' ಚಿತ್ರ ರಾಜ್ಯಾದ್ಯಂತ ಅತ್ಯುತ್ತಮ ಪ್ರದರ್ಶನ ಕಾಣುತ್ತಿದೆ. ಅದರಲ್ಲೂ ಮಲ್ಟಿಫ್ಲೆಕ್ಸ್ ಗಳಲ್ಲಿ ಚಿತ್ರಕ್ಕೆ ಭರ್ಜರಿ ರೆಸ್ ಪಾನ್ಸ್ ಸಿಕ್ಕಿರುವುದು ವಿಶೇಷ.

  ಫೋರಂ, ಸಿನಿಪೊಲೀಸ್, ಮಂತ್ರಿ, ಐನಾಕ್ಸ್, ಸೇರಿದಂತೆ ಹಲವು ಚಿತ್ರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಜನವರಿ 19 ರಂದು ಬಿಡುಗಡೆಯಾಗಿದ್ದು ಈ ಚಿತ್ರ ಮೊದಲ ಮೂರು ದಿನಗಳು ಸಕ್ಸಸ್ ಫುಲ್ ಆಗಿ ಪ್ರದರ್ಶನವಾಗಿದೆ. ರಾಜ್ಯಾದ್ಯಂತ ಸುಮಾರು 80ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದ ಈ ಸಿನಿಮಾ ವಿದೇಶದಲ್ಲೂ ರಿಲೀಸ್ ಆಗಿದೆ.

  '3 ಗಂಟೆ 30 ದಿನ 30 ಸೆಕೆಂಡ್' ಇದೊಂದು ಲವ್ ಸ್ಟೋರಿಯಾಗಿದ್ದು, ಎಲ್ಲ ಕಮರ್ಷಿಯಲ್ ಎಲಿಮೆಂಟ್ಸ್ ಗಳು ಈ ಚಿತ್ರದಲ್ಲಿದೆ. ಚಾನಲ್ ಮಾಲೀಕನ ಮಗಳು ಮತ್ತು ವಕೀಲನ ನಡುವಿನ ಥ್ರಿಲ್ಲಿಂಗ್ ಪ್ರೇಮ ಕಥೆಯಾಗಿದೆ.

  ವಿಮರ್ಶೆ: ಸತ್ಯ-ಮಿಥ್ಯಗಳೊಂದಿಗೆ '30 ದಿನ'ದ ಪ್ರೀತಿಯ ಪಯಣ

  ಜಿ.ಕೆ ಮಧುಸೂಧನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಚಂದ್ರಶೇಖರ್ ಪದ್ಮಶಾಲಿ ನಿರ್ಮಾಣ ಮಾಡಿದ್ದಾರೆ. ಶ್ರೀಧರ್ ವಿ ಸಂಭ್ರಮ್ ಚಿತ್ರಕ್ಕೆ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ ದೇವರಾಜ್, ಸುಧಾರಾಣಿ, ಎಡಕಲ್ಲು ಚಂದ್ರಶೇಖರ್, ಸುಂದರ್, ಯಮುನಾ, ಯತಿರಾಜ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

  English summary
  kannada movie 3 gante 30 dina 30 second is successfully running in multiplexes. the movie has released on january 19th and directed by madhusudhan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X